News Kannada
Monday, February 26 2024
ಸಾಂಡಲ್ ವುಡ್

ಉತ್ತಮ ಸಂದೇಶ ಸಾರುವ ಬೈರಾಗಿ: ಶಿವಣ್ಣ

Photo Credit : By Author

ಮೈಸೂರು: ಬೈರಾಗಿ ಚಿತ್ರ ಮಾಸ್ ಎಲಿಮೆಂಟ್‌ಗಳ ಜತೆಗೆ ಫಿಲಾಸಪಿಯೊಂದಿಗೆ ಉತ್ತಮ ಸಂದೇಶ ಹೊಂದಿದ್ದು, ಪ್ರೇಕ್ಷಕರಿಗೆ  ಇಷ್ಟವಾಗಲಿದೆ ಎಂದು ಮೈಸೂರಿನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈರಾಗಿ ಪ್ರಸ್ತುತ ನಮ್ಮ ಸುತ್ತಮುತ್ತ ನಡೆಯುವ ಪ್ರಸ್ತುತ ಸನ್ನಿವೇಶಗಳಿಗೆ ಹತ್ತಿರವಾಗಿರುವ ಚಿತ್ರ. ಚಿತ್ರಕತೆ ಬಹಳ ಸಿಂಪಲ್ ಆಗಿದೆ. ನಾವು ಅಂದುಕೊಂಡಿದ್ದಕ್ಕಿಂತ ಅದ್ಧೂರಿಯಾಗಿ ಮೂಡಿ ಬಂದಿದೆ. ಇಲ್ಲಿ ನಾನೇ ಹೀರೋ ಎನ್ನುವುದಕ್ಕಿಂತ ಕತೆಯೇ ನಿಜವಾದ ಹೀರೋ. ಚಿತ್ರಕತೆ ಪಾತ್ರಗಳ ಸುತ್ತ ಸುತ್ತುವುದರಿಂದ ಪ್ರತಿಯೊಂದು ಪಾತ್ರಕ್ಕೂ  ಅದರದೇ ಆದ ಪ್ರಾಮುಖ್ಯತೆ ಇದೆ. ಚಿತ್ರ ನೋಡಿದರೆ ಅದು ಅರ್ಥವಾಗುತ್ತದೆ ಎಂದರು.

ಚಿತ್ರದಲ್ಲಿ ಮಾಸ್ ಎಲಿಮೆಂಟ್‌ಗಳಿವೆ. ಜತೆಗೆ ಫಿಲಾಸಪಿಯನ್ನೂ ಹೇಳಲಾಗಿದೆ. ಭಾವನಾತ್ಮಕ ಸನ್ನಿವೇಶಗಳೂ ಇವೆ. ಮೂರು ಹಾಡುಗಳಿದ್ದು, ಅದ್ಬುತವಾಗಿ ಮೂಡಿಬಂದಿವೆ. ಆಸೆ ಆಕಾಂಕ್ಷಿಗಿಂತ ಮಾನವೀಯತೆ ಮುಖ್ಯ. ಅದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಕ್ಲೈಮ್ಯಾಕ್ಸ್‌ನಲ್ಲಿ ಸಮಾಜಕ್ಕೆ ಉತ್ತಮ ಸಂದೇಶವಿದ್ದು, ಯಾರೂ ಊಹಿಸಲೂ ಸಾಧ್ಯವಿಲ್ಲದ ರೀತಿಯಲ್ಲಿ ಮೂಡಿಬಂದಿದೆ  ಎಂದು ತಿಳಿಸಿದರು.

ನಾನು ಎಲ್ಲಾ ಥರದ ಪಾತ್ರಗಳನ್ನೂ ಮಾಡುತ್ತಿದ್ದೇನೆ. ನನ್ನ ಇತ್ತೀಚಿನ ಚಿತ್ರಗಳ ಟೈಟಲ್‌ಗಳನ್ನು ನೋಡಿದರೆ  ಶಿವರಾಜ್‌ಕುಮಾರ್  ಆಧ್ಯಾತ್ಮದತ್ತ ಹೊರಳುತ್ತಿದ್ದಾರೆ ಅನಿಸುತ್ತದೆ. ಈಗಾಗಲೇ ನನಗೆ ೬೦ ವರ್ಷವಾಗಿರುವುದರಿಂದ ಈ ರೀತಿ ಅನ್ನಿಸುವುದು ಸಹಜ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ಯಾನ್ ಇಂಡಿಯಾ ಚಿತ್ರಗಳ ಕುರಿತು ಮಾತನಾಡಿ, ಇಂದು ಕನ್ನಡ ಚಿತ್ರಗಳು ಎಲ್ಲೆಡೆ ಮಿಂಚುತ್ತಿವೆ. ನಮ್ಮೂರ ಮಂದಾರ ಹೂವೆ, ಜನುಮದ ಜೋಡಿ ಸೇರಿದಂತೆ ನನ್ನ ಅನೇಕ ಸಿನಿಮಾಗಳು ಅಂದೇ ಮೂಲೆ ಮೂಲೆಗೂ ತಲುಪಿದ್ದವು. ಇಂದು ಮಾರುಕಟ್ಟೆ  ದೊಡ್ಡದಾಗಿ ಬೆಳೆದಿರುವುದರಿಂದ ನಮ್ಮ ಸಿನಿಮಾಗಳು ಎಲ್ಲೆಡೆ ಹಿಟ್ ಆಗುತ್ತಿವೆ. ಕೊರೊನಾ ಕಾರಣದಿಂದಾಗಿ ಕೆಲವೆಡೆ ತಲುಪಲು ಸಾಧ್ಯವಾಗಿಲ್ಲವೇನೋ ಎಂದರು.

ನಟ ಡಾಲಿ ಧನಂಜಯ್ ಮಾತನಾಡಿ, ಶಿವಣ್ಣ ಅವರೊಂದಿಗೆ ಟಗರು ನಂತರ ಒಟ್ಟಿಗೆ ಅಭಿನಯಿಸುತ್ತಿದ್ದೇನೆ. ಅಲ್ಲಿನ ಪಾತ್ರಗಳೇ ಬೇರೆ, ಇಲ್ಲಿನ ಪಾತ್ರವೇ ಬೇರೆ. ಈ ಚಿತ್ರದಲ್ಲಿ ನಮ್ಮ ಸುತ್ತಮುತ್ತಲಿನ ಘಟನೆಗಳ ಮೇಲೆ ಕತೆ ಸಾಗುತ್ತದೆ. ಸಂದರ್ಭಕ್ಕೆ ಅನುಗುಣವಾಗಿ ಆದ ತಪ್ಪುಗಳ ಮೇಲೆ ಕತೆ ಸಾಗುತ್ತದೆ. ಮನರಂಜನೆಯ ಜತೆಗೆ ಗಂಭೀರ ವಿಷಯಗಳನ್ನೂ ಚಿತ್ರದಲ್ಲಿ ತೋರಿಸಲಾಗಿದೆ.  ಜು.೧ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡಿ ಎಂದರು. ನಟ ಪೃಥ್ವಿ ಅಂಬರ್, ನಿರ್ಮಾಪಕ ಕೃಷ್ಣ ಸಾರ್ಥಕ್ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು