News Kannada
Wednesday, October 05 2022

ಸಾಂಡಲ್ ವುಡ್

“ಭೀರ್ಯ” ಬದಲಾವಣೆರ ಬೊಳಿ… ಏಪ್ರಿಲ್’ನಲ್ಲಿ ಬೆಳ್ಳಿ ತೆರೆಗೆ. - 1 min read

Photo Credit : News Kannada

ಬೆಂಗಳೂರು : ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ ತೆರೆಗೆ ಸಿದ್ದಗೊಂಡ ಕೊಡವ ಚಲನಚಿತ್ರವೊಂದಕ್ಕೆ ಹೆಸರಿಟ್ಟ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಎಂ.ಟಿ.ನಾಣಯ್ಯ

ಕೆಲವೊಂದು ಸಿನೆಮಾಗಳು ಭಯಂಕರ ಸದ್ದು ಮಾಡಿ, ಮಾಧ್ಯಮಗಳಲ್ಲಿ ಪ್ರಚಾರ ಪಡೆದುಕೊಂಡು ಕೊನೆಗೆ ಬಿಡುಗಡೆಯಾಗದೆ ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾದದ್ದು ಅದೆಷ್ಟೋ ಇದೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಚಿತ್ರೀಕರಣ ನಡೆದ್ದರೂ ಚಿತ್ರದ ಹೆಸರನ್ನು ಎಲ್ಲಿಯೂ ಬಿಟ್ಟುಕೊಡದೆ ಸಂಪೂರ್ಣ ಚಿತ್ರೀಕರಣ ಮುಗಿಸಿ, ಇನ್ನೇನೂ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳುವ ಹಂತದಲ್ಲಿರುವಾಗ ತನ್ನ “ಟೈಟಲ್” ಬಿಡುಗಡೆ ಮಾಡುವುದರ ಮೂಲಕ ಕೊಡವ ಭಾಷೆಯ ಸಿನೆಮಾ ಕ್ಷೇತ್ರದಲ್ಲಿ ಹೊಸತನಕ್ಕೆ ನಾಂದಿ ಹಾಡಿದೆ ಚಿತ್ರ ತಂಡ.

ಹೌದು… ಸಂಪೂರ್ಣ ಚಿತ್ರೀಕರಣ ಮುಗಿಸಿದ ಕೊಡವ ಸಿನೆಮಾವೊಂದು ಈ ರೀತಿ ಸದ್ದಿಲ್ಲದೆ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಗೊಳ್ಳಲು ಎಲ್ಲಾ ತಯಾರಿ ನಡೆಸಿಕೊಳ್ಳುತ್ತಿದೆ. “ತೀತೀರ ಸಿನಿ ಕ್ರಿಯೇಷನ್” ನಿರ್ಮಾಣದಲ್ಲಿ ಬಲ್ಯಮೀದೆರೀರ ಆರ್ಯನ್ ಮುದ್ದಪ್ಪ ನಿರ್ದೇಶನದಲ್ಲಿ, ಉದ್ಯಮಿ ತೀತೀರ ಶರ್ಮಿಲಿ ಅಪ್ಪಚ್ಚು ಚಿತ್ರಕ್ಕೆ ಸಂಪೂರ್ಣ ಹಣ ಹೂಡಿಕೆ ಮಾಡಿದ್ದು ಚಿತ್ರ ನಿರ್ಮಾಣದ ಜವಬ್ದಾರಿ ಹೊತ್ತುಕೊಂಡಿದ್ದಾರೆ. ಹಿರಿಯ ಹಾಗೂ ಕಿರಿಯ ಕಲಾವಿದರನೊಳಗೊಂಡ ಈ ಸಿನೆಮಾದ ಹೆಸರನ್ನು ಬೆಂಗಳೂರು ಕೊಡವ ಸಮಾಜ ಅಧ್ಯಕ್ಷ ಹಾಗೂ ಹೈಕೋರ್ಟ್ ಖ್ಯಾತ ವಕೀಲರಾದ ಮುಕ್ಕಾಟೀರ ಟಿ ನಾಣಯ್ಯ ಟೈಟಲ್ ಕಾರ್ಡ್ ಬಿಡುಗಡೆ ಮಾಡುವ ಮೂಲಕ “ಭೀರ್ಯ” ಎಂದು ಸಿನೆಮಾ ಹೆಸರನ್ನು ಲೋಕಾರ್ಪಣೆ ಮಾಡಿದ್ದರು.

ವೀರ-ಶೌರ್ಯ, ಗತ್ತು-ಗಾಂಭೀರ್ಯಕ್ಕೆ ಹೆಸರಾದ ಕೊಡವ ಜನಾಂಗದಲ್ಲಿ “ಭೀರ್ಯ” ಎಂಬ ಹೆಸರೇ ಇದೀಗ ಸಿನಿ ವಲಯದಲ್ಲಿ ಹಾಗೂ ಕೊಡಗಿನಲ್ಲಿ ಸಂಚಲನ ಮೂಡಿಸಿದೆ. “ಭೀರ್ಯ” ಬದಲಾವಣೆರ ಬೊಳಿ… ಎಂಬ ಶಿರ್ಷಿಕೆಯಡಿ ಕೊಡವ ಭಾಷೆಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಚಿತ್ರೀಕರಣದ ಭಾಗ ಸಂಪೂರ್ಣ ಮುಗಿದಿದ್ದು ಡಬ್ಬಿಂಗ್ ಹಾಗೂ ಇತರ ಒಂದಷ್ಟು ಕೆಲಸಗಳು ಮಾತ್ರ ಬಾಕಿ ಇದೆ ಎಂದು ಚಿತ್ರದ ನಿರ್ಮಾಪಕಿ ತೀತೀರ ಶರ್ಮಿಲಿ ಅಪ್ಪಚ್ಚು ತಿಳಿಸಿದ್ದಾರೆ. ಖ್ಯಾತ ವಕೀಲ ಹಾಗೂ ಬೆಂಗಳೂರು ಕೊಡವ ಸಮಾಜ ಅಧ್ಯಕ್ಷ ಮುಕ್ಕಾಟೀರ ಟಿ ನಾಣಯ್ಯ ಟೈಟಲ್ ಕಾರ್ಡ್ ಬಿಡುಗಡೆ ಮಾಡುವ ಮೂಲಕ ಸಿನೆಮಾಕ್ಕೆ ಶುಭ ಕೋರಿ ಕೊಡವ ಭಾಷೆಯಲ್ಲಿ ಇನ್ನೂ ಹೆಚ್ಚೆಚ್ಚು ಸಿನೆಮಾಗಳು ಬರಬೇಕು, ಸಿನೆಮಾ ಎನ್ನುವುದು ಒಂದು ಭಾಷೆಯ ಬೆಳವಣಿಗೆಗೆ ಸಹಕಾರಿಯಾಗುವುದಲ್ಲದೆ ಒಂದು ಉತ್ತಮ ಸಂದೇಶಗಳನ್ನು ಜನರಿಗೆ ನೇರವಾಗಿ ತಲುಪಿಸಲು ಉತ್ತಮ ಮಾಧ್ಯಮವಾಗಿದೆ. ಹಾಗೇ ಕೇವಲ ಹೆಸರಿಗಷ್ಟೆ ಸಿನೆಮಾವನ್ನು ಮಾಡದೆ ಸದಭಿರುಚಿಯ ಹಾಗೂ ಉತ್ತಮ ಸಂದೇಶ ಸಾರುವ ಸಿನೆಮಾಗಳು ಬರಬೇಕಿದೆ ಎಂದು ಅವರು ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಬಲ್ಯಮೀದೆರೀರ ಆರ್ಯನ್ ಮುದ್ದಪ್ಪ, ಚಿತ್ರದ ಖಳನಾಯಕ ನಟ ಉಡುಪಿಯ ರಾಜ್ ಚರಣ್ ಉಪಸ್ಥಿತರಿದ್ದರು.

See also  ‘100 ಸಿನಿಮಾ ಬಗ್ಗೆ ಸುಧಾ ಮೂರ್ತಿ ಮೆಚ್ಚುಗೆ : ಸಿನಿಮಾ ಬಗ್ಗೆ ಹೇಳಿದ್ದೇನು ಗೊತ್ತಾ..?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1620
Coovercolly Indresh

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು