News Kannada
Tuesday, June 06 2023
ಗಾಂಧಿನಗರ

ಬೆಂಗಳೂರು: ಬಿಜೆಪಿ ಸ್ಟಾರ್‌ ಪ್ರಚಾರಕರಾಗಿ ಸುದೀಪ್‌, ಸುದ್ದಿಗೋಷ್ಠಿಯಲ್ಲಿ ಸಿಗಲಿದೆ ಸ್ಪಷ್ಟತೆ

Bommai files nomination papers
Photo Credit : Facebook

ಬೆಂಗಳೂರು: ಇಂದು ಮಧ್ಯಾಹ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಸುದೀಪ್ ಕೂಡ ಭಾಗವಹಿಸುವ ಸಾಧ್ಯತೆ ಇದೆ. ಖಾಸಗಿ ಹೋಟೆಲ್​ನಲ್ಲಿ ಈ ಪ್ರೆಸ್​ಮೀಟ್​ ನಡೆಯಲಿದೆ. ಸುದ್ದಿಗೋಷ್ಠಿ ವೇಳೆ ಸುದೀಪ್ ಅವರು ಬಿಜೆಪಿಗೆ ಬೆಂಬಲ ಸೂಚಿಸುವ ಸಾಧ್ಯತೆ ಇದೆ. ಸುದೀಪ್‌ ಅವರನ್ನು ಬಿಜೆಪಿಗೆ ಕರೆತರಲು ಈ ಹಿಂದೆಯು ಪ್ರಯತ್ನ ನಡೆದಿತ್ತು. ಆದರೆ ಫಲನೀಡಿರಲಿಲ್ಲ. ಈಗ ಇಂತಹ ಪ್ರಯತ್ನಕ್ಕೆ ಬಲ ದೊರೆತಿದೆ.

ಸುದೀಪ್‌ ಅವರು ಬೊಮ್ಮಾಯಿ ಅವರೊಂದಿಗೆ ಆತ್ಮೀಯತೆ ಹೊಂದಿದ್ದು ಈ ನಿಟ್ಟಿನಲ್ಲಿ ಸುದೀಪ್‌ ಪಕ್ಷ ಸೇರ್ಪಡೆಯಾಗದಿದ್ದರೂ ಸ್ಟಾರ್‌ ಪ್ರಚಾರಕರಾಗಿ ಭಾಗವಹಿಸುತ್ತಾರೆ ಎನ್ನಲಾಗಿದೆ.

ಸುದೀಪ್ ಅವರು ಬಿಜೆಪಿ ಪ್ರಚಾರ ರಾಯಭಾರಿ ಆದರೆ ಪಕ್ಷಕ್ಕೆ ದೊಡ್ಡ ಬಲ ಸಿಕ್ಕಂತೆ ಆಗಲಿದೆ. ಬಿಜೆಪಿ ಪಕ್ಷದ ಪರ ಅವರ ಅಭಿಮಾನಿಗಳು ಪ್ರಚಾರ ಮಾಡಲಿದ್ದಾರೆ. ಸುದೀಪ್​ಗೆ ದೊಡ್ಡ ಅಭಿಮಾನಿ ವರ್ಗ ಇದೆ. ಅವರು ಪಕ್ಷದ ಪರ ಪ್ರಚಾರ ಮಾಡಿದರೆ ದೊಡ್ಡ ಬಲ ಸಿಕ್ಕಂತೆ ಆಗಲಿದೆ ಅನ್ನೋದು ಬಿಜೆಪಿ ಆಲೋಚನೆ. ಈ ಕಾರಣಕ್ಕೆ ಸುದೀಪ್​ಗೆ ಆಫರ್ ನೀಡಲಾಗಿತ್ತು. ಅವರು ಕಮಲದ ಪರ ಪ್ರಚಾರ ಮಾಡಲು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಇಂದು ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ಸಿಗಲಿದೆ.

See also  ಉದ್ಘಾಟನೆ ಹಂತಕ್ಕೆ ತಲುಪಿದ್ದ ಹರೇಕಳ-ಅಡ್ಯಾರ್ ಕಿಂಡಿ ಅಣೆಕಟ್ಟು ಕಾಮಗಾರಿಗೆ ಹೈಕೋರ್ಟ್ ನಿಂದ ತಡೆ !
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು