News Kannada
Sunday, September 25 2022

ಸಾಂಡಲ್ ವುಡ್

ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ‘ಚೇಸ್’ ಚಿತ್ರದಿಂದ ಸಿಕ್ತು ಭರ್ಜರಿ ಗಿಫ್ಟ್ - 1 min read

Photo Credit : News Kannada

ಪೋಸ್ಟರ್ ಹಾಗೂ ಟೀಸರ್ ಮೂಲಕ ಸದ್ದು ಮಾಡ್ತಿರೋ ರಾಧಿಕಾ ನಾರಾಯಣ್ ಅಭಿನಯದ ಚೇಸ್ ಸಿನೆಮಾದಿಂದ ಲಿರಿಕಲ್ ವೀಡಿಯೋ ಸಾಂಗ್ ರಿಲೀಸ್ ಆಗಿದ್ದು ಬಿಡುಗಡೆಗೆ ಸಜ್ಜಾಗಿರೋ ಚೇಸ್ ಮೇಲೆ ಅಭಿಮಾನಿಗಳು ಕಣ್ಣಿಡುವಂತಾಗಿದೆ. ಹೌದು, ಟೈಟಲ್ ನಲ್ಲೇ ಕುತೂಹಲ ಹುಟ್ಟಿಸೋ ಈ ಚೇಸ್, ವಿಲೋಕ್ ಶೆಟ್ಟಿ ನಿರ್ದೇಶಿಸಿರೋ ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರದ ಸಿನೆಮಾ.

‘ಹುಡುಗಿ ಇವಳು ತರಲೆ,ಆದ್ರೆ ಇಷ್ಟ ಆಗ್ತಾಳೆ ‘ ಅಂತ ಶುರುವಾಗೋ ಕ್ಯೂಟ್ ಕ್ಯೂಟ್ ಸಾಲುಗಳ ಈ ಹಾಡಿಗೆ ಉಮೇಶ್ ಪಿಲಿಕುಡೆಲು ಸಾಹಿತ್ಯ, ಬೆನ್ನಿ ದಯಾಳ್ ಧ್ವನಿ, ಕಾರ್ತಿಕ್ ಆಚಾರ್ಯ ಸಂಗೀತ ಸಂಯೋಜನೆ ಇದೆ. ಬಹಳ ಸುಂದರವಾಗಿ ಮೂಡಿಬಂದಿರೋ ಈ ಸಾಂಗ್ ಪ್ರೇಮಿಗಳ ದಿನದಂದು ಚೇಸ್ ಚಿತ್ರದಿಂದ ಸಿಕ್ಕ ಒಂದೊಳ್ಳೆ ಟ್ರೀಟ್ ಆಗಿದೆ.

ಸಿಂಪ್ಲಿಫನ್ ಮೀಡಿಯಾ ಫ್ರೈವೇಟ್ ಲಿಮಿಟೆಡ್ ಬ್ಯಾನರ್ ನಲ್ಲಿ ತಯಾರಾದ ಚೇಸ್ ಗೆ ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ ಮತ್ತು ಪ್ರಶಾಂತ್ ಶೆಟ್ಟಿ ನಿರ್ಮಾಪಕರು.ಕಾರ್ತಿಕ್ ಆಚಾರ್ಯ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ತಾರಾಬಳಗದಲ್ಲಿ ರಾಧಿಕಾ ಚೇತನ್, ಅವಿನಾಶ್, ಸುಶಾಂತ್ ಪೂಜಾರಿ, ಶೀತಲ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ರಾಜೇಶ್ ನಟರಂಗ, ಪ್ರಮೋದ್ ಶೆಟ್ಟಿ, ಅರವಿಂದ್ ಬೋಲಾರ್, ರೆಹಮಾನ್ ಹಾಸನ್, ಸುಧಾ ಬೆಳವಾಡಿ,ವೀಣಾ ಸುಂದರ್, ಸುಂದರ್, ಉಷಾ ಭಂಡಾರಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

See also  ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ ಅಪ್ಡೇಟ್: ಒಟಿಟಿಯ 100 ಕೋಟಿ ಆಫರ್ ರಿಜೆಕ್ಟ್!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

6528
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು