News Kannada
Friday, February 23 2024
ಮನರಂಜನೆ

ದರ್ಶನ್ ನಟನೆಯ ‘ಕಾಟೇರ’ ಬಿಡುಗಡೆ ದಿನಾಂಕ ಘೋಷಣೆ

ದರ್ಶನ್ ನಟನೆಯ ‘ಕಾಟೇರ ಸಿನಿಮಾ ತನ್ನ ಹೆಸರು, ಪೋಸ್ಟರ್​ನಿಂದ ಈಗಾಗಲೇ ಗಮನ ಸೆಳೆದಿದೆ. ಇದೀಗ ಸಿನಿಮಾದ ಬಿಡುಗಡೆಯನ್ನೂ ಘೋಷಣೆ ಮಾಡಲಾಗಿದ್ದು, ದರ್ಶನ್, ದೊಡ್ಡ-ದೊಡ್ಡ ಸ್ಟಾರ್ ನಟರ ಎದುರು ಅಖಾಡಕ್ಕೆ ಇಳಿದಿದ್ದಾರೆ. ಕಾಟೇರ ಸಿನಿಮಾದ ಸಣ್ಣ ಟೀಸರ್ ಜೊತೆಗೆ ಬಿಡುಗಡೆ ದಿನಾಂಕವನ್ನು ಸಹ ಘೋಷಿಸಲಾಗಿದೆ.
Photo Credit : News Kannada

ಬೆಂಗಳೂರು: ದರ್ಶನ್ ನಟನೆಯ ‘ಕಾಟೇರ ಸಿನಿಮಾ ತನ್ನ ಹೆಸರು, ಪೋಸ್ಟರ್​ನಿಂದ ಈಗಾಗಲೇ ಗಮನ ಸೆಳೆದಿದೆ. ಇದೀಗ ಸಿನಿಮಾದ ಬಿಡುಗಡೆಯನ್ನೂ ಘೋಷಣೆ ಮಾಡಲಾಗಿದ್ದು, ದರ್ಶನ್, ದೊಡ್ಡ-ದೊಡ್ಡ ಸ್ಟಾರ್ ನಟರ ಎದುರು ಅಖಾಡಕ್ಕೆ ಇಳಿದಿದ್ದಾರೆ. ಕಾಟೇರ ಸಿನಿಮಾದ ಸಣ್ಣ ಟೀಸರ್ ಜೊತೆಗೆ ಬಿಡುಗಡೆ ದಿನಾಂಕವನ್ನು ಸಹ ಘೋಷಿಸಲಾಗಿದೆ.

‘ಕಾಟೇರ’ ಸಿನಿಮಾ ಡಿಸೆಂಬರ್ 29ರಂದು ತೆರೆಗೆ ಬರಲಿದೆ. ಡಿಸೆಂಬರ್ ತಿಂಗಳಲ್ಲಿ ಬಾಲಿವುಡ್​ನ ಹಾಗೂ ದಕ್ಷಿಣ ಭಾರತದ ಕೆಲವು ದೊಡ್ಡ ಸ್ಟಾರ್​ ನಟರ ಸಿನಿಮಾಗಳು ತೆರೆಗೆ ಬರುತ್ತಿವೆ. ಅದರ ನಡುವೆ ದರ್ಶನ್ ಸಿನಿಮಾ ಬಿಡುಗಡೆ ಆಗುತ್ತಿದೆ.

ಡಿಸೆಂಬರ್ ತಿಂಗಳ 22 ರಂದು ಹೊಂಬಾಳೆ ಫಿಲಮ್ಸ್ ನಿರ್ಮಿಸಿ, ಪ್ರಭಾಸ್ ನಟಿಸಿರುವ ‘ಸಲಾರ್’ ಸಿನಿಮಾ ಬಿಡುಗಡೆ ಆಗಲಿದೆ. ಅದರ ಹಿಂದೆಯೇ ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ ತೆರೆಗೆ ಬರಲಿದೆ.

‘ಕಾಟೇರ’ ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದು, ರಾಕ್​ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿ. ಇದು ಇವರ ಮೊದಲ ಸಿನಿಮಾ. ಸಿನಿಮಾಕ್ಕೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು