News Kannada
Thursday, September 29 2022

ಸಾಂಡಲ್ ವುಡ್

ಮತ್ತೊಂದು ಮಹತ್ವದ ನಿರ್ಧಾರದ ಮೂಲಕ ಮಾದರಿಯಾದ ರಾಕಿಂಗ್ ಸ್ಟಾರ್ ಯಶ್! - 1 min read

Sandalwood: Yash's
Photo Credit :

ರಾಕಿಂಗ್ ಸ್ಟಾರ್ ಯಶ್ ಈಗ ಮತ್ತೊಂದು ಮಹತ್ವದ ನಿರ್ಧಾರದ ಮೂಲಕ ಮಾದರಿಯಾಗಿದ್ದು, ಬಹುಕೋಟಿ ಮೌಲ್ಯದ ಪಾನ್ ಮಸಾಲ ಜಾಹೀರಾತನ್ನು ತಿರಸ್ಕರಿಸಿ ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲಾ, ನಿಜ ಜೀವನದಲ್ಲಿ ರಿಯಲ್‌ ಹೀರೋ ಎಂಬುದನ್ನ ಸಾಬೀತುಪಡಿಸಿದ್ದಾರೆ.

ಈ ಬಗ್ಗೆ ಸ್ವತಃ ಎಂಡಾರ್ಸ್‌ಮೆಂಟ್ ಡೀಲ್‌ಗಳನ್ನು ನಿರ್ವಹಿಸುವ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಏಜೆನ್ಸಿಯಾದ ಎಕ್ಸೀಡ್ ಎಂಟರ್‌ಟೈನ್‌ಮೆಂಟ್‌ ಸಂಸ್ಥೆ ಖಚಿತಪಡಿಸಿದೆ.

ಕೆಜಿಎಫ್ ಚಾಪ್ಟರ್ 2 ಸಿನಿಮಾ ಸಕ್ಸಸ್ ಬೆನ್ನಲ್ಲೇ, ಬಾಕ್ಸ್ ಆಫೀಸ್‌ನಲ್ಲಿ ಕೋಟಿ-ಕೋಟಿ ಬಾಚುವ ಮೂಲಕ ಯಶ್​ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಭಾರತೀಯ ಚಿತ್ರರಂಗವನ್ನು ತಿರುಗಿ ನೋಡುವಂತೆ ಮಾಡಿದ್ದಾರೆ. ಈ ಮಧ್ಯೆ ರಾಕಿಬಾಯ್ ಸಮಾಜ ಹಾಗು ಕೋಟ್ಯಂತರ ಅಭಿಮಾನಿಗಳ ದೃಷ್ಟಿಯಿಂದ ಈ ಒಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ದೇಶದೆಲ್ಲೆಡೆ ಪ್ರಸಿದ್ಧಿ ಹೊಂದಿರುವ ಪಾನ್ ಮಸಾಲ ಮತ್ತು ಏಲಕ್ಕಿ ಬ್ರ್ಯಾಂಡ್‌ನ ಜಾಹೀರಾತಿನಲ್ಲಿ ಅಭಿನಯಿಸಿ ಹಾಗು ಪ್ರಚಾರ ಮಾಡಲು ಎಂಡಾರ್ಸ್‌ಮೆಂಟ್ ಕಂಪನಿ ಯಶ್ ಅವರಿಗೆ ಆಫರ್​ ನೀಡಿತ್ತು. ಈ ಜಾಹೀರಾತಿಗಾಗಿ ಕೋಟ್ಯಂತರ ರೂಪಾಯಿ ಸಂಭಾವನೆ ಕೊಡಲು ಸಹ ಪಾನ್ ಮಸಾಲ ಸಂಸ್ಥೆ ಮುಂದೆ ಬಂದಿತ್ತು ಎನ್ನಲಾಗಿದೆ.

ಕೆಲ ದಿನಗಳ ಹಿಂದೆ ಗುಟ್ಕಾ ಜಾಹೀರಾತಿಗೆ ಸಂಬಂಧಿಸಿದಂತೆ ದೇಶಾದ್ಯಂತ ಭಾರೀ ಟ್ರೋಲ್ಗೆ ಒಳಗಾಗಿದ್ದ ನಟ ಅಕ್ಷಯ್‌ ಕುಮಾರ್‌ ಕೂಡಾ ಬ್ರಾಂಡ್‌ ರಾಯಭಾರಿಯಿಂದ ಹಿಂದೆ ಸರಿದಿದ್ದಾರೆ.

See also  ನಿಮ್ಮ ಕುಟುಂಬಕ್ಕೆ ನೀವು ಮುಖ್ಯ, ನಮಗೂ ನೀವು ಮುಖ್ಯ ದಯವಿಟ್ಟು ಆತ್ಮಹತ್ಯೆ ಮಾಡಬೇಡಿ: ಅಭಿಮಾನಿಗಳಲ್ಲಿ ಶಿವರಾಜ್‌ಕುಮಾರ್‌ ಮನವಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು