News Kannada
Wednesday, December 07 2022

ಸಾಂಡಲ್ ವುಡ್

ಮೈಸೂರು ವಿ.ವಿ ಘಟಿಕೋತ್ಸವ: ಪುನೀತ್‌ ರಾಜ್‌ಕುಮಾರ್‌ಗೆ ಗೌರವ ಡಾಕ್ಟರೇಟ್‌ ಪ್ರದಾನ

Photo Credit :

ಮೈಸೂರು : ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ನಟ ಪುನೀತ್​ ರಾಜ್​ಕುಮಾರ್​ ಅವರಿಗೆ ಮರಣೋತ್ತರವಾಗಿ ನೀಡಿದ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಅಶ್ವಿನಿ ಪುನೀತ್​ ರಾಜ್​ಕುಮಾರ್​ ಸ್ವೀಕರಿಸಿದರು.

ಮೈಸೂರು ವಿವಿಯ ಕ್ರಾಫಾರ್ಡ್ ಹಾಲ್​ನಲ್ಲಿ ಮಂಗಳವಾರ ಘಟಿಕೋತ್ಸವ ಸಮಾರಂಭ ನಡೆಯುತ್ತಿದ್ದು, ಕಾರ್ಯಕ್ರಮಕ್ಕೆ ಡಾ.ರಾಜ್​ಕುಮಾರ್ ಕುಟುಂಬಸ್ಥರು ಆಗಮಿಸಿದರು.

ನಟ ರಾಘವೇಂದ್ರ ರಾಜ್​ಕುಮಾರ್ ಮತ್ತು ಪತ್ನಿ, ನಟ ವಿನಯ್ ರಾಜ್​ಕುಮಾರ್, ಪುನೀತ್​ರ ಅಕ್ಕ ಲಕ್ಷ್ಮೀ ಗೋವಿಂದು ಮತ್ತು ಮೊಮ್ಮಕ್ಕಳು ಉಪಸ್ಥಿತರಿದ್ದರು.

‌ಇತ್ತೀಚೆಗೆ ಅಶ್ವಿನಿ ಅವರನ್ನು ಭೇಟಿಯಾಗಿದ್ದ ಕುಲಪತಿ ಪ್ರೊ.ಹೇಮಂತ್ ಕುಮಾರ್​ ನೇತೃತ್ವದ ನಿಯೋಗ, ಪುನೀತ್​ ಅವರಿಗೆ ಗೌರವ ಡಾಕ್ಟರೇಟ್ ಕೊಡುವ ​ಬಗ್ಗೆ ಚರ್ಚಿಸಿತ್ತು. ಶತಮಾನೋತ್ಸವ ಪೂರೈಸಿರುವ ಮೈಸೂರು ವಿವಿಯು ಈ ಬಾರೀ ಅಪ್ಪು ಅವರಿಗೆ ಡಾಕ್ಟರೇಟ್ ಪದವಿ ಕೊಟ್ಟದ್ದು ಅಭಿಮಾನಿಗಳಿಗೆ ಖುಷಿ ನೀಡಿದೆ. ಪುನೀತ್(ಅಶ್ವಿನಿ)​ ಜತೆಗೆ ಶಹನಾಯಿ ವಾದಕ ಎಂ.ಮಹದೇವಸ್ವಾಮಿ, ವಿಜ್ಞಾನಿ ಅತ್ರಿ ಅವರಿಗೂ ರಾಜ್ಯಪಾಲರು ಗೌರವ ಡಾಕ್ಟರೇಟ್ ಪ್ರಧಾನ ಮಾಡಿದರು.

See also  ಉದ್ಯೋಗ ಭ್ರಷ್ಟಾಚಾರಿಗಳ ಪಾಲು : ಮಾಲವಿಕ ಗುಬ್ಬಿವಾಣಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು