News Kannada
Sunday, September 25 2022

ಸಾಂಡಲ್ ವುಡ್

ಉಗ್ರಾವತಾರ ಚಿತ್ರದಲ್ಲಿ ಖಡಕ್ ಆಕ್ಷನ್‌ ಲುಕ್‌ನಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ - 1 min read

Photo Credit :

ಸ್ಯಾಂಡಲ್ ವುಡ್:  ನಟಿ ಪ್ರಿಯಾಂಕಾ ಉಪೇಂದ್ರ ಇದೇ ಮೊದಲ ಬಾರಿಗೆ “ಉಗ್ರಾವತಾರ’ ಚಿತ್ರದಲ್ಲಿ ಖಡಕ್‌ ಖಾಕಿ ತೊಟ್ಟು, ಔಟ್‌ ಆಯಂಡ್‌ ಔಟ್‌ ಆಯಕ್ಷನ್‌ ಲುಕ್‌ನಲ್ಲಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ.

ಇಲ್ಲಿಯವರೆಗೆ ಹಲವು ಸಿನಿಮಾಗಳಲ್ಲಿ ವಿಭಿನ್ನ ಗೆಟಪ್‌ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಪ್ರಿಯಾಂಕಾ ಉಪೇಂದ್ರ, ಇದೇ ಮೊದಲ ಬಾರಿಗೆ “ಉಗ್ರಾವತಾರ’ ಸಿನಿಮಾದಲ್ಲಿ ಪೊಲೀಸ್‌ ಅಧಿಕಾರಿಯಾಗಿ ಔಟ್‌ ಆಯಂಡ್‌ ಔಟ್‌ ಆಯಕ್ಷನ್‌ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ.

ಅಂದಹಾಗೆ, “ಉಗ್ರಾವತಾರ’ ಸಿನಿಮಾದಲ್ಲಿ ಪ್ರಿಯಾಂಕಾ ಅವರದ್ದು ರಫ್ ಆಯಂಡ್‌ ಟಫ್ ಪೊಲೀಸ್‌ ಅಧಿಕಾರಿಯ ಪಾತ್ರ. ಸಮಾಜದಲ್ಲಿ ನಡೆಯುವ ಅನಾಚಾರ ಮತ್ತು ಅನೈತಿಕ ಕೃತ್ಯಗಳ ವಿರುದ್ದ ದಕ್ಷ ಮತ್ತು ಪ್ರಾಮಾಣಿಕ ಮಹಿಳಾ ಪೊಲೀಸ್‌ ಅಧಿಕಾರಿಯೊಬ್ಬಳು ಹೇಗೆ ದಿಟ್ಟತನದಿಂದ ಹೋರಾಡಿ, ಶತ್ರುಗಳ ಹೆಡೆಮುರಿ ಕಟ್ಟುತ್ತಾಳೆ ಅನ್ನೋದು ಚಿತ್ರದ ಕಥೆಯ ಒಂದು ಎಳೆ.

ಸುಮಾರು ಒಂದೂವರೆ ದಶಕಗಳ ಕಾಲ ಚಿತ್ರರಂಗದಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವವಿರುವ ಗುರುಮೂರ್ತಿ “ಉಗ್ರಾವತಾರ’ ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ದೇಶನ ಮಾಡಿದ್ದಾರೆ.

ಚಿತ್ರದ ಕಥಾಹಂದರದ ಬಗ್ಗೆ ಮಾತನಾಡುವ ನಿರ್ದೇಶಕ ಗುರುಮೂರ್ತಿ, “ಇತ್ತೀಚಿನ ವರ್ಷಗಳಲ್ಲಿ ಸಮಾಜದಲ್ಲಿ ನಡೆದ, ಆಗಾಗ್ಗೆ ವರದಿಯಾಗುವ ಹತ್ತಾರು ನೈಜ ಘಟನೆಗಳನ್ನು ಸ್ಫೂರ್ತಿ ಯಾಗಿಟ್ಟುಕೊಂಡು “ಉಗ್ರಾವತಾರ’ ಸಿನಿಮಾವನ್ನು ತೆರೆಗೆ ತರಲಾಗುತ್ತಿದೆ. ಒಂದಷ್ಟು ಮನರಂಜನಾತ್ಮಕ ಅಂಶಗಳನ್ನು ಇಟ್ಟುಕೊಂಡು, ಸಾಮಾಜಿಕ ಜಾಗೃತಿ ಮತ್ತು ಸಂದೇಶ ನೀಡುವಂಥ ಕಥೆಯನ್ನು ಸಿನಿಮಾದಲ್ಲಿ ಹೇಳುತ್ತಿದ್ದೇವೆ’ ಎನ್ನುತ್ತಾರೆ.

 

See also  ‘ಕಡಲ ತೀರದ ಭಾರ್ಗವ'ನ ಮನದಾಳದ ವೇದನೆ ಹೇಳುತ್ತಿದೆ ‘ಸಮಯವೇ’ ಲಿರಿಕಲ್ ವೀಡಿಯೋ ಸಾಂಗ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12795
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು