ಮೈಗ್ರೇನ್ ಶಮನಕ್ಕೆ ಕೆಲವು ಆಹಾರಗಳು

ಮೈಗ್ರೇನ್ ಶಮನಕ್ಕೆ ಕೆಲವು ಆಹಾರಗಳು

HSA   ¦    Jun 29, 2020 05:46:50 PM (IST)
ಮೈಗ್ರೇನ್ ಶಮನಕ್ಕೆ ಕೆಲವು ಆಹಾರಗಳು

ಒತ್ತಡ ಜೀವನಶೈಲಿ ಇತ್ಯಾದಿಗಳಿಂದಾಗಿ ಮೈಗ್ರೇನ್ ಬರುವುದು ಸಹಜ. ಇದಕ್ಕೆ ಹಲವಾರು ಔಷಧಿಗಳು ಲಭ್ಯವಿದ್ದರೂ ಕೆಲವು ಆಹಾರಗಳು ಕೂಡ ಮೈಗ್ರೇನ್ ಕಡಿಮೆ ಮಾಡುವುದು.

ಕಲ್ಲಂಗಡಿಯಂತಹ ಹಣ್ಣುಗಳು

ಕಲ್ಲಂಗಡಿ, ಬೆರ್ರಿಗಳು ಮತ್ತು ಟೊಮೆಟೊ ತಲೆನೋವು ನಿವಾರಣೆ ಮಾಡಲು ಪ್ರಮುಖ ಪಾತ್ರ ವಹಿಸುತ್ತದೆ. ನಿರ್ಜಲೀಕರಣದಿಂದಾಗಿ ಆಗುವ ತಲೆನೋವನ್ನು ಶಮನ ಮಾಡಲು ಇಂತಹ ಹಣ್ಣುಗಳನ್ನು ತಿನ್ನಿ.

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಮೆಗ್ನಿಶಿಯಂ ಅಧಿಕವಾಗಿದೆ. ಇದು ರಕ್ತನಾಳಕ್ಕೆ ಆರಾಮ ನೀಡಿ, ತಲೆನೋವು ಕಡಿಮೆ ಮಾಡುವುದು.

ಸೇಬು

ಸೇಬಿನಲ್ಲಿ ಉನ್ನತ ಮಟ್ಟದ ಫ್ಲಾವನಾಯ್ಡ್ ಗಳಿದ್ದು, ಇದು ರಕ್ತದೊತ್ತಡ ಕಡಿಮೆ ಮಾಡುತ್ತದೆ ಮತ್ತು ತಲೆನೋವು ನಿವಾರಿಸುವುದು.

ಮೀನು

ಮೀನು ಕೇವಲ ಬುದ್ಧಿಶಕ್ತಿಗೆ ಮಾತ್ರವಲ್ಲದೆ, ತಲೆನೋವು ಕೂಡ ನಿವಾರಣೆ ಮಾಡುವುದು. ಬೂತಾಯಿಯಂತಹ ಎಣ್ಣೆಯಂಶ ಅಧಿಕವಾಗಿರುವ ಮೀನು ಸೇವಿಸಿ.