News Kannada
Thursday, December 01 2022

ಸಾಂಡಲ್ ವುಡ್

ಮೈಸೂರು: ಶುಕ್ರವಾರ ತೆರೆಗೆ ಬರಲಿದೆ ಶುಭಮಂಗಳ

Photo Credit : By Author

ಮೈಸೂರು: ಇಡೀ ಕುಟುಂಬ ಕುಳಿತು ನೋಡಬಹುದಾದ ಸದಭಿರುಚಿಯ ಕಥೆಯುಳ್ಳ ಶುಭಮಂಗಳ ಚಲನಚಿತ್ರ ಇದೇ ಶುಕ್ರವಾರ (ಅ.14) ರಾಜ್ಯಾದ್ಯಂತ ಚಲನಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ಈ ಕುರಿತಂತೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕಿ ನಟಿ ಮೇಘನಾ ಗಾಂವ್ಕರ್ ಅವರು ಶುಭಮಂಗಳ ಸಿನಿಮಾವನ್ನು ಜನತೆ ವೀಕ್ಷಿಸಿ ಪ್ರೋತ್ಸಾಹಿಸಬೇಕೆಂದು ಪ್ರೇಕ್ಷಕರಲ್ಲಿ ಮನವಿ ಮಾಡಿದರು. ಸಿನಿಮಾದ ಬಗ್ಗೆ ಸಿನಿಮಾ ಸಾಗುವ ಹಾದಿಯ ಬಗ್ಗೆ ಸೂಕ್ಷ್ಮವಾಗಿ ವಿವರಿಸಿದ ಅವರು, ವಿವಾಹ ನಡೆಯುತ್ತಿರುವ ವೇಳೆ ಛೌಲ್ಟ್ರಿಯೊಂದರಲ್ಲಿ ಒಂದಕ್ಕೊಂದು ಸಂಬಂಧವಿರುವ ಐದು ಕಥೆಗಳಲ್ಲಿ ಈ ಚಲನಚಿತ್ರ ಸಾಗುತ್ತದೆ.

ಇಡೀ ಚಲನಚಿತ್ರದ ಚಿತ್ರೀಕರಣ ಛೌಲ್ಟ್ರಿಯಲ್ಲೇ ನಡೆದಿದ್ದು, ಕೋವಿಡ್ ಕಾರಣದಿಂದಾಗಿ ತಡವಾಗಿ ಬಿಡುಗಡೆಯಾಗುತ್ತಿದೆ. ಇದರಲ್ಲಿನ ಎಲ್ಲ ಹಾಡುಗಳೂ ಮೆಚ್ಚುಗೆ ಪಡೆದಿವೆ. ಕೆಟ್ಟ ಹಾಸ್ಯ ಅಥವಾ ಅಸಭ್ಯ ದೃಶ್ಯಗಳಿಗೆ ಇದರಲ್ಲಿ ಅವಕಾಶ ನೀಡಿಲ್ಲ. ಹೀಗಾಗಿ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ನೋಡಬಹುದಾಗಿದೆ. ಉತ್ತಮ ಸಂದೇಶವನ್ನೂ ಚಲನಚಿತ್ರ ಒಳಗೊಂಡಿದೆ ಮಾಹಿತಿ ನೀಡಿದರು.

ಈ ವೇಳೆ ನಿರ್ದೇಶಕ ಸಂತೋಷ್ ಗೋಪಾಲ್, ಕಲಾವಿದರಾದ ರಾಕೇಶ್ ಮೈಯಾ, ದೀಪ್ತಿ ನಾಗೇಂದ್ರ, ಇನ್ನಿತರರು ಹಾಜರಿದ್ದರು.

See also  ನಟ ಪುನೀತ್‌ ರಾಜಕುಮಾರ್‌ ಮಕ್ಕಳ ದಿನಾಚರಣೆಗೆ ವಿಶ್​ ಮಾಡಿರುವ ಹಳೆ ವಿಡಿಯೋ ವೈರಲ್‌
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು