News Kannada
Thursday, December 08 2022

ಸಾಂಡಲ್ ವುಡ್

ಮಂಗಳೂರಿಗೆ ಆಗಮಿಸಿದ ‘ಕಾಂತಾರ’ ಚಿತ್ರ ತಂಡ

'Kanthara' team arrives in Mangaluru
Photo Credit : News Kannada

ಮಂಗಳೂರು: ಮಂಗಳೂರಿಗೆ ಆಗಮಿಸಿರುವ ನಟ ನಿರ್ದೇಶಕ ರಿಷಬ್ ಶೆಟ್ಟಿಯವರ ಕಾಂತಾರ ಕನ್ನಡ ಚಿತ್ರದ ತಂಡವು ಪತ್ರಕರ್ತರೊಂದಿಗೆ ತಮ್ಮ ಅನುಭವ ಕಥನವನ್ನು ಹಂಚಿಕೊಂಡಿತು. ಕಾಂತಾರ ಚಿತ್ರವು ಊರಿನ ದೈವಾರಾಧನೆ ಹಿನ್ನೆಲೆಯಲ್ಲಿ ಇದ್ದರೂ ಲೋಕದೆಲ್ಲೆಡೆ ಸದ್ದು ಮಾಡುತ್ತಿದೆ. ದೈವ ನರ್ತಕರಾದ ಮುಖೇಶ್ ಅವರು ದೈವ ಸನ್ನಿವೇಶಗಳೆಲ್ಲ ಸೊಗಸಾಗಿ ಬರಲು ಉಪಕರಿಸಿದ್ದಾರೆ ಎಂದು ರಿಷಬ್ ಶೆಟ್ಟಿ ಹೇಳಿದರು.

ಈ ಚಿತ್ರವನ್ನು ದಿವಂಗತ ಅಪ್ಪು ಪುನೀತ್ ರಾಜ್‍ಕುಮಾರ್ ಹಾಗೂ ಮುಖೇಶ್‌ರಿಗೆ ಈ ಕಾರಣಕ್ಕಾಗಿ ಅರ್ಪಿಸುತ್ತಿದ್ದೇನೆ. ಪ್ರಪಂಚದ ಎಲ್ಲ ಕಡೆ ಚಿತ್ರ ದಿನದಿಂದ ದಿನಕ್ಕೆ ಜನಪ್ರಿಯ ಆಗುತ್ತಿದೆ. ಪಂಜುರ್ಲಿ ಮತ್ತು ಗುಳಿಗ ದೈವದ ಭಕ್ತರು ಜಗತ್ತಿನೆಲ್ಲೆಡೆ ಇದ್ದಾರೆ. ಇತರ ಭಾಷೆಗೆ ಡಬ್ ಮಾಡುವಂತೆಯೂ ಬೇಡಿಕೆ ಬಂದಿದೆ ಎಂದು ರಿಷಬ್ ಶೆಟ್ಟಿ ತಿಳಿಸಿದರು.

ನಾಯಕಿ ಸಪ್ತಮಿ ಗೌಡ ಮಾತನಾಡಿ ಕಾಂತಾರಕ್ಕಾಗಿ ನಾನು ಇಲ್ಲಿನ ಕನ್ನಡ ಕಲಿತು ಮಾತನಾಡಿದೆ. ಅಲ್ಲದೆ ಕೋಲ ಅನುಭವ ನನಗೆ ಹೊಸ ಲೋಕ ತೋರಿಸಿದೆ ಎಂದು ಹೇಳಿದರು, ಇದು ನನ್ನ ಎರಡನೆಯ ಸಿನೆಮಾ ಎಂದರು.

ದೈವ ನರ್ತಕ ಮುಖೇಶ್ ಮಾತನಾಡಿ ದೈವಕ್ಕೆ ಅಪಚಾರ ಆಗದಂತೆ ಈ ಚಿತ್ರ ನಿರ್ಮಾಣ ಆಗಿದೆ, ಅದೇ ಈ ಕಾಂತಾರ ಕತೆಯ ಹೆಚ್ಚುಗಾರಿಕೆ ಎಂದು ಅವರು ತಿಳಿಸಿದರು.

ಖಳನಾಯಕ ಪಾತ್ರ ಮಾಡಿದ್ದ ಪ್ರಮೋದ್ ಶೆಟ್ಟಿ, ನಟರಾದ ಪ್ರಕಾಶ್ ತೂಮಿನಾಡು, ಸನಿಲ್ ಗುರು ಮೊದಲಾದವರು ಉಪಸ್ಥಿತರಿದ್ದರು. ಶಿವದೂತೆ ಗುಳಿಗ ನಾಟಕದಲ್ಲಿ ಹೆಸರು ಮಾಡಿದ್ದ ಸ್ವರಾಜ್ ಅವರು ಕೂಡ ಚಿತ್ರದಲ್ಲಿ ಒಂದು ಪಾತ್ರ ವಹಿಸಿದ್ದು ಅವರೂ ಭಾಗವಹಿಸಿ ಕೃತಜ್ಞತೆ ಸಲ್ಲಿಸಿದರು.

See also  ದೇಶದಲ್ಲಿ ಎನ್ ಡಿಎ ಸರ್ಕಾರ ಬಂದ ಬಳಿಕ ಪರಿವರ್ತನೆ ಆರಂಭವಾಗಿದೆ: ನಳಿನ್ ಕುಮಾರ್ ಕಟೀಲ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು