ಬೆಂಗಳೂರು: ಕಾಂತಾರ ಚಿತ್ರದಲ್ಲಿ ಗಮನಸೆಳೆದ ಪಾತ್ರಗಳ ಪೈಕಿ ತಾಯಿ ಪಾತ್ರವೂ ಒಂದು. ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮಾನಸಿ ಸುಧೀರ್, ಈಗ ಸದ್ದಿಲ್ಲದೇ ಇನ್ನೊಂದು ಹೊಸ ಚಿತ್ರದಲ್ಲಿ ತಾಯಿಯಾಗಿ ನಟಿಸಿದ್ದಾರೆ.
ಅದೇ ಜುಗಲಬಂಧಿ. ಜುಗಲ್ ಬಂದಿ ಚಿತ್ರದ ಫಸ್ಟ್‌ಲುಕ್ ಮತ್ತು ಹಾಡು ಬಿಡುಗಡೆ ಆಗಿದ್ದು, ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಇದು ಬರೀ ತಾಯಿ ಸೆಂಟಿಮೆಂಟಲ್ ಚಿತ್ರವಷ್ಟೇ ಅಲ್ಲ. ಬೇರೆ, ಬೇರೆ ಕಥೆಗಳು ಸಹ ಇವೆ. ಆ ಕಥೆಗಳನ್ನೆಲ್ಲ ಒಟ್ಟಿಗೆ ಸೇರಿಸಿ ಜುಗಲಬಂದಿ ಮಾಡಿದ್ದಾರೆ ನಿರ್ದೇಶಕ ದಿವಾಕರ್ ಡಿಂಡಿಮ.
ನಿರ್ದೇಶನ ಜೊತೆಗೆ ಡಿಂಡಿಮ ಬ್ಯಾನರ್‌ನಡಿ ಚಿತ್ರವನ್ನೂ ಅವರೇ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಮಾನಸಿ ಸುಧೀರ್, ಅರ್ಚನಾ ಕೊಟ್ಟಿಗೆ, ಅಶ್ವಿನ್ ರಾವ್ ಪಲ್ಲಕ್ಕಿ, ಸಂತೋಷ್ ಆಶ್ರಯ್ ಮೊದಲಾದವರು ನಟಿಸಿದ್ದಾರೆ.