ಮೈಸೂರು: ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಬಹುಕೃತ ವೇಷಂ ಚಿತ್ರವು ಫೆ.18ರಂದು ರಾಜ್ಯಾದಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಾಯಕ ಶಶಿಕಾಂತ್ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರವನ್ನು ಪ್ರಶಾಂತ್ ಕೆ. ಎಳ್ಳಂಪಳ್ಳಿ ನಿರ್ದೇಶನ ಮಾಡಿದ್ದಾರೆ. ಮನುಷ್ಯ ಹೊಟ್ಟೆಪಾಡಿಗಾಗಿ ನಾನಾ ವೇಷ ಹಾಕುತ್ತಾನೆ. ಇದೇ ಕಥೆಯ ಸಾರಾಂಶ. ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದ್ದು, ಪ್ರೇಕ್ಷಕರಿಗೆ ನಿರಾಸೆಯಾಗುವುದಿಲ್ಲ ಎಂದು ಹೇಳಿದರು.
ಕವಿರಾಜ್ ಅವರು 2 ಹಾಡುಗಳನ್ನು ಬರೆದಿದ್ದು, ಜೇಮ್ಸ್ ಚಿತ್ರದ ನಿರ್ದೇಶಕ ಒಂದು ಹಾಡು ಬರೆದಿದ್ದಾರೆ. ವೈಶಾಖ್ ವಿ.ಭಾರ್ಗವ್ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಹರ್ಷಕುಮಾರ್ ಗೌಡ ಅವರ ಛಾಯಾಗ್ರಹಣ ಮತ್ತು ಬಿ.ಜ್ಞಾನೇಶ್ ಬಿ.ಮಾತಾಡ್ ಅವರ ಸಂಕಲನವಿದೆ ಎಂದು ಹೇಳಿದರು.
ಚಿತ್ರ ರಾಜ್ಯದಲ್ಲಿ 70 ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು, ಮೈಸೂರಿನ ಲಿಡೋ ಚಿತ್ರ ಮಂದಿರದಲ್ಲಿ ಪ್ರದರ್ಶನ ಕಾಣಲಿದೆ. ವಿಶೇಷವೆಂದರೆ ಆಮೆರಿಕಾದಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ ಎಂದರು.
ಚಿತ್ರ ನಟಿ ವೈಷ್ಣವಿ ಮಾತನಾಡಿ, ನಾವೆಲ್ಲವರೂ ಗೊತ್ತೋ ಗೊತ್ತಿಲ್ಲದೆ ಒಂದು ವೇಷ ಹಾಕಿರುತ್ತೇವೆ. ಅಂತೆಯೇ ಈ ಸಿನಿಮಾದಲ್ಲಿಯೂ ಕೆಲ ವೇಷಗಳಿವೆ. ಈ ಸಿನಿಮಾ ಕಥೆ ಅದ್ಭುತವಾಗಿದೆ. ನನಗೆ ಈ ಸಿನಿಮಾ ಮಾಡಿ ಖುಷಿಯಾಗಿದೆ ಎಂದು ಹೇಳಿದರು. ನಿರ್ಮಾಪಕ ಡಿ.ಕೆ.ರವಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.