News Kannada
Thursday, September 28 2023
ಸಾಂಡಲ್ ವುಡ್

ತೆಲುಗು-ತಮಿಳಿಗೆ ರಿಮೇಕ್​ ಆಗಲಿದೆ ಕನ್ನಡದ ‘ಲವ್​ 360’ ಸಿನಿಮಾ

'Love 360' to release in hundreds of theatres today
Photo Credit : By Author

‘ಲವ್​ 360’ ಚಿತ್ರ. ಆಗಸ್ಟ್​ 19ರಂದು ತೆರೆಕಂಡ ಈ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿ ಆಗಿದೆ. ಅನೇಕ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಂಡಿದೆ. ಈಗ ಈ ಸಿನಿಮಾ ರಿಮೇಕ್ ಆಗುತ್ತಿದೆ ಎಂಬ ಸುದ್ದಿಯನ್ನು ಚಿತ್ರತಂಡದವರು ಹಂಚಿಕೊಂಡಿದ್ದಾರೆ.

ತೆಲುಗು ಮತ್ತು ತಮಿಳಿನಲ್ಲಿ ‘ಲವ್​ 360’ ಸಿನಿಮಾವನ್ನು ರಿಮೇಕ್​ ಮಾಡಲು ಖ್ಯಾತ ನಿರ್ಮಾಣ ಸಂಸ್ಥೆಯೊಂದು ಮುಂದೆಬಂದಿದೆ. ಆ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರಬೀಳಬೇಕಿದೆ. ನಿರ್ದೇಶಕ ಶಶಾಂಕ್​ ಅವರು ‘ಲವ್​ 360’ ಸಿನಿಮಾ ಮೂಲಕ ಒಂದು ಮುಗ್ಧ ಪ್ರೇಮಕಥೆಯನ್ನು ತೆರೆಗೆ ತಂದಿದ್ದಾರೆ. ರಚನಾ ಇಂದರ್​ ಮತ್ತು ಹೊಸ ಹೀರೋ ಪ್ರವೀಣ್​ ಅವರು ಈ ಚಿತ್ರದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ.

ನಿರ್ದೇಶಕ ಶಶಾಂತ್​ ಅವರು ಪ್ರತಿ ಸಿನಿಮಾದಲ್ಲೂ ತಮ್ಮದೇ ಶೈಲಿಯಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಾರೆ. ಅವರ ಜೊತೆ ಸಿನಿಮಾ ಮಾಡುವ ಹೊಸಬರಿಗೆ ಖಂಡಿತವಾಗಿಯೂ ಯಶಸ್ಸು ಸಿಗುತ್ತದೆ ಎಂಬುದಕ್ಕೆ ‘ಲವ್​ 360’ ಸಿನಿಮಾ ಹೊಸ ಉದಾಹರಣೆ ಆಗಿದೆ.

ಮೊದಲ ಸಿನಿಮಾದಲ್ಲೇ ನಟ ಪ್ರವೀಣ್​ ಅವರಿಗೆ ಭರ್ಜರಿ ಜನಪ್ರಿಯತೆ ಸಿಕ್ಕಿದೆ. ರಚನಾ ಇಂದರ್​ ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಿನಿಮಾದಲ್ಲಿ ಕಾವ್ಯಾ ಶಾಸ್ತ್ರಿ, ಗೋಪಾಲ ದೇಶಪಾಂಡೆ, ಮಸಲ್​ ಮಣಿ, ಸುಜಿತ್​, ಡ್ಯಾನಿ ಕುಟ್ಟಪ್ಪ ಮುಂತಾದವರು ನಟಿಸಿದ್ದಾರೆ.

See also  ಇಂದು ಅಭಿಮಾನಿಗಳ ಜೊತೆ ಶಿವಣ್ಣ ಭಜರಂಗಿ-2ವೀಕ್ಷಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು