News Kannada
Sunday, September 25 2022

ಸಾಂಡಲ್ ವುಡ್

‘ ವೀಲ್ ಚೇರ್ ರೋಮಿಯೋ’ ಗೆ ಸಿಕ್ತು ಬೆಂಗಳೂರು ಫಿಲ್ಮಂ ಫೆಸ್ಟ್ ನಲ್ಲಿ ತೆರೆಕಾಣೋ ಬಂಪರ್ ಆಫರ್ - 1 min read

Photo Credit : News Kannada
ಸ್ಯಾಂಡಲ್ ವುಡ್ :ಚಂದನವನದಲ್ಲಿ ಸಾಲು ಸಾಲು ಸಿನೆಮಾಗಳು ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತಿವೆ. ಆದ್ರೆ ಬಿಡುಗಡೆಗೂ ಮೊದಲೇ ಕ್ಯೂರಿಯಾಸಿಟಿ ಹುಟ್ಟಿಸಿ ಈ ಸಿನೆಮಾ ಮಿಸ್ ಮಾಡ್ದೆ ನೋಡ್ಬೇಕಪ್ಪಾ ಅಂತ ಅಂದುಕೊಳ್ಳೋ ಚಿತ್ರಗಳ ಪಟ್ಟಿಯಲ್ಲಿ  ಡಿಫ್ರೆಂಟ್ ಟೈಟಲ್,  ಡಿಫ್ರೆಂಟ್ ಕಾನ್ಸೆಪ್ಟ್ ನೊಂದಿಗೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಿರೋ‘ವೀಲ್ ಚೇರ್ ರೋಮಿಯೋ’  ಸಹ ಇದೆ.     ರೋಮಿಯೋ ಈಗಾಗಲೇ ಹಾಡು ಮತ್ತು ಟ್ರೇಲರ್ ರಿಲೀಸ್ ಮಾಡ್ಕೊಂಡು   ಸಿನಿಪ್ರಿಯರ ಮನದಲ್ಲಿ ಹಾಸು ಹೊಕ್ಕಾಗಿದೆ.    ಸದ್ಯ ಬಿಡುಗಡೆಯಾಗಿ ಪ್ರೇಕ್ಷಕರ ಮುಂದೆ ಬರಲು ಸಕಲ ರೀತಿಯಲ್ಲೂ ಸಜ್ಜಾಗಿ ನಿಂತಿರೋ ವೀಲ್ ಚೇರ್ ರೋಮಿಯೋಗೆ  ಈಗ  ಮತ್ತೊಂದು ಖುಷಿ ಸಂಗತಿ  ಸಿಕ್ಕಿದ್ದು, ಚಿತ್ರತಂಡ ಈ ಖುಷಿಯನ್ನ ಸೆಲೆಬ್ರೇಟ್ ಮಾಡ್ಕೋಳೋದ್ರಲ್ಲಿ ಬ್ಯುಸಿಯಾಗಿದೆ. ಹೌದು  ಆ ಬಂಪರ್ ಖುಷಿ ಏನಂದ್ರೆ  ಬೆಂಗಳೂರು ಫಿಲ್ಮಂ ಫೆಸ್ಟ್ ನಲ್ಲಿ ವೀಲ್ ಚೇರ್ ರೋಮಿಯೋ ತೆರೆ ಮೇಲೆ  ಮಿಂಚೋಕೆ  ಬಂಪರ್ ಆಫರ್ ಸಿಕ್ಕಿದೆ.ಹೌದು ,, ಈ ಬಾರಿಯ ಬೆಂಗಳೂರು ಫಿಲ್ಮಂ ಫೆಸ್ಟ್ ಮಾರ್ಚ್ ತಿಂಗಳಲ್ಲಿ ನಡೆಯಲಿದ್ದು ಸಕಲ ತಯಾರಿಯೊಂದಿಗೆ  ಅದ್ಧೂರಿ   ವೇದಿಕೆ ಸಜ್ಜಾಗುತ್ತಿದೆ.  ಈ  ಫೆಸ್ಟ್ ನಲ್ಲಿ ಹಲವಾರು ದೇಶದ ನೂರಾರು ಆಯ್ದ ಸಿನಿಮಾಗಳು ತೆರೆ ಕಾಣಲಿವೆ. ಈ ಚಲನಚಿತ್ರೋತ್ಸವಕ್ಕೆ ‘ವೀಲ್ ಚೇರ್ ರೋಮಿಯೋ’ ಸಿನಿಮಾ ಆಯ್ಕೆಯಾಗಿದೆ. ಸಿನಿಮಾದಲ್ಲಿರೋ ಡಿಫರೆಂಟ್  ಕಂಟೆಂಟ್, ಮೇಕಿಂಗ್ , ಗಳನ್ನ ಮೆಚ್ಚಿ ನಮ್ಮ ಸಿನೆಮಾ ಆಯ್ಕೆ ಆಗಿದೆ. ಇದು ಸಾಕಷ್ಟು ಹುಮ್ಮಸ್ಸನ್ನ ಹೆಚ್ಚಿಸಿದ್ದು, ಖುಷಿ ಕೊಟ್ಟಿದೆ ಎಂದು ಚಿತ್ರದ ನಿರ್ದೇಶಕ ನಟರಾಜ್ ಸಂತಸ ಹಂಚಿಕೊಂಡಿದ್ದಾರೆ.

ಇನ್ನು ಚಿತ್ರದ ಟೈಟಲ್ಲೇ  ಹೇಳುವಂತೆ  ‘ವೀಲ್ ಚೇರ್ ರೋಮಿಯೋ’ ಚಿತ್ರದಲ್ಲಿ  ಚಿತ್ರದ ನಾಯಕ ವೀಲ್ ಚೇರ್ ಮೇಲೆ ಕುಳಿತು ಪ್ರೀತಿಯಲ್ಲಿ ಬೀಳುತ್ತಾನೆ. ಆತ ಪ್ರೀತಿಯಲ್ಲಿ ಬೀಳೋದು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಅಂಧ ಹುಡುಗಿಯ ಜೊತೆ. ಈ ವಿಚಾರ ನಾಯಕನ ಮನೆಯಲ್ಲಿ ಗೊತ್ತಾದ್ರೆ ಏನೆಲ್ಲ ಆಗಬಹುದು ಎನ್ನುವ ಕಥಾ ಹಂದರವಿಟ್ಟು ಕಥೆ ಹೆಣೆಯಲಾಗಿದೆ.  ಹಾಗಂತ ಸಿನೆಮಾದಲ್ಲೇನೂ ಕೇವಲ ಸಿರಿಯಸ್ ಸಬ್ಜೆಕ್ಟ್ ಮಾತ್ರ ಇಡದೇ,   ಕಾಮಿಡಿ, ಎಂಟಟೈನ್ಮೆಂಟ್,  ಕೊಂಚ ಸೆಂಟಿಮೆಂಟ್ ಕೂಡ ಆಡ್ ಆಗಿದ್ದು ಎಲ್ಲೂ ಬೋರ್ ಹೊಡಿಸದೇ ಪ್ರೇಕ್ಷಕರನ್ನ  ನಗಿಸಲೆಂದೇ  ಈ ವೀಲ್ ಚೇರ್ ರೋಮಿಯೋ ರೆಡಿಯಾಗಿದ್ದಾನೆ.

ಕಿರುತೆರೆಯಲ್ಲಿ ನಟಿಸಿ ಅನುಭವ ಹೊಂದಿರುವ ಹೊಸ ಪ್ರತಿಭೆ ರಾಮ್ ಚೇತನ್ ನಾಯಕನಾಗಿ ನಟಿಸಿದ್ದು, ಮಯೂರಿ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ.ಸುಚೇಂದ್ರಪ್ರಸಾದ್, ತಬಲ ನಾಣಿ, ರಂಗಾಯಣ ರಘು ಚಿತ್ರ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದು, ಇನ್ನೂ ಹಲವರ ತಾರಾಬಳಗವಿದೆ.

ಈ ಹಿಂದೆ ನಿರ್ದೇಶಕ ನಟರಾಜ್ ರೋಮಿಯೋ, ಜೂಮ್, ಆರೆಂಜ್ ಸೇರಿದಂತೆ ಹಲವು ಸಿನಿಮಾಗಳಿಗೆ ಡೈಲಾಗ್ ರೈಟರ್ ಆಗಿ, ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರು. ಆದ್ರೆ    ವೀಲ್ ಚೇರ್ ರೋಮಿಯೋ  ಮೂಲಕ ಸ್ವತಂತ್ರ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದು,  ಕಥೆ, ಚಿತ್ರಕಥೆ ಬರೆದು ಡೈರೆಕ್ಟರ್ ಕ್ಯಾಪ್ ತೊಟ್ಟು,   ಸಿನಿಮಾ ಮೇಲೆ ಅಪಾರ ಭರವಸೆ ಇಟ್ಟುಕೊಂಡಿದ್ದಾರೆ.

See also  ಸಂಕ್ರಾಂತಿಗೆ ʼಗರುಡ ಗಮನ ವೃಷಭ ವಾಹನʼ ಚಿತ್ರ ರಿಲೀಸ್!

ಅಗಸ್ತ್ಯ ಕ್ರಿಯೇಷನ್ಸ್ ಬ್ಯಾನರ್ ನಡಿ ವೆಂಕಟಾಚಲಯ್ಯ ಚಿತ್ರಕ್ಕೆ ಬಂಡವಾಳ ಹೂಡಿ ಚಿತ್ರ ನಿರ್ಮಾಣ ಮಾಡಿದ್ದಾರೆ.  ಬಿ.ಜೆ.ಭರತ್ ಸಂಗೀತ ನಿರ್ದೇಶನ,  ಗುರುಕಶ್ಯಪ್ ಸಂಭಾಷಣೆ, ಸಂತೋಷ್ ಪಾಂಡಿ ಕ್ಯಾಮೆರಾ ವರ್ಕ್, ವಿ ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ ಸಾಹಿತ್ಯ ಕೃಷಿ ಚಿತ್ರದಲ್ಲಿದ್ದು ಮೋಡಿ ಮಾಡಲಿದೆ.  ಬೆಂಗಳೂರು, ಮಹರಾಷ್ಟ್ರ, ಪುಣೆಯಲ್ಲಿ ಚಿತ್ರೀಕರಣ ನಡೆಸಲಾಗಿದ್ದು ಮೇನಲ್ಲಿ ವೀಲ್ ಚೇರ್ ರೋಮಿಯೋ ಪ್ರೇಕ್ಷಕರ ಮನಸ್ಸಿಗೆ ಕಚಗುಳಿ ಇಡಲು ಥಿಯೇಟರ್ ಗೆ ಬರಲು ಸಜ್ಜಾಗ್ತಿದ್ದಾನೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

15229
Jaya Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು