News Karnataka Kannada
Friday, April 19 2024
Cricket
ಸಾಂಡಲ್ ವುಡ್

ಇಂದು ನಟ ರಕ್ಷಿತ್‌ ಶೆಟ್ಟಿ ಹುಟ್ಟುಹಬ್ಬ: ಶುಭ ಸುದ್ದಿ ಕೊಟ್ಟ ಸಿಂಪಲ್‌ ಸ್ಟಾರ್

Rakshit Shetty's birthday today: Simple star gives good news
Photo Credit : News Kannada

ಬೆಂಗಳೂರು: ಜೂನ್‌ 6 ಸ್ಯಾಂಡಲ್‌ವುಡ್‌ ನಟ ರಕ್ಷಿತ್‌ ಶೆಟ್ಟಿ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿಯೇ ಅವರ ಅಭಿಮಾನಿಗಳಿಗೆ ಮತ್ತೊಂದು ಖುಷಿಯ ಸುದ್ದಿ ಸಿಕ್ಕಿದೆ. ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ ಸಪ್ತ ಸಾಗರದಾಚೆ ಎಲ್ಲೋ ಚಿತ್ರ ಎರಡು ಭಾಗಗಳಲ್ಲಿ ಮೂಡಿಬರಲಿದೆ ಎಂದು ರಕ್ಷಿತ್‌ ಹೇಳಿದ್ದಾರೆ.

ಅಲ್ಲದೆ ಇದನ್ನು ಚಿತ್ರತಂಡವೂ ಕನ್ಫರ್ಮ್‌ ಮಾಡಿದೆ. ಜೂನ್ 15ರಂದು ಸಪ್ತಸಾಗರದಾಚೆ ಎಲ್ಲೋ ಬಿಡುಗಡೆ ದಿನಾಂಕ ಯಾವಾಗ ಎಂದು ಘೋಷಣೆಯಾಗಲಿದೆ. ಈ ಬಗ್ಗೆ ಟ್ವಿಟರ್‌ನಲ್ಲಿ ಅವರು ಹೇಳಿದ್ದಿಷ್ಟು.

ನಿಮ್ಮವನು ಇಂದು ಸ್ಪೆಷಲ್ ಅನೌನ್ಸ್​ಮೆಂಟ್ ಮಾಡಲು ಬಂದಿದ್ದೇನೆ. ಸಮಯ, ಪ್ರೀತಿ ಮತ್ತು ಕನಸುಗಳನ್ನು ಸ್ಪಷ್ಟವಾಗಿ ಕೆತ್ತಿದ ಎಸ್‌ಎಸ್‌ಇ ಈಗ ಎರಡು ಭಾಗಗಳಲ್ಲಿ ನಿಮ್ಮ ಮುಂದೆ ಬರಲಿದೆ , ಸೈಡ್ ಎ ಮತ್ತು ಸೈಡ್ ಬಿ ಚಿತ್ರೀಕರಣ ಮುಗಿದಿದೆ. ಈ ಸಿನಿಮಾದ ಎರಡೂ ಭಾಗಗಳ ಬಿಡುಗಡೆ ದಿನಾಂಕವನ್ನು ಜೂನ್​ 15 ರಂದು ಪ್ರಕಟಿಸಲಾಗುವುದು. ನೀವು ನಮ್ಮನ್ನು ಯಾವಾಗಲೂ ಪ್ರೀತಿಯಿಂದ ಸ್ವೀಕರಿಸುತ್ತೀರಿ ಎಂದು ನಾವು ಭಾವಿಸುತ್ತೇವೆ ಎಂದು ರಕ್ಷಿತ್ ಶೆಟ್ಟಿ ಬರೆದುಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು