News Kannada
Saturday, March 02 2024
ಮನರಂಜನೆ

‘ಟೋಬಿ’ಚಿತ್ರಕ್ಕಾಗಿ ಮೂಗು ಚುಚ್ಚಿಸಿಕೊಂಡ ರಾಜ್ ಬಿ ಶೆಟ್ಟಿ

raj b shetty
Photo Credit : Twitter

ರಾಜ್ ಬಿ ಶೆಟ್ಟಿ ನಟಿಸಿರುವ ಟೋಬಿ ಸಿನಿಮಾ ಇನ್ನೊಂದು ತಿಂಗಳ ತರುವಾಯ ಬಿಡುಗಡೆ ಆಗಲಿದೆ. ಇದೇ ಮೊದಲ ಬಾರಿಗೆ ತಾವು ಮಾಸ್ ಎಲಿವೇಷನ್ ಉಳ್ಳ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ರಾಜ್ ಬಿ ಶೆಟ್ಟಿ ಹೇಳಿಕೊಂಡಿದ್ದಾರೆ. ಸಿನಿಮಾದ ಕತೆಯನ್ನು ಟಿಕೆ ದಯಾನಂದ ಬರೆದಿದ್ದರೆ ಚಿತ್ರಕತೆಯನ್ನು ರಾಜ್ ಬಿ ಶೆಟ್ಟಿ ಬರೆದಿದ್ದಾರೆ.

ಸಿನಿಮಾದಲ್ಲಿ ನಾಯಕನ ಪಾತ್ರದಲ್ಲಿ ರಾಜ್ ನಟಿಸಿದ್ದು, ಈಗಾಗಲೇ ಟೀಸರ್ ಹಾಗೂ ಪೋಸ್ಟರ್​ಗಳು ಬಿಡುಗಡೆ ಆಗಿ ವೈರಲ್ ಆಗಿವೆ. ಮೂಗಿಗೆ ದೊಡ್ಡ ಮೂಗುತಿ ಧರಿಸಿರುವ ರಾಜ್ ಬಿ ಶೆಟ್ಟಿಯ ಚಿತ್ರ ಪೋಸ್ಟರ್​ನಲ್ಲಿ ಗಮನ ಸೆಳೆದಿದೆ. ರಾಜ್ ಬಿ ಶೆಟ್ಟಿ, ಟೋಬಿಗಾಗಿ ನಿಜವಾಗಿಯೇ ಮೂಗು ಚುಚ್ಚಿಸಿಕೊಂಡಿದ್ದರಂತೆ. ಆ ವಿಡಿಯೋವನ್ನು ಇದೀಗ ಬಿಡುಗಡೆ ಮಾಡಲಾಗಿದೆ.

ಸಾಮಾನ್ಯ ಮೂಗುತಿಗಳಿಗಿಂತಲೂ ಗಾತ್ರದಲ್ಲಿ ದೊಡ್ಡದಾದ ಮೂಗುತಿಯನ್ನು ರಾಜ್ ಬಿ ಶೆಟ್ಟಿ ಚುಚ್ಚಿಸಿಕೊಂಡಿದ್ದಾರೆ. ಮೊದಲು ಮೂಗು ಚುಚ್ಚಿದಾಗ ರಾಜ್ ಬಿ ಶೆಟ್ಟ ಆರಾಮವಾಗಿದ್ದರಾದರೂ ಬಳಿಕ ಮೂಗು ಚುಚ್ಚಿದ ಸ್ಥಳದಲ್ಲಿ ಗಾಯವಾಗಿ ನೋವು ಶುರುವಾಯ್ತಂತೆ. ಶೂಟಿಂಗ್ ನಡೆಯುವಾಗ ಶೆಟ್ಟರ ಕೈತಗುಲಿ ಮೂಗುತಿ ಮೂಗಿನ ಹೊಳ್ಳೆ ಹರಿದು ಹೊರಗೆ ಬಿದ್ದಿತ್ತಂತೆ. ಅದನ್ನೂ ತೀವ್ರ ನೋವನ್ನು ಶೆಟ್ರಿಗೆ ನೀಡಿದ್ದಾಗಿ ಅವರ ಸಹಾಯಕ ನಿರ್ದೇಶಕರು ನೆನಪು ಮಾಡಿಕೊಂಡಿದ್ದಾರೆ.

https://twitter.com/i/status/1679439716209553411

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು