‘ಕಾಂತಾರ’ ಮೂಲಕ ಜನಪ್ರಿಯತೆ ಪಡೆದ ಸಪ್ತಮಿ ಗೌಡ ಅವರಿಗೆ ಇಂದು (ಜೂ.8) ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ವಿಶ್ ಬರುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಅವರಿಗೆ ಶುಭಾಶಯ ತಿಳಿಸಿದ್ದಾರೆ. 2022ರಲ್ಲಿ ತೆರೆಗೆ ಬಂದ ‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದ ಮೂಲಕ ಸಪ್ತಮಿ ಗೌಡ ಅವರಿಗೆ ಇದ್ದ ಬೇಡಿಕೆ ಹೆಚ್ಚಿತು. ಈ ಕಾರಣಕ್ಕೆ ಸಪ್ತಮಿ ಗೌಡಗೆ ಈ ವರ್ಷ ಬರ್ತ್ಡೇ ವಿಶೇಷ.
ಕಾಂತಾರ ಸಿನಿಮಾ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸದ್ದು ಮಾಡಿದ ಮೇಲೆ ಕಾಂತಾರ ನಟಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಅನೇಕ ಸಿನಿಮಾಗಳು ಸಪ್ತಮಿ ಗೌಡ ಕೈಯಲ್ಲಿದೆ. 2020ರಲ್ಲಿ ರಿಲೀಸ್ ಆದ ‘ಪಾಪ್ಕಾರ್ನ್ ಮಂಕಿ ಟೈಗರ್’ ಸಪ್ತಮಿ ಗೌಡ ನಟನೆಯ ಮೊದಲ ಸಿನಿಮಾ. ಇದಾದ ಬಳಿಕ ಅವರು ನಟಿಸಿದ್ದು ‘ಕಾಂತಾರ’ ಚಿತ್ರದಲ್ಲಿ. 2ನೇ ಚಿತ್ರಕ್ಕೆ ಅವರಿಗೆ ದೇಶಾದ್ಯಂತ ಜನಪ್ರಿಯತೆ ಸಿಕ್ಕಿದೆ. ಸದ್ಯ ವಿವೇಕ್ ಅಗ್ನಿಹೋತ್ರಿ ಅವರ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದಲ್ಲಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ.