ಗದಗ: ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನ ಚರಿತ್ರೆಯನ್ನು ಆಧರಿಸಿದ ವಿರಾಟಾಪುರ ವಿರಗಿ ಚಿತ್ರದ ಟ್ರೈಲರ್ ಅನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಜ.3ರ ಭಾನುವಾರ ನಗರದಲ್ಲಿ ಬಿಡುಗಡೆ ಮಾಡಿದರು.
ವಿಜಯೇಂದ್ರ ಮಾತನಾಡಿ, ನಮ್ಮ ದೇಶದ ಮಠಾಧೀಶರು ತ್ರಿವಿಧ ದಾಸೋಹದ ಮಹತ್ವವನ್ನು ಜಗತ್ತಿಗೆ ಬೋಧಿಸಿದ್ದಾರೆ. ಹಾನಗಲ್ಲ ಶ್ರೀ ಗುರುಕುಮಾರ ಶಿವಯೋಗಿಗಳ ಜೀವನ ಚರಿತ್ರೆಯನ್ನು ಚಲನಚಿತ್ರವನ್ನಾಗಿ ಮಾಡಿರುವುದು ಸಂತೋಷದ ಸಂಗತಿ.
ಕುಮಾರ ಶಿವಯೋಗಿಗಳು ಅನುಸರಿಸಿದ ಹಾದಿ, ಸಮಾಜಕ್ಕೆ ನೀಡಿದ ಉತ್ತಮ ಸಂದೇಶ ಮತ್ತು ನೈತಿಕ ಪಾಠಗಳನ್ನು ಯುವಕರಿಗೆ ತಲುಪಿಸಲು ವಿರಾಟಾಪುರ ವಿರಗಿ ಚಿತ್ರ ದೇಶದ ಪ್ರತಿಯೊಬ್ಬ ಪ್ರಜೆಗೂ ತಲುಪಲಿ ಎಂದು ಹಾರೈಸಿದರು.