News Kannada
Friday, December 02 2022

ಸಾಂಡಲ್ ವುಡ್

ವೈವಾಹಿಕ ಜೀವನಕ್ಕೆ ಕಾಲಿಟ್ಟ ರತ್ನನ್ ಪ್ರಪಂಚ​ ಬೆಡಗಿ ರೆಬಾ ಮೊನಿಕಾ ಜಾನ್

Photo Credit : News Kannada

ಬೆಂಗಳೂರು: ನಟ ಡಾಲಿ ಧನಂಜಯ್​ ಅಭಿನಯದ ‘ರತ್ನನ್​ ಪ್ರಪಂಚ’ ಚಿತ್ರದಲ್ಲಿ ನಾಯಕಿ ಪಾತ್ರ ನಿರ್ವಹಿಸಿದ್ದ ನಟಿ ರೆಬಾ ಮೊನಿಕಾ ಜಾನ್​ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮದುವೆ ಕ್ರಿಶ್ಚಿಯನ್​ ಸಂಪ್ರದಾಯದಂತೆ ಕುಟುಂಬ, ಸ್ನೇಹಿತರು ಹಾಗೂ ಬಂಧುಬಳಗದವರ ಸಮ್ಮುಖದಲ್ಲಿ ಬೆಂಗಳೂರಿನ ಚರ್ಚ್​ ಒಂದರಲ್ಲಿ ಸರಳವಾಗಿ ನೆರವೇರಿದೆ.

ತಮ್ಮ ಬಾಯ್​ಫ್ರೆಂಡ್​ ಜೊಮನ್​ ಜೋಸೆಫ್​ ಜತೆ ಹೊಸ ಬಾಳ ಪಯಣವನ್ನು ರೆಬಾ ಆರಂಭಿಸಿದ್ದಾರೆ.ಸುಮಾರು ಒಂದು ವರ್ಷಗಳ ಕಾಲ ಡೇಟಿಂಗ್​-ಮೀಟಿಂಗ್​ ನಡೆಸಿದ್ದ ಜೋಡಿ, ಇದೀಗ ವೈವಾಹಿಕ ಬಂಧನದ ಮೂಲಕ ಜೀವನದ ಹೊಸ ಇನ್ನಿಂಗ್ಸ್​  ಒಟ್ಟಿಗೆ ಪ್ರಾರಂಭಿಸಿದ್ದಾರೆ.

ಸಿನಿಮಾ ವಿಚಾರಕ್ಕೆ ಬಂದರೆ, ರೆಬಾ ನಿವಿನ್​ ಪೌಲಿ ಅಭಿನಯದ ‘ಜಾಕೊಬಿಂಟೆ ಸ್ವರ್ಗರಾಜ್ಯಂ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಸೂಪರ್​ ಸ್ಟಾರ್​ ವಿಜಯ್​ ಅಭಿನಯದ ಬಿಗಿಲ್​ ಚಿತ್ರದಲ್ಲಿ ನಟಿಸುವ ಮೂಲಕ ಸಾಕಷ್ಟು ಖ್ಯಾತಿ ಪಡೆದುಕೊಂಡರು. ಕೊನೆಯದಾಗಿ ಥೊವಿನೋ ಅಭಿನಯದ ಫಾರೆನ್ಸಿಕ್​ ಮತ್ತು ಧನಂಜಯ್​ ಅಭಿನಯದ ರತ್ನನ್​ ಪ್ರಪಂಚ ಚಿತ್ರದಲ್ಲಿ ರೆಬಾ ಕಾಣಿಸಿಕೊಂಡಿದ್ದಾರೆ.

See also  ಮಂಗಳೂರಿನ ಹುಡುಗನ ‘ಮ್ಯಾನ್ ಆಫ್ ದಿ ಮ್ಯಾಚ್’ ಶೀಘ್ರ ಬಿಡುಗಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12795
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು