ಮುಂಜಾನೆ ಏಳುವ ಮೊದಲು ನೀವು ಪಾಲಿಸಬೇಕಾದ ಕ್ರಮಗಳು

ಮುಂಜಾನೆ ಏಳುವ ಮೊದಲು ನೀವು ಪಾಲಿಸಬೇಕಾದ ಕ್ರಮಗಳು

HSA   ¦    Jun 26, 2020 01:59:22 PM (IST)
ಮುಂಜಾನೆ ಏಳುವ ಮೊದಲು ನೀವು ಪಾಲಿಸಬೇಕಾದ ಕ್ರಮಗಳು

ಬ್ರಾಹ್ಮೀ ಮುಹೂರ್ತದಲ್ಲಿ ಎದ್ದರೆ ಅದರಿಂದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು ಎಂದು ಆಯುರ್ವೇದದಲ್ಲಿ ಹೇಳಿದೆ. ಹೀಗಾಗಿ ಮುಂಜಾವಿನ ಸಮಯದಲ್ಲಿ ಎದ್ದೇಳಲು ಕಲಿಯಬೇಕು. ಇದರಿಂದ ದೇಹದ ಆರೋಗ್ಯಕ್ಕೆ ಹಲವಾರು ಲಾಭಗಳಿವೆ.

ಆದರೆ ಬೇಗನೆ ಎದ್ದೇಳುವ ಮೊದಲು ನೀವು ಕ್ರಮಗಳನ್ನು ಪಾಲಿಸಿ.

 

  1. ಮೊಬೈಲ್ ಸ್ವಿಚ್ ಆಫ್ ಮಾಡಿ

ಮೊಬೈಲ್ ಫೋನ್ ಗಳು, ಟ್ಯಾಬ್ಸ್ ಅಥವಾ ಲ್ಯಾಪ್ ಟಾಪ್, ಟಿವಿ ಇತ್ಯಾದಿಗಳು ನಿಮಗೆ ಬೆಳಗ್ಗೆ ಬೇಗನೆ ಎದ್ದೇಳಲು ತೊಂದರೆ ನೀಡುವುದು. ಮಲಗುವ ಕೆಲವು ಗಂಟೆಗಳ ಮೊದು ಇವುಗಳನ್ನು ಸ್ವಿಚ್ ಆಫ್ ಮಾಡಿ.

 

  1. ಹೊಟ್ಟೆ ತುಂಬಿಸಬೇಡಿ

ರಾತ್ರಿ ನೀವು ಮೃಷ್ಟಾನ ಭೋಜನ ಮಾಡಿದರೆ ಅದರು ದೇಹಕ್ಕೆ ಹಾಗೂ ನಿದ್ರೆಗೆ ಒಳ್ಳೆಯದಲ್ಲ. ಹೀಗಾಗಿ ಲಘುವಾಗಿ ಊಟ ಮಾಡಿದರೆ ಅದರಿಂದ ಹೆಚ್ಚಿನ ಲಾಭವಾಗಲಿದೆ.

 

  1. ನೀರು ಕುಡಿಯಿರಿ

ನೀರು ಕುಡಿದು ಮಲಗಿದರೆ ಬೆಳಗ್ಗೆ ಬೇಗನೆ ಏಳುವಂತೆ ಮೂತ್ರದ ಮೂಲದ ಎಚ್ಚರ ಮಾಡುವುದು.

 

  1. ಅಲರಾಂನ್ನು ದೂರವಿಡಿ

ಬೆಳಗ್ಗೆ ಬೇಗನೆ ಎದ್ದೇಳಲು ಅಲರಾಂನ್ನು ಹಾಸಿಗೆಯಿಂದ ದೂರವಿಡಿ. ಅಲರಾಂ ದೂರವಿದ್ದರೆ ಹಾಸಿಗೆಯಿಂದ ಎದ್ದೇಳಬಹುದು.