News Kannada
Friday, February 03 2023

ಸಾಂಡಲ್ ವುಡ್

‘ಮೊದಲ ಮಳೆ’ ಸುರಿಸಲು ತಯಾರಾದ ಚಿತ್ರತಂಡ

Team ready to release 'modala male'
Photo Credit : By Author

ಮಳೆಯ ಟೈಟಲ್ ಹೊಂದಿರುವ ಬಹಳಷ್ಟು ಚಿತ್ರಗಳು ಬಂದು ಹೋಗಿವೆ. ಇದೀಗ ಬರುತ್ತಿರುವ ಚಿತ್ರದ ಹೆಸರು ಮೊದಲಮಳೆ.. ಈ ಚಿತ್ರದ ಟೈಲರ್ ಬಿಡುಗಡೆಯಾಗಿದ್ದು, ಸುಮಾರು 40 ದಿನಗಳ ಕಾಲ ಚಿತ್ರೀಕರಣ ಮಾಡಿ ಮುಗಿಸಲಾಗಿದ್ದು, ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್ ಸಿಕ್ಕಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಚಿತ್ರವನ್ನು ಬಹು ಬೇಗವೇ ತೆರೆಗೆ ತರಲು ಚಿತ್ರತಂಡ ತಯಾರಿ ನಡೆಸುತ್ತಿದೆ.

ಮೊದಲ ಮಳೆಯ ಚಿತ್ರೀಕರಣವನ್ನು ಹೆಸರಿನಂತೆಯೇ ಮಲೆನಾಡಾದ ಮಡಿಕೇರಿ, ಸಕಲೇಶಪುರ ಸೇರಿದಂತೆ ಮೈಸೂರು, ಬೆಂಗಳೂರು ಸುತ್ತಮುತ್ತ ನಡೆಸಲಾಗಿದೆ. ಚಿತ್ರಕ್ಕೆ ಬಂಡವಾಳ ಹಾಕಿ ನಾಯಕನೂ ಆಗಿರುವುದು ರಾಜಾನರಸಿಂಹ. ಇವರಿಗೆ ಚಿತ್ರದಲ್ಲಿ ಮಮತಾಗೌಡ, ಸಾಹಿತ್ಯ, ಉಷಾ, ಪ್ರಿಯಾಶೆಟ್ಟಿ, ಸೇರಿದಂತೆ ಒಂಭತ್ತು ಜನ ನಾಯಕಿಯರಿದ್ದಾರೆ. ಚಿತ್ರದ ಕಥೆ ಏನೆಂದರೆ ಯಾವ ಹುಡುಗಿಯೂ ಇಷ್ಟಪಡದಂಥ (ವಿ)ರೂಪವಂತ ಹುಡುಗನೊಬ್ಬ ಮದುವೆಯಾಗಲು ಹೊರಟಾಗ ಏನೇನಾಯಿತು ಎಂಬುದೇ ಆಗಿದೆ. ಇದನ್ನು ಹಾಸ್ಯಮಯ ವಾಗಿ ಹೇಳುವ ಪ್ರಯತ್ನವನ್ನು ಚಿತ್ರದಲ್ಲಿ ಮಾಡಲಾಗಿದೆಯಂತೆ. ಇದರ ಜತೆಗೆ ಮರ್ಡರ್ ಮಿಸ್ಟ್ರಿ, ಕಾಮಿಡಿ, ಹಾರರ್ ಎಲ್ಲವೂ ಇದೆಯಂತೆ. ರಾಜಶರಣ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದರೆ, ಪ್ರಸನ್ನ ಭೋಜಶೆಟ್ಟರ್ ಅವರ ಸಂಗೀತ ಸಂಯೋಜನೆ ಮತ್ತು ಛಾಯಾಗ್ರಹಣವಿದೆ.

ಇತ್ತೀಚೆಗೆ ನಡೆದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಾಯಕ ರಾಜಾನರಸಿಂಹ ಮಾತನಾಡಿ, ನಾನೊಬ್ಬ ರೈತನಮಗ, ನಟ ಆಗಬೇಕು ಎನ್ನುವುದು ನನ್ನ ಕನಸು. ಒಂದು ಸಿನಿಮಾ ಮಾಡಲುಹೋಗಿ ಮೋಸಹೋದೆ. ಈಗ ನಾನೇ ನಿರ್ಮಾಪಕ ಹಾಗೂ ನಾಯಕನಾಗಿ ಈ ಚಿತ್ರ ಮಾಡಿದ್ದೇನೆ. ಏನೋ ಸಾಧನೆ ಮಾಡಲು ಹಳ್ಳಿಯಿಂದ ಬಂದ ಜವರಾಯ ಕೊನೆಗೆ ಏನಾದ ಎನ್ನುವುದೇ ಈ ಚಿತ್ರದ ಕಥೆಯಲ್ಲಿದೆ ಎಂದು ಹೇಳಿದರು.

ಇನ್ನು ನಿರ್ದೇಶಕ ರಾಜಶರಣ್ ಮಾತನಾಡಿ, ಹಿಂದೆ ಎಮ್ಮೆತಮ್ಮ ಎಂಬ ಚಿತ್ರ ಮಾಡಿದ್ದೆ. ಇದು ನನ್ನ ಎರಡನೇ ಚಿತ್ರ. ರಾಜಾನರಸಿಂಹ 5 ವರ್ಷದ ಸ್ನೇಹಿತರು, ಅವರಿಗಾಗಿಯೇ ಒಂದು ಕಥೆ ಮಾಡಿದೆ, ಆ ಚಿತ್ರ ಆಗಲಿಲ್ಲ, ಇವರುಗೇನು 10 ಜನ ಹೀರೋಯಿನ್ ಇಟ್ಕೊಂಡು ಮಾಡಕ್ಕಾಗುತ್ತಾ ಎನ್ನುವ ಮಾತು ಬಂತು. ಯಾಕಾಗಲ್ಲ ಅಂತ ಚಾಲೆಂಜ್ ತಗೊಂಡು ಈ ಚಿತ್ರ ಮಾಡಿದ್ದೇನೆ, ವ್ಯಕ್ತಿಯ ಜೀವನದಲ್ಲಿ ಮದುವೆ ಎನ್ನುವುದು ಮೊದಲಮಳೆ ಇದ್ದಹಾಗೆ, ನಾಯಕನ ಲೈಫ್ ನಲ್ಲೂ ಮೊದಲಮಳೆ ಆಗುತ್ತಾ ಇಲ್ವಾ ಅನ್ನೋದೇ ಈ ಚಿತ್ರವಾಗಿದೆ ಎಂದರು.

ಇದೇ ವೇಳೆ ಚಿತ್ರದ ಬಗ್ಗೆ ನಟ ಗಣೇಶರಾವ್, ಜೋತಿ ಮರೂರು, ರಾಜ್ ಅಲ್ಲದೆ ಹಾಜರಿದ್ದ ನಾಲ್ವರು ನಾಯಕಿಯರು ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡಿದ್ದು ವಿಶೇಷವಾಗಿದೆ. ಮೊದಲ ಮಳೆ ಯಾವಾಗ ಸುರಿಯುತ್ತದೆ ಎನ್ನುವುದು ಪ್ರೇಕ್ಷಕರ ಕಾತರವಾಗಿದೆ.

See also  ನಟ ಪುನೀತ್​ ರಾಜ್​ಕುಮಾರ್ ಅಗಲಿಕೆ ನೋವನ್ನು ತಾಳಲಾರದೆ ಖಿನ್ನತೆಗೆ ಒಳಗಾಗಿದ್ದ ಅಭಿಮಾನಿ ಆತ್ಮಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು