ತೂಕ ಇಳಿಸಲು ನಿಮಗೆ ಈ ಕ್ರಮಗಳು ಸಹಕಾರಿ

ತೂಕ ಇಳಿಸಲು ನಿಮಗೆ ಈ ಕ್ರಮಗಳು ಸಹಕಾರಿ

Pavan Kumar   ¦    Dec 14, 2020 01:43:52 PM (IST)
ತೂಕ ಇಳಿಸಲು ನಿಮಗೆ ಈ ಕ್ರಮಗಳು ಸಹಕಾರಿ

ಪ್ರಮುಖವಾಗಿ ಆರೋಗ್ಯಕರ ಹಾಗೂ ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸುವುದು ಹೆಚ್ಚಿನ ಆರೋಗ್ಯಕರವಾಗಿದೆ. ಬೆಳಗ್ಗೆ ತಿಂಡಿ ಇಂದ ಹಿಡಿದು ರಾತ್ರಿ ಊಟದ ವರೆಗೂ ನಮ್ಮ ನಾವು ಪೋಷಣೆ ಮಾಡಬೇಕಿದೆ. 

ಬೆಳ್ಳಂ ಬೆಳಗ್ಗೆ ಕಾಫಿಯನ್ನೂ ಟೀ ಯನ್ನೋ ಕುಡಿದು ನಮ್ಮ ದಿನವನ್ನ ಪ್ರಾರಂಭಿಸುವುದರ ಬದಲು ಡ್ರೈ ಫ್ರೂಟ್ಸ್ ನೊಂದಿಗೆ ಪ್ರಾರಂಭಿಸುವುದು ಉತ್ತಮ. ತಿಂಡಿಯ ನಂತರ ಬೇಕಾದರೆ ಟೀ ಯನ್ನೊ ಕಾಫಿಯನ್ನೂ ಸೇವಿಸಬಹುದು. ತಿಂಡಿಯ ನಂತರ ಇವುಗಳನ್ನ ಸೇವಿಸಿದರೆ ನಿಮಗೆ ಹಸಿವಾಗದೆ ಇರಬಹುದು. ಇದು ಆರೋಗ್ಯಕರವಾದ ತೂಕದ ಕಡಿತ ಅಲ್ಲ. 

ಪ್ರತಿದಿನ ನೀವು ಒಂದಿಷ್ಟು ಹಣ್ಣುಗಳನ್ನು ಸೇವಿಸಬೇಕು ಏಕೆಂದರೆ ಇವು ನಿಮ್ಮ ದೇಹಕ್ಕೆ ಪೋಷಕಾಂಶಗಳನ್ನು ನೀಡುತ್ತವೆ. 

ರಾತ್ರಿ ಊಟದ ನಂತರ ಕನಿಷ್ಟ 2 ಗಂಟೆಯ ನಂತರ ನೀವು ಮಲಗಬೇಕು. ಹಾಗೂ ರಾತ್ರಿ ನಿಮ್ಮ ಹಸಿವಿನ 80% ಆಹಾರವನ್ನು ಮಾತ್ರ ಸೇವಿಸಬೇಕು. ಅಂದರೆ ಕೊಂಚ ಡಯಟ್ ಮಾಡೋದು ಇಲ್ಲಿ ಮುಖ್ಯ.  

ಜೊತೆಗೆ ತರಕಾರಿ ಸೇವನೆ ಮಾಡುವಾಗ ಸತ್ವಯುತ, ಪ್ರೊಟೀನ್ ಹೆಚ್ಚಿರುವ ಆಹಾರವನ್ನು ನೀವು ಸೇವಿಸಿ ದೇಹವನ್ನ ಯಾವಾಗಲೂ ಸಮತೋಲನದಲ್ಲಿ ಇರಿಸಿಕೊಳ್ಳಲು ಪ್ರಯತ್ನಿಸಿ.