ಮಾದಕ ವಸ್ತು ಮದ್ದಾಗಲು ಸಾಧ್ಯವೇ?

ಮಾದಕ ವಸ್ತು ಮದ್ದಾಗಲು ಸಾಧ್ಯವೇ?

Anto Kristen   ¦    Sep 15, 2020 10:23:48 AM (IST)
ಮಾದಕ ವಸ್ತು ಮದ್ದಾಗಲು ಸಾಧ್ಯವೇ?

ಇದೀಗ ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಅಲೆ ಎದ್ದಿದ್ದು, ಎಲ್ಲರ ಕಿವಿ ನೆಟ್ಟಗಾಗುತ್ತದೆ. ಡ್ರಗ್ಸ್ ಕುರಿತಾಗಿ ಹಲವಾರು ವಿಚಾರಗಳು ಬೆಳಕಿಗೆ ಬರುತ್ತಿದೆ. ಜೊತೆಗೆ ಹಲವು ಚರ್ಚೆಗಳು ನಡೆಯುತ್ತಿದೆ.ಇದು ಡ್ರಗ್ಸ್ ಗೆ ಸಂಬಂಧ ಇರುವ ಮಾಹಿತಿಗಳು ಮತ್ತು ಅವುಗಳ ಜ್ಞಾನವು ಯುವಕರ ಮಾರ್ಗವನ್ನುಂತಲೂಪುವಂತೆ ಮಾಡುತ್ತಿದೆ. ಯಾವುದು ಎಷ್ಟರ ಮಟ್ಟಿಗೆ ನಿಜ ಎನ್ನುವುದು ಅಸ್ಪಷ್ಟ. ಅವುಗಳ ಸ್ಪಷ್ಟ ಕಲ್ಪನೆ ನಮಗೆ ಬೇಕಾಗಿದೆ ಯಾಕೆಂದರೆ ಈ ಅಲ್ಪ ಸ್ವಲ್ಪ ಮಾಹಿತಿಗಳು ಕುತೂಹಲವನ್ನು ಉಂಟು ಮಾಡುವುದರ ಮೂಲಕ ಯುವಕರನ್ನು ತಪ್ಪು ದಾರಿಗೆ ತಳ್ಳುತ್ತಿದೆ.

ಇತಿಹಾಸ -

1985ರಲ್ಲಿ ರಾಜೀವ್ ಗಾಂಧಿ ಸರ್ಕಾರ ಅಮೆರಿಕಾದ ಒತ್ತಡದ ಮೇರೆಗೆ ( ನರ್ಕೊಟಿಕ್ ಡ್ರಗ್ಸ್ ಆಂಡ್ ಸೈಖೊಟ್ರಾಪಿಕ್ ಸಬ್ಟನ್ಸಸ್) ಎನ್ನುವ ಆಕ್ಟ್ ಅನ್ನು ಜಾರಿಗೆ ತಂದಿತು. ಇದರ ಪ್ರಕಾರ ಕೋಕೇನ್, ಹೀರೋಯಿನ್, ಎಲ್.ಎಸ್. ಡಿ, ಕ್ಯನಾಬಿನಯ್ಡ್ ಆಯ್ಲ್, ಗಾಂಜಾ, ಭಾಂಗ್ ಮುಂತಾದವುಗಳ ಉತ್ಪಾದನೆ, ಮಾರಾಟ ಮತ್ತು ಸೇವನೆ ಕಾನೂನು ಬಾಹೀರ ಎಂದು ಪರಿಗಣಿಸಲಾಗುತ್ತದೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಚರ್ಚೆ ಏನೆಂದರೆ ಮಾದಕ ವಸ್ತು ಎಂದರೆ ಗಾಂಜಾ ದ ಮೇಲಿನ ನಿಷೇಧ ಆಜ್ಞೆಯನ್ನು ರಾಜ್ಯ ಸರ್ಕಾರ ತೆಗೆಯಬೇಕು ಎಂಬುದು.
ಈಗ ಮೂಡುವ ಪ್ರಶ್ನೆ ಯಾಕೆ ನಿಷೇಧ ಮಾಡಲಾಯಿತು ಮತ್ತು ಯಾಕೆ ನಿಷೇಧಾಜ್ಞೆಯನ್ನು ಹಿಂಪಡೆಯ ಬೇಕು ಎಂಬುದು. ಇವೆರಡಕ್ಕೂ ಉತ್ತರ ನೀಡಬೇಕಾದರೆ ಒಂದು ಸಂಶೋಧನೆಯ ಅಗತ್ಯ ಇದೆ.

ಸಕಾರಾತ್ಮಕ ಮಂಡನೆ -

ಗಾಂಜಾ ಎಂಬುದು ಔಷಧಿಯೇ ? ಇದು ಮಾನಸಿಕ ಸಮತೋಲನವನ್ನು ಕೆಡಿಸುತ್ತದೆಯೆ? ಸಾಮಾಜಿಕ ಶಾಂತಿಯನ್ನು ಹಾಳುಗೆಡವುತ್ತದೆಯೆ? ಎಂಬಿತ್ಯಾದಿ ಪ್ರಶ್ನೆಗಳು. ಆದರೆ ಇದಕ್ಕೆ ಸರಿಯಾಗಿ ಉತ್ತರಿಸಲು ಸಮರ್ಥವಾಗಿ ಇರುವ ಯಾವುದೇ ಸಂಶೋಧನೆಗಳು ಭಾರತದಲ್ಲಿ ನಡೆದಿಲ್ಲ. ಆದರೆ ಯುರೋಪಿನ ದೇಶಗಳು ಇದರ ಕುರಿತು ಕೆಲವೊಂದು ಸಂಶೋಧನೆಗಳನ್ನು ನಡೆಸಿವೆ. ಅದರ ಪ್ರಕಾರ ಕ್ಯನಬಿನಾಯ್ಡ್ ಆಯಿಲ್ (ಗಾಂಜಾ ಗಿಡದ ಬೀಜದಿಂದ ಮಾಡುವ ಎಣ್ಣೆ) ಠಿಚಿiಟಿ ಞiಟಟeಡಿ ಆಗಿ ಉಪಯೋಗಕ್ಕೆ ಬರುತ್ತದೆ ಎಂದು 'ಹಾರ್ವಾರ್ಡ್ ಹೆಲ್ತ್ ಸ್ಕೂಲ್ ' ಅವರು ಖಚಿತ ಪಡಿಸಿದ್ದಾರೆ. ಜೊತೆಗೆ ಯುರೋಪಿನ ಮತ್ತೊಂದು ಸಂಸ್ಥೆ ' ಜರ್ನಲ್ ಆಫ್ ಪೆಯಿನ್ ಸ್ಕೂಲ್ ' ಈ ಕ್ಯಾನಾಬಿನಾಯ್ಡ್ ಆಯಿಲ್ ಅನ್ನು ಚರ್ಮದ ಮೇಲೆ ಹಚ್ಚಿದಾಗ ಅಲ್ಲಿನ ನೋವು ಶಮನಗೊಳ್ಳುತ್ತದೆ ಎಂದು ಹೇಳಿದೆ. 

ನಕಾರಾತ್ಮಕ ಮಂಡನೆ -

ಗಾಂಜಾ ಸೇವನೆ ಒಬ್ಬ ವ್ಯಕ್ತಿಯ ಮಾನಸಿಕ ಸಮತೋಲನ ವನ್ನು ಸಂಪೂರ್ಣವಾಗಿ ಹದ ಗೆಡಿಸುತ್ತದೆ. ಇದು ರಸ್ತೆ ಅಪಘಾತಕ್ಕೆ ಕಾರಣವಾಗುತ್ತದೆ. ಗಾಂಜಾ ಸೇವಿಸಿದ ವ್ಯಕ್ತಿ ಜೀವಹಾನಿ ಮಾಡಿಕೊಳ್ಳುವ ಮತ್ತು ಮಾಡುವ ಸಾಧ್ಯತೆ ಹೆಚ್ಚಾಗಿದೆ , ಕಾರಣ ಇದು ವ್ಯಕ್ತಿಯನ್ನು ಮಾನಸಿಕ ಖಿನ್ನತೆಗೆ ಒಳ ಮಾಡುತ್ತದೆ ಮತ್ತು ಆತನಲ್ಲಿ ಆತಂಕವನ್ನು ಹೆಚ್ಚಿಸುತ್ತದೆ. ಇಷ್ಟೇ ಅಲ್ಲದೆ ಇದು ವ್ಯಕ್ತಿಯ ಮೂಳೆಗಳ ಬಲವನ್ನು ಕುಂಠಿತ ಗೊಳಿಸುತ್ತದೆ. ಮತ್ತೂ ಇಂದಿನ ಯುವಜನತೆ ಇವುಗಳ ಪಾಶಕ್ಕೆ ಸಿಲುಕಿ ಸರಿ ದಾರಿಯನ್ನು ಬಿಟ್ಟು ತಪ್ಪು ದಾರಿಯನ್ನು ಹಿಡಿಯುವುದು ಸಾಮಾಜಿಕ ಶಾಂತಿಯನ್ನು ಹಾಳು ಮಾಡುತ್ತದೆ.

ಇವೆರಡೂ ಭಿನ್ನ ರೀತಿಯ ಮಂದನೆಗಳು ಮತ್ತು ಡ್ರಗ್ಸ್ ನ 2 ವಿಭಿನ್ನ ಮುಖಗಳು. ಈಗ ನಾವು ಯಾವುದೇ ಒಂದು ವಿಷಯವನ್ನು ತೆಗೆದುಕೊಂಡಾಗಲೂ ಆ ವಿಷಯಕ್ಕೆ 2 ಮುಖವಿರುತ್ತದೆ. ಒಂದು ಧನಾತ್ಮಕ ಮತ್ತು ಮತ್ತೊಂದು ಋಣಾತ್ಮಕ. ಹಾಗೆ ಇಲ್ಲೂ ಕೂಡ ಚರ್ಚೆ ನಡೆಸುವಾಗ ಒಳಿತು ಮತ್ತು ಕೆಡುಕುಗಳು ಎರಡೂ ಬೆಳಕಿಗೆ ಬರುತ್ತದೆ. ಇಲ್ಲಿ ಜನರ ಮೋಜು ಮಸ್ತಿಗಾಗಿ ಇದಕ್ಕೆ ಅನುಮತಿ ಬೇಕಾಗಿಲ್ಲ. ನಾವು ಸರ್ಕಾರದ ನಿಯಮಕ್ಕೆ ಒಪ್ಪಿ ನಡೆಯಬೇಕು. ಇದು ನಮ್ಮ ಕರ್ತವ್ಯ. ಆದರೆ ನಾವು ಇಲ್ಲಿ ಸತ್ಯಾಸತ್ಯತೆಯ ಬಗೆಗೆ ತಿಳಿಯಬೇಕು. ನಮಗೆ ಸಂವಿಧಾನ ಹಲವಾರು ಹಕ್ಕುಗಳನ್ನು ನೀಡಿದೆ. ಆ ಹಕ್ಕಿನ ಆಧಾರದ ಮೇರೆಗೆ ನಾವು ಗಾಂಜಾ ಔಷಧಿಯೇ ಎಂದು ಕೇಳಬಹುದು ಮತ್ತು ಸರ್ಕಾರ ಅದಕ್ಕೆ ಸರಿಯಾಗಿ ಉತ್ತರವನ್ನು ನೀಡಲೇ ಬೇಕು. ಅದು ಸರ್ಕಾರದ ಹಕ್ಕು. ಪ್ರಶ್ನಿಸುವುದು ತಪ್ಪಲ್ಲ. ಸಂಶೋಧನೆ ಮೂಲಕ ಉತ್ತರ ನೀಡಲೇ ಬೇಕು.

ಅಮೆರಿಕಾದ ಒತ್ತಡದ ಮೇರೆಗೆ ಈ ಆಕ್ಟ್ ಅನ್ನು ಭಾರತದಲ್ಲಿ ಜಾರಿಗೆ ತರಲಾಗಿದ್ದು. ಇದೀಗ ಅಮೆರಿಕದಲ್ಲಿ11 ರಾಜ್ಯಗಳು ಈ ಕ್ಯಾನಾಬಿನಾಯ್ಡ್ ಆಯಿಲ್ ಕಾನೂನುಬದ್ಧ ಗೊಳಿಸಿದೆ. ಆದರೆ ನಾವೇನು ಮಾಡುತ್ತಿದ್ದೇವೆ? ಸ್ವಂತಿಕೆ ಎನ್ನುವುದು ನಮಗೂ ಬೇಕಲ್ಲವೇ. ಕಾರ್ಯದ ಹಿಂದಿನ ಕಾರಣ ಕೇಳುವ ಹಕ್ಕು ನಮ್ಮದಲ್ಲವೆ?

ಪ್ರಾಚೀನ ಕಾಲದಲ್ಲಿ ಮಾರಿಜುಆನ ( ಗಾಂಜಾ ಸಿಗುವ ಗಿಡ). ಈ ಗಿಡವನ್ನು ಔಷಧೀಯ ಗಿಡವಾಗಿ ಬಳಸುತ್ತಿದ್ದರು. ಅಥರ್ವ ವೇದದಲ್ಲಿ ( 11.16.15) ಅಧ್ಯಾಯ 11 ಶಾಖೆ 6 ರಿಂದ 15 ರಲ್ಲಿ ಈ ಮರೀಜು ಆನ ಎಂಬ ಗಿಡದ ಉಲ್ಲೇಖ ಕೂಡ ಇದೆ, ಮತ್ತು ಆಯುರ್ವೇದ ಪ್ರಕಾರದ 5 ಪ್ರಮುಖ ಔಷಧೀಯ ಗಿಡಗಳಲ್ಲಿ ಇದು ಒಂದು.

ಇಷ್ಟೆಲ್ಲಾ ಮಹತ್ವವನ್ನು ಹೊಂದಿರುವ ಒಂದು ಗಿಡವನ್ನು ಮೋಜು ಮಾಸ್ತಿಗಾಗಿ ಬಳಸಲಾಗುತ್ತದೆ ಎಂಬ ಹಣೆಪಟ್ಟಿ ಕೊಟ್ಟು ನಿಷೇಧ ಮಾಡುವುದು ಎಷ್ಟರ ಮಟ್ಟಿಗೆ ಸರಿ ?
ಧೂಮಪಾನ ಮತ್ತು ಮದ್ಯಪಾನದಿಂದ ಕ್ಯಾನ್ಸರ್ ಕಂಡು ಬರುವ ಸಾಧ್ಯತೆ ಹೆಚ್ಚು. ಅದನ್ನು ಯಾಕೆ ನಿಷೇಧ ಮಾಡಿಲ್ಲ? ಅದು ಬಹಳ ದೊಡ್ಡ ಉದ್ಯಮವಾಗಿ ಬೆಳೆದು ನಿಂತ ಕಾರಣದಿಂದಲೇ? ಮುಂದೊಂದು ದಿನ ತುಳಸಿ ಗಿಡವನ್ನು ಬ್ಯಾನ್ ಮಾಡಿ ಅದರ ಅಂಶಗಳನ್ನು ರಾಸಾಯನಿಕ ಹೊಂದಿರುವ ಗುಳಿಗೆಗಳನ್ನಾಗಿ ಮಾಡಿ ಸೇವಿಸಿ ಎಂದು ಹೇಳುವ ದಿನಗಳು ಬಂದರು ಬರಬಹುದು. ಏಕೆಂದರೆ ಔಷಧಿಯ ಕಾರ್ಖಾನೆಗಳು ದೊಡ್ಡ ಉದ್ಯಮವಾಗಿ ಬೆಳೆದು ಬರುತ್ತಿದೆ. ಪ್ರಾಚೀನ ಔಷಧಿ ಹಾಗೂ ಪ್ರಾಚೀನ ಜ್ಞಾನಗಳು ಕಣ್ಮರೆಯಾಗುತ್ತಿದೆ. ನಮ್ಮ ಮೌನ ನಮ್ಮ ಪ್ರಾಚೀನ ಜ್ಞಾನದ ಬಗ್ಗೆ ತಪ್ಪು ಕಲ್ಪನೆಯನ್ನು ಮೂಡಿಸುವುದರ ಜೊತೆಗೆ ಅಳಿವಿಗು ಕಾರಣ ಆಗಬಹುದು.

ಆ ರೀತಿ ಆಗದೆ ಎಲ್ಲ ವಿಷಯಕ್ಕೆ ಉತ್ತರ ಬೇಕೆಂದಲ್ಲಿ ಭಾರತದಲ್ಲಿ ಈ ಮರಿಜುಆನ, ಗಾಂಜಾ, ಹಾಗೂ ಕ್ಯನಾಬಿಸ್ ಬಗ್ಗೆ ಒಂದು ಸಂಶೋಧನೆ ಅಗತ್ಯವಾಗಿದೆ. ಸಂಶೋಧನೆಯ ಮೂಲಕ ಇದರ ಧನಾತ್ಮಕ ಮತ್ತು ಋಣಾತ್ಮಕ ಗುಣಗಳನ್ನು ಜನರಿಗೆ ಪರಿಚಯಿಸಬೇಕು.
ಹಿಂದೊಮ್ಮೆ ಪ್ರಮುಖ ಔಷಧೀಯ ಗಿಡವಾಗಿದ್ದ ಇದು ಇಂದು ಮಾದಕದ್ರವ್ಯ ಎಂಬ ಹಣೆಪಟ್ಟಿ ಹೊತ್ತು ತಿರುಗುತ್ತಿರುವುದು ವಿಷಾದದ ಸಂಗತಿ. ಮಾನವನ ಅತಿ ಆಸೆ ಮತ್ತು ದುರ್ಬಳಕೆ ಮಾಡಿಕೊಳ್ಳುವ ಸ್ವಭಾವದಿಂದಾಗಿ ಪ್ರಾಚೀನ ಜ್ಞಾನ ಮತ್ತು ವೈದ್ಯಕೀಯ ಪರಂಪರೆ ನಶಿಸಿ ಹೋಗುವಂತೆ ಆಗುತ್ತಿದೆ. ಈ ಕುರಿತಾಗಿ ಮೂಡಿದ ಅಜ್ಞಾನವನ್ನು ಕಳಚಿ ಒಂದೊಳ್ಳೆ ಮಾಹಿತಿ ಎಲ್ಲರನ್ನೂ ತಲುಪಬೇಕು. ತಪ್ಪು ದಾರಿಯಲ್ಲಿ ಬಳಕೆಯಾಗುತ್ತಿರುವ ವಸ್ತು ಮತ್ತೆ ಉತ್ತಮ ರೀತಿಯಲ್ಲಿ ಸದುಪಯೋಗ ಆಗಬೇಕು. ಇವೆಲ್ಲ ಆಗಬೇಕಾದರೆ ಸರಿಯಾದ ಸಮಶೋಧನೆ ನಡೆಯಲೇ ಬೇಕು. ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತಗೊಳ್ಳಬೇಕು.