News Kannada
Thursday, March 23 2023

ಸಾಂಡಲ್ ವುಡ್

ರಿಷಬ್​ ಶೆಟ್ಟಿ ನಿರ್ಮಾಣ, ನಟೇಶ್ ಹೆಗಡೆ​ ನಿರ್ದೇಶನದ ‘ಪೆದ್ರೊ’ ಟ್ರೇಲರ್​ ರಿಲೀಸ್

Photo Credit : Twitter

ರಿಷಬ್ ಶೆಟ್ಟಿ  ಅವರು ‘ರಿಷಬ್​ ಶೆಟ್ಟಿ ಫಿಲ್ಮ್ಸ್​’  ನಿರ್ಮಾಣ ಸಂಸ್ಥೆ ಮೂಲಕ ಭಿನ್ನ ಸಿನಿಮಾಗಳನ್ನು ತೆರೆಗೆ ತಂದಿದ್ದಾರೆ. ಪ್ರಯೋಗಾತ್ಮಕ ಸಿನಿಮಾಗಳಿಗೆ ರಿಷಬ್​ ಹೆಚ್ಚು ಆದ್ಯತೆ ನೀಡುತ್ತಾರೆ. ಈಗ ಯುವ ನಿರ್ದೇಶಕ ನಟೇಶ್​ ಹೆಗಡೆ  ನಿರ್ದೇಶನದ ‘ಪೆದ್ರೊ’ ಚಿತ್ರವನ್ನು ರಿಷಬ್​ ಶೆಟ್ಟಿ ನಿರ್ಮಿಸಿದ್ದಾರೆ.

ಇಂದು ಚಿತ್ರದ ಟ್ರೇಲರ್​ ರಿಲೀಸ್ ಆಗಿದ್ದು, ಸಿನಿಪ್ರಿಯರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾ ಹಲವು ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಕೆಲವು ಕಡೆಗಳಲ್ಲಿ ಪ್ರಶಸ್ತಿ ಕೂಡ ಬಾಚಿಕೊಂಡಿದೆ. ಟ್ರೇಲರ್​ ನೋಡಿದ ನಂತರ ಸಿನಿಮಾ ಬಗೆಗಿನ ಕುತೂಹಲ ಹೆಚ್ಚಿದೆ.

ಗೋಪಾಲ್​ ಹೆಗಡೆ, ರಾಮಕೃಷ್ಣ ಭಟ್​ ದಂಡಿ, ರಾಜ್​ ಬಿ. ಶೆಟ್ಟಿ, ಮೇದಿನಿ ಕೆಳಮನೆ, ನಾಗರಾಜ್​ ಹೆಗಡೆ ಮೊದಲಾದವರು ‘ಪೆದ್ರೊ’ ಚಿತ್ರದಲ್ಲಿ ನಟಿಸಿದ್ದಾರೆ. ಇವರಲ್ಲಿ ಬಹುತೇಕ ಕಲಾವಿದರು ಸ್ಥಳೀಯರು. ನಿರ್ದೇಶಕ ನಟೇಶ್​ ತಂದೆ ಗೋಪಾಲ್​ ಹೆಗಡೆ ಅವರು ಪೆದ್ರೊ ಪಾತ್ರವನ್ನು ಮಾಡಿದ್ದಾರೆ. ಇವರು ಎಲ್ಲಿಯೂ ನಟನೆ ಕಲಿತವರಲ್ಲ. ಆದಾಗ್ಯೂ, ಅವರು ಉತ್ತಮವಾಗಿ ಅಭಿನಯಿಸಿದ್ದಾರೆ ಎಂಬುದು ಟ್ರೇಲರ್​ ಮೂಲಕ ಸಾಬೀತಾಗಿದೆ.

‘ಒಂದು ಮೊಟ್ಟೆಯ ಕಥೆ’, ‘ಗರುಡ ಗಮನ ವೃಷಭ ವಾಹನ’ ಮೊದಲಾದ ಸಿನಿಮಾಗಳಲ್ಲಿ ನಟಿಸಿರುವ ರಾಜ್​ ಬಿ. ಶೆಟ್ಟಿ ಕೂಡ ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಗ್ರಾಮೀಣ ಸೊಗಡಿನಲ್ಲಿ ಈ ಸಿನಿಮಾ ಮೂಡಿ ಬಂದಿದೆ. ‘ಒಂದು ಹಳ್ಳಿಯಲ್ಲಿರುವ ಎಲೆಕ್ಟ್ರಿಷಿಯನ್ ಅಪರಾಧ ಎಸಗುತ್ತಾನೆ. ಅಲ್ಲಿಂದ ಆತನ ಹಾಗೂ ಸಮಾಜದ ನಡುವೆ ತಿಕ್ಕಾಟ ಆರಂಭ ಆಗುತ್ತದೆ. ಇದನ್ನು ತೋರಿಸುವ ಕೆಲಸ ಸಿನಿಮಾದಲ್ಲಿ ಆಗಿದೆ. ‘ಪೆದ್ರೊ’ ಎಂಬುದು ಕ್ರಿಶ್ಚನ್​ ವ್ಯಕ್ತಿಯ ಹೆಸರು. ಪೀಟರ್​ ಹೆಸರಿನ ಅಪಭ್ರಂಶ ‘ಪೆದ್ರೊ’. ಸಿನಿಮಾ ನೋಡಿ ರಿಷಬ್​ ಶೆಟ್ಟಿ ಸಂತಸಪಟ್ಟಿದ್ದಾರೆ. ಅವರು ಸಿನಿಮಾ ನೋಡಿ ಮೆಚ್ಚಿಕೊಂಡರು. ಅವರು ಈ ಚಿತ್ರವನ್ನು ನಂಬಿ, ನಿರ್ಮಾಣ ಮಾಡಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ನಟೇಶ್ ಹೆಗಡೆ.

ಖ್ಯಾತ ನಿರ್ದೇಶಕ ವೆಟ್ರಿಮಾರನ್ ಅವರು ‘ಪೆದ್ರೊ’ ಸಿನಿಮಾವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ರಿಷಬ್​, ‘ಪೆದ್ರೊ ಟ್ರೇಲರ್ ಬಿಡುಗಡೆಯಾಗಿದೆ. ನಮ್ಮ ಪರಿಶ್ರಮದ ಫಲ ನಿಮ್ಮ ಮುಂದೆ. ನಮ್ಮ ತಲೆಮಾರಿನ ಉತ್ಕೃಷ್ಟ ನಿರ್ದೇಶಕರಲ್ಲಿ ಒಬ್ಬರಾದ ವೆಟ್ರಿಮಾರನ್​ರವರು ನಮ್ಮ ಸಿನಿಮಾವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಶೀಘ್ರವೇ ಈ ಸಿನಿಮಾ ರಿಲೀಸ್​ ಆಗಲಿದೆ’ ಎಂದು ಬರೆದುಕೊಂಡಿದ್ದಾರೆ.

 

See also  ನವರಸ ನಾಯಕನ ಭಾವುಕ ಕ್ಷಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು