News Kannada
Tuesday, March 28 2023

ಸಾಂಡಲ್ ವುಡ್

ಪ್ರೇಮ ನಿವೇದನೆ ಮಾಡಬೇಕಾ: ಮ್ಯಾಟ್ನಿ ಟೀಸರ್ ನೋಡಿದ್ರೆ ಐಡಿಯಾ ಸಿಗೋದು ಗ್ಯಾರಂಟಿ

Photo Credit : News Kannada

ಪ್ರೇಮಿಗಳ ದಿನಕ್ಕೆ ಎಲ್ಲಾ ಪ್ರೇಮಿಗಳು ಕಾತುರದಿಂದ ಕಾಯ್ತಾ ಇರ್ತಾರೆ. ತಮ್ಮ ಪ್ರೇಮಿಗಳಿಗೆ ಸ್ಪೆಷಲ್ ಆಗಿ ಏನಾದ್ರೂ ಹೇಳ್ಬೇಕಲ್ಲ ಅನ್ನೋದು ಎಲ್ಲರ ಬಯಕೆ. ಆದ್ರೆ ಅಂದುಕೊಂಡ ಕೂಡಲೇ ಆ ಸಾಲುಗಳು ಸಿಗ್ಬೇಕಲ್ಲ. ಅದಕ್ಕೆ ಅಂತಾನೆ ಮ್ಯಾಟ್ನಿ ಸಿನಿಮಾದಿಂದ ಸ್ಪೆಷಲ್ ಆಗಿ ಪ್ರೀತಿ ಪಾತ್ರರಿಗೆ ಗಿಫ್ಟ್ ನೀಡಿದೆ.

ಪ್ರೇಮ ನಿವೇದನೆಯನ್ನು ಹೊತ್ತ ಮ್ಯಾಟ್ನಿ ಟೀಸರ್ ಬಿಡುಗಡೆಯಾಗಿದೆ. ಪ್ರೇಮಿಗಳ ದಿನಕ್ಕೆ ಇದೊಂದು ಸ್ಪೆಷಲ್ ಗಿಫ್ಟ್ ಅಂತಾನೆ ಹೇಳಬಹುದು. ಟೀಸರ್ ಸಖತ್ತಾಗಿದ್ದು, ಜನ ಮೆಚ್ಚುಗೆ ಪಡೆಯುತ್ತಿದೆ. ಈ ಸಿನಿಮಾದಲ್ಲಿ ರಚಿತಾ ರಾಮ್ ಹಾಗೂ ನೀನಾಸಂ ಸತೀಶ್ ನಟಿಸಿದ್ದಾರೆ. ಈಗಾಗಲೆ ಈ ಜೋಡಿ ಅಯೋಗ್ಯ ಸಿನಿಮಾ ಮಾಡಿ ಯಶಸ್ಸು ಗಳಿಸಿದೆ. ಅದೇ ಸಕ್ಸಸ್ ಖುಷಿಯಲ್ಲಿ ಮತ್ತೆ ಒಂದಾಗಿದ್ದಾರೆ. ರೋಮ್ಯಾನ್ಸ್ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿರುವ ಚಿತ್ರದಲ್ಲಿ ರಚಿತಾ-ಸತೀಶ್ ಅವರ ಪ್ರೇಮಾಂಕುರ ಎದ್ದು ಕಾಣುತ್ತಿದೆ.

ಮನೋಹರ್ ಕಾಂಪಲ್ಲಿ ಮೊದಲ ಬಾರಿಗೆ ಮ್ಯಾಟ್ನಿಯಿಂದ ಡೈರೆಕ್ಟರ್ ಆಗಿದ್ದಾರೆ. ಸುಧಾಕರ್ ರಾಜ್ ಛಾಯಾಗ್ರಹಣವಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತವಿದೆ. ಎಫ್ 3 ಪ್ರೊಡಕ್ಷನ್ ಬ್ಯಾನರ್ ನಡಿ ಪಾರ್ವತಿ ಎಸ್ ಗೌಡ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅದಿತಿ ಪ್ರಭುದೇವ, ಶಿವರಾಜ್ ಕೆ ಆರ್ ಪೇಟೆ ಸಿನಿಮಾ ತಂಡಲ್ಲಿದ್ದಾರೆ.

See also  ಕಾಂತರ ನನ್ನ ಸಿನಿ ಜೀವನದಲ್ಲಿ ಉತ್ತಮ ಚಿತ್ರವಾಗಲಿದೆ - ಸಪ್ತಮಿ ಗೌಡ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

6528

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು