News Kannada
Friday, March 31 2023

ಸಾಂಡಲ್ ವುಡ್

ನೈಜ ಘಟನೆ ಆಧಾರಿತ ತನುಜಾ ಸಿನಿಮಾದಲ್ಲಿ ಬಣ್ಣ ಹಚ್ಚಿದ ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ

Photo Credit : Twitter

ಬೆಂಗಳೂರು: ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಅವರು ತನುಜಾ ಹೆಸರಿನ ನೈಜ ಘಟನೆ ಆಧಾರಿತ ಚಿತ್ರದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ.ಮುಂಬರುವ ಏಪ್ರಿಲ್​ ಅಥವಾ ಮೇ ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಪ್ಲಾನ್​ ಮಾಡಲಾಗಿದೆ ಎಂದು ನಿರ್ದೇಶಕ ಹರೀಶ್​ ಎಂ.ಡಿ. ಹಳ್ಳಿ ಮಾಹಿತಿ ನೀಡಿದ್ದಾರೆ

ನೀಟ್​ ಪರೀಕ್ಷೆಯನ್ನು ಬರೆಯಲಾಗದೇ ಸಂಕಷ್ಟಕ್ಕೆ ಸಿಲುಕಿದ್ದ ಯುವತಿಗೆ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಬಿಎಸ್​ವೈ ನೆರವು ನೀಡಿದ್ದರು.350 ಕಿ.ಮೀ ದೂರದಿಂದ ವಿದ್ಯಾರ್ಥಿನಿ ಪರೀಕ್ಷೆ ಬರೆದಿದ್ದಳು. ಇದು ಯುವತಿಗೆ ಯಾವ ರೀತಿಯಲ್ಲಿ ನೆರವಾಯಿತು ಎಂಬುದರ ಆಧಾರದ ಮೇಲೆ ಚಿತ್ರವನ್ನು ತೆಗೆಯಲಾಗುತ್ತಿದೆ.

ಈ ಚಿತ್ರವನ್ನು ಹರೀಶ್​ ಎಂ.ಡಿ. ಹಳ್ಳಿ ನಿರ್ದೇಶನ ಮಾಡುತ್ತಿದ್ದಾರೆ. ಬಿಎಸ್​ವೈ ಈ ಚಿತ್ರದಲ್ಲಿ ಮುಖ್ಯಮಂತ್ರಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಬಿಎಸ್​ವೈ ಭಾಗದ ಶೂಟಿಂಗ್​ ಪೂರ್ಣಗೊಂಡಿರುವುದಾಗಿ ಸ್ವತಃ ನಿರ್ದೇಶಕರೇ ಮಾಹಿತಿ ನೀಡಿದ್ದಾರೆ.

ನೈಜ ಘಟನೆ ಆಧಾರಿತ ಚಿತ್ರವಾದ್ದರಿಂದ ನಟಿಸುವಂತೆ ಅವರನ್ನೇ ಕೇಳಿಕೊಂಡೆವು. ತಕ್ಷಣವೇ ಒಪ್ಪಿಕೊಂಡು ಸಂಪೂರ್ಣ ಬೆಂಬಲ ನೀಡಿದರು. ಚಿತ್ರೀಕರಣದಲ್ಲಿ ಲವಲವಿಕೆಯಿಂದಲೇ ಭಾಗವಹಿಸಿದರು. ಬಿಎಸ್​ವೈ ಅವರು ವೃತ್ತಿ ಜೀವನದಲ್ಲಿ ಸಾಕಷ್ಟು ಕ್ಯಾಮೆರಾಗಳನ್ನು ಎದುರಿಸಿರುವುದರಿಂದ ಅವರಿಗೇನು ಮುಜುಗರವಾಗಲಿಲ್ಲ. ಆದರೆ, ಕ್ಯಾಮೆರಾ ಆಯಂಗಲ್​ಗಳಿಂದ ಸ್ವಲ್ಪ ಗಲಿಬಿಲಿಗೊಂಡರು ಎಂದು ನಿರ್ದೇಶಕ ಹರೀಶ್​ ಎಂ.ಡಿ. ಹಳ್ಳಿ ಹೇಳಿದರು.

ನಿನ್ನೆಯೇ (ಫೆ.19) ಬಿಎಸ್​ವೈ ಭಾಗದ ಶೂಟಿಂಗ್​ ಕಂಪ್ಲೀಟ್​ ಆಗಿದೆ. ಇದುವರೆಗೂ ಶೇ. 90 ರಷ್ಟು ಚಿತ್ರೀಕರಣ ಮುಗಿದಿದೆ.

See also  ತಂದೆ-ತಾಯಿ ಸಮಾಧಿ ಪಕ್ಕದಲ್ಲೇ ಭಾನುವಾರ 'ಅಪ್ಪು' ಅಂತ್ಯಸಂಸ್ಕಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12795
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು