ಗಣೇಶ್ ಹಾಗೂ ಪ್ರೀತಂ ಜೋಡಿಯ ನಾಲ್ಕನೇ ಚಿತ್ರ ‘ಬಾನದಾರಿಯಲ್ಲಿ’ ಜನರ ಮುಂದೆ ಬರಲು ಸಿದ್ದತೆ ಮಾಡಿಕೊಳ್ಳುತ್ತಿದೆ. ಮಳೆಯಲಿ ಜೊತೆಯಲಿ’ ಹಾಗೂ ದಿಲ್ ರಂಗೀಲಾ ಸಿನಿಮಾಗಳಂತಹ ಹಿಟ್ ಚಿತ್ರ ನೀಡಿದ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪ್ರೀತಂ ಗುಬ್ಬಿ ಮತ್ತೆ ಒಂದಾಗಿದ್ದು, ಈ ಚಿತ್ರಕ್ಕೆ ಗಣೇಶ್ಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ಮತ್ತು ರುಕ್ಮಿಣಿ ವಸಂತ್ ಆಯ್ಕೆಯಾಗಿದ್ದಾರೆ. ಈಗಾಗಲೇ ಚಿತ್ರಕ್ಕೆ ಬೇಕಾದ ತಯಾರಿಯನ್ನು ನಟಿ ಮಾಡಿಕೊಂಡಿದ್ದಾರೆ.
ವಿ.ಹರಿಕೃಷ್ಣ ಸಂಗೀತ ನಿರ್ದೇಶನ, ಪ್ರೀತಾ ಜಯರಾಂ ಛಾಯಾಗ್ರಹಣ ಹಾಗೂ ದೀಪು ಎಸ್.ಕುಮಾರ್ ಸಂಕಲನ ಚಿತ್ರಕ್ಕಿದ್ದು, ಚಿತ್ರೀಕರಣ ಆರಂಭ ಮಾಡಲಾಗಿದೆ.
ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಈ ಮುಹೂರ್ತದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ನಾಯಕಿಯರಾದ ರೀಷ್ಮಾ, ರುಕ್ಮಿಣಿ ಸೇರಿದಂತೆ ಚಿತ್ರತಂಡ ಸದಸ್ಯರು ಭಾಗಿಯಾಗಿದ್ದರು.
‘ಬಾನದಾರಿಯಲ್ಲಿʼ ಚಿತ್ರಕ್ಕೆ ಪ್ರೀತಾ ಜಯರಾಮಮನ್ ಕಥೆ ಬರೆದಿದ್ದು, ಈಗಾಗಲೇ ಅದರ ಪೋಸ್ಟರ್ ಬಹಳ ಸದ್ದು ಮಾಡುತ್ತಿದೆ. ಈ ವಿಭಿನ್ನ ಪೋಸ್ಟರ್ ಮೂಲಕವೇ ಜನರಲ್ಲಿ ಕುತೂಹಲವನ್ನು ಹೆಚ್ಚಿಸಿದೆ ಚಿತ್ರತಂಡ.
ಅಲ್ಲದೇ ಗಣೇಶ್ ಇರುವ ಇನ್ನೊಂದು ಪೋಸ್ಟರ್ ಚಿತ್ರದ ಕತೆ ಹೇಗಿರಬಹುದು ಎಂದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ಉತ್ತಮ ಸಿನಿಮಾ ಬರಲು ಸಿದ್ದವಾಗಿದೆ.