ದಶಕಗಳ ಕಾಲ ಕನ್ನಡ ಸಿನಿಮಾ ರಂಗದಲ್ಲಿ ಮಹಾರಾಣಿಯಂತೆ ಮೆರೆದು ಸದ್ದಿಲ್ಲದೆ ಸಿನಿ ರಂಗದಿಂದ ಹಿಂದೆ ಸರಿದ ಸ್ಯಾಂಡಲ್ವುಡ್ ಕ್ವೀನ್ ನಟಿ ರಮ್ಯಾ ಅವರು ಮತ್ತೆ ಕನ್ನಡಿಗರಿಗೆ ಸಿಹಿ ಸುದ್ದಿ ನೀಡಲು ಸಿದ್ಧರಾಗುತ್ತಿದ್ದಾರೆ.
ಸಿನಿಮಾ ರಂಗದಿಂದ ದೂರ ಸರಿದು ರಾಜಕೀಯಕ್ಕೆ ತೆರಳಿದ್ದ ರಮ್ಯಾ , ಬಳಿಕ ರಾಜ್ಯ- ದೇಶ ರಾಜಕಾರಣದಲ್ಲಿ ಬ್ಯುಸಿ ಆದರು.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ ಆಗಿರುವ ರಮ್ಯಾ ಸದಾ ನಾನಾ ವಿಚಾರದಲ್ಲಿ ಸುದ್ದಿಯಲ್ಲಿರುತ್ತಾರೆ.
ಇದರ ನಡುವೆ ಸಾಮಾಜಿಕ ಜಾಲಾಟದದಲ್ಲಿ ಮಾತೊಂದು ಅಭಿಮಾನಿಗಳು ಖುಷಿ ಪಡುವ ಸುದ್ದಿಯೊಂದು ಹರಿದಾಡುತ್ತಿದ್ದು, ನಟಿ ಮತ್ತೆ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ ಎಂಬಗಾಂಧಿನಗರದ ಗಲ್ಲಿಯಲ್ಲಿ ಗಾಳಿ ಸುದ್ದಿಗಳು ಕೇಳಲು ಶುರುವಾಗಿದೆ.
ಈ ವಿಚಾರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ ರಮ್ಯಾ , ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್‌ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
‘ನಾನು ಮತ್ತೆ ಸಿನಿಮಾ ರಂಗಕ್ಕೆ ಕಮ್‍ಬ್ಯಾಕ್ ಮಾಡುತ್ತಿದ್ದೇನೆ ಎಂಬ ಊಹಾಪೋಹಗಳು ಹರಿದಾಡುತ್ತಿರುವುದನ್ನು ಕೇಳಿದ್ದೇನೆ. ಆದರೆ, ಈ ಬಗ್ಗೆ ಎಲ್ಲೂ ಕೂಡ ವರದಿಯಾಗಿಲ್ಲ. ನಾನು ಕಳೆದ ಕೆಲವು ತಿಂಗಳುಗಳಲ್ಲಿ ಸಿನಿಮಾದ ಕೆಲ ಇಂಟ್ರಸ್ಟ್ರಿಂಗ್ ಕಥೆಗಳನ್ನ ಕೇಳಿದ್ದೇನೆ. ಎಲ್ಲವೂ ಓಕೆ. ಆದರೆ, ನನ್ನಿಂದ ಶೀಘ್ರದಲ್ಲಿಯೇ ಗುಡ್ ನ್ಯೂಸ್ ಸಿಗಲಿದೆ. ಅಲ್ಲಿಯವರೆಗೂ ನಿಮ್ಮ ಕುತೂಹಲ ಹೀಗೆ ಉಳಿಸಿಕೊಳ್ಳಿ’ ಎಂದು ಬರೆದುಕೊಂಡಿದ್ದಾರೆ.