News Karnataka Kannada
Thursday, April 25 2024
ಸಾಂಡಲ್ ವುಡ್

777 ಚಾರ್ಲಿ ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್

Rakshit Shetty
Photo Credit :
ಬೆಂಗಳೂರು : ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
777 ಚಾರ್ಲಿ ಸಿನಿಮಾ ಟೀಸರ್ ಗೆ ಅತ್ಯದ್ಭುತ ಪ್ರತಿಕ್ರಿಯೆ ದೊರೆತ ನಂತರ ಸಿನಿಮಾ ತಂಡ ಸಾಂಗ್ ರಿಲೀಸ್ ಮಾಡಲು ಪ್ಲಾನ್ ಮಾಡುತ್ತಿದೆ. ಐದು ಭಾಷೆಗಳಲ್ಲಿಯೂ ಪ್ರಸಿದ್ಧ ಹಿನ್ನೆಲೆ ಗಾಯಕರು ತಮ್ಮ ಧ್ವನಿ ನೀಡಿದ್ದಾರೆ.
ತಮ್ಮ ವಿಶಿಷ್ಟ ಧ್ವನಿಗೆ ಹೆಸರುವಾಸಿಯಾದ ಜಸ್ಸಿ ಗಿಫ್ಟ್, ಮಲಯಾಳಂನಲ್ಲಿ ಹಾಡನ್ನು ಹಾಡಿದ್ದಾರೆ. ಗಾನ ಬಾಲಚಂದರ್, ವಿಜಯ್ ಪ್ರಕಾಶ್, ರಾಮ್ ಮಿರಿಯಾಲ ಮತ್ತು ಸ್ವರೂಪ್ ಖಾನ್ ಕ್ರಮವಾಗಿ ತಮಿಳು, ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಳ ಅವತರಣಿಕೆಗಳನ್ನು ಹಾಡಿದ್ದಾರೆ.
ಕಿರಣ್‌ರಾಜ್  ನಿರ್ದೇಶಿಸಿರುವ 777 ಚಾರ್ಲಿಯಲ್ಲಿ ರಕ್ಷಿತ್ ಶೆಟ್ಟಿಯ ಜೊತೆಗೆ ಒಂದು ಪೂರ್ಣ ಪ್ರಮಾಣದ ಪಾತ್ರವನ್ನು ಲ್ಯಾಬ್ರಡಾರ್ ನಾಯಿ ನಿರ್ವಹಿಸುತ್ತಿದೆ.  ಈ ಚಿತ್ರದ ಮೂಲಕ ಬಾಬಿ ಸಿಂಹ ಅವರು ಕನ್ನಡಕ್ಕೆ ಪ್ರವೇಶಿಸುತ್ತಿದ್ದಾರೆ.
ಸಂಗೀತ ಶೃಂಗೇರಿ ಮಹಿಳಾ ನಾಯಕಿಯರಾಗಿರುವ ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಮತ್ತು ಡ್ಯಾನಿಶ್ ಸೇಠ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪರಮಾವ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಜಿಎಸ್ ಗುಪ್ತಾ ಸಿನಿಮಾ ನಿರ್ಮಿಸುತ್ತಿದ್ದಾರೆ. ನೋಬಿನ್ ಪೌಲ್ ಸಂಗೀತ ನೀಡಿದ್ದಾರೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು