News Kannada
Tuesday, March 28 2023

ಸಾಂಡಲ್ ವುಡ್

ಸ್ಯಾಂಡಲ್ ವುಡ್: ಧೂಳೆಬ್ಬಿಸಿದ ರಿಷಬ್​ ಶೆಟ್ಟಿ ನಿರ್ದೇಶನದ ‘ಕಾಂತಾರ’ ಟ್ರೇಲರ್!

Photo Credit : News Kannada

ಸ್ಯಾಂಡಲ್ ವುಡ್: ‘ಕಾಂತಾರ’ ಚಿತ್ರ ತುಂಬ ಅದ್ದೂರಿಯಾಗಿ ನಿರ್ಮಾಣ ಆಗಿದೆ ಎಂಬುದಕ್ಕೆ ಟ್ರೇಲರ್​ ಸಾಕ್ಷಿ ಒದಗಿಸುತ್ತಿದೆ. ಅಜನೀಶ್​ ಬಿ. ಲೋಕನಾಥ್​ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

ಟ್ರೇಲರ್​ನಲ್ಲಿ ಹಿನ್ನೆಲೆ ಸಂಗೀತ ಸಖತ್​ ಹೈಲೈಟ್​ ಆಗಿದೆ. ಅರವಿಂದ್​ ಎಸ್​. ಕಶ್ಯಪ್​ ಛಾಯಾಗ್ರಹಣದ ಬಗ್ಗೆ ಜನರು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ‘ಕಾಂತಾರ’ ಟ್ರೇಲರ್​ ಗಮನ ಸೆಳೆಯುತ್ತಿದೆ.

ಈ ಸಿನಿಮಾಗೆ ರಿಷಬ್​ ಶೆಟ್ಟಿ ನಿರ್ದೇಶನ ಮಾಡುವುದರ ಜೊತೆಗೆ ಮುಖ್ಯ ಪಾತ್ರವನ್ನೂ ನಿಭಾಯಿಸಿದ್ದಾರೆ. ಅವರಿಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸಿದ್ದಾರೆ. ಅಚ್ಯುತ್​ ಕುಮಾರ್​, ಪ್ರಮೋದ್​ ಶೆಟ್ಟಿ, ಕಿಶೋರ್​ ಮುಂತಾದವರು ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.

ಇಡೀ ಟ್ರೇಲರ್​ನಲ್ಲಿ ಕಿಶೋರ್​ ಮತ್ತು ರಿಷಬ್​ ಶೆಟ್ಟಿ ನಡುವಿನ ಮುಖಾಮುಖಿ ದೃಶ್ಯಗಳು ಆಕರ್ಷಕವಾಗಿ ಮೂಡಿಬಂದಿವೆ. ಪೊಲೀಸ್​ ಅಧಿಕಾರಿಯ ಪಾತ್ರಕ್ಕೆ ಕಿಶೋರ್​ ಬಣ್ಣ ಹಚ್ಚಿದ್ದಾರೆ. ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ನೋಡಲು ಸಿನಿಪ್ರಿಯರು ಕಾದಿದ್ದಾರೆ.

ಕರಾವಳಿ ಭಾಗದ ಅರಣ್ಯ ಪ್ರದೇಶ, ಅಲ್ಲಿನ ಸಂಸ್ಕೃತಿ, ಜಾನಪದ ಕಲೆಗಳು, ಭೂತಾರಾಧನೆ, ಕಂಬಳ ಸೇರಿದಂತೆ ಅನೇಕ ವಿಚಾರಗಳು ‘ಕಾಂತಾರ’ ಟ್ರೇಲರ್​ನಲ್ಲಿ ಕಾಣಿಸಿವೆ. ಈ ಮೊದಲು ಬಿಡುಗಡೆ ಆಗಿದ್ದ ‘ಸಿಂಗಾರ ಸಿರಿಯೇ..’ ಹಾಡು ಜನರಿಗೆ ಸಖತ್​ ಇಷ್ಟ ಆಗಿದೆ. ಯೂಟ್ಯೂಬ್​ನಲ್ಲಿ ಈ ಗೀತೆಗೆ 30 ಲಕ್ಷಕ್ಕೂ ಅಧಿಕ ವೀವ್ಸ್​ ಆಗಿದೆ.

See also  ಡಾರ್ಲಿಂಗ್ ಕೃಷ್ಣ ಅಭಿನಯದ ಸಿನಿಮಾಗೆ ಕಿರುತೆರೆಯ ನಟಿ ಮೇಘಾ ಶೆಟ್ಟಿ ನಾಯಕಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು