ಮಿಕ್ಸ್ ಫ್ರೂಟ್ ಜ್ಯೂಸ್ ಕುಡಿಯಿರಿ ಆರೋಗ್ಯವಾಗಿರಿ…

ಮಿಕ್ಸ್ ಫ್ರೂಟ್ ಜ್ಯೂಸ್ ಕುಡಿಯಿರಿ ಆರೋಗ್ಯವಾಗಿರಿ…

LK   ¦    Mar 26, 2020 03:53:48 PM (IST)
ಮಿಕ್ಸ್ ಫ್ರೂಟ್ ಜ್ಯೂಸ್ ಕುಡಿಯಿರಿ ಆರೋಗ್ಯವಾಗಿರಿ…

ಬೇಸಿಗೆಯ ದಿನಗಳಲ್ಲಿ ಆರೋಗ್ಯವಾಗಿರಬೇಕಾದರೆ ಹಣ್ಣುಗಳಿಂದ ಮಾಡಿದ ಜ್ಯೂಸ್‍ನ್ನು ಕುಡಿಯುವುದು ಉತ್ತಮ. ಈಗಂತೂ ಹೆಚ್ಚಿನವರು ಮನೆಯಲ್ಲಿದ್ದುಕೊಂಡೇ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಮನೆಯಲ್ಲಿರುವ ಹಣ್ಣುಗಳನ್ನು ಬಳಸಿಕೊಂಡು ಅದರಿಂದ ಮಾಡಿದ ಜ್ಯೂಸ್‍ಗಳನ್ನು ಕುಡಿದು ಆರೋಗ್ಯವಾಗಿರುವುದು ಬಹು ಒಳ್ಳೆಯದು. ಮಿಕ್ಸ್ ಫ್ರೂಟ್ ಜ್ಯೂಸ್‍ನ್ನು ಲಭ್ಯವಿರುವ ಹಣ್ಣುಗಳನ್ನು ಬಳಸಿ ಮಾಡಬಹುದಾಗಿದೆ. ಮಿಕ್ಸ್ ಫ್ರೂಟ್ ಜ್ಯೂಸ್ ಮಾಡಲು ಬೇಕಾಗುವ ಹಣ್ಣುಗಳು ಹಾಗೂ ಪದಾರ್ಥಗಳು, ಮಾಡುವ ವಿಧಾನದ ಬಗ್ಗೆ ಇಲ್ಲಿ ಮಾಹಿತಿ ಇದೆ.

 

ಬೇಕಾಗುವ ಪದಾರ್ಥಗಳು

ಸಪೋಟ ಹಣ್ಣು: ಒಂದು ಬಟ್ಟಲು

ಕಿತ್ತಳೆಹಣ್ಣು- ಒಂದು ಬಟ್ಟಲು

ಕಲ್ಲಂಗಡಿ- ಒಂದು ಬಟ್ಟಲು

ಉಪ್ಪು- ಚಿಟಿಕೆಯಷ್ಟು

ಕಲ್ಲುಸಕ್ಕರೆ- ಒಂದು ಚಮಚ

ಕಾಳು ಮೆಣಸು- ಚಿಟಿಕಿಯಷ್ಟು

ಏಲಕ್ಕಿ- ಒಂದು

 

ಮಾಡುವ ವಿಧಾನ ಹೀಗಿದೆ..

 ಮೊದಲಿಗೆ ಹಣ್ಣುಗಳನ್ನು ಚೆನ್ನಾಗಿ ತೊಳೆದು ಅದರಲ್ಲಿರು ಬೀಜನಗಳು ತೆಗೆದು ಪ್ರತ್ಯೇಕ ಬಟ್ಟಲಲ್ಲಿ ಹಾಕಿಟ್ಟುಕೊಳ್ಳಬೇಕು. ನಂತರ ಒಂದು ಲೋಟವನ್ನು ತೆಗೆದುಕೊಂಡು ಅದಕ್ಕೆ ಮೊದಲಿಗೆ ಸಪೋಟವನ್ನು ಮಿಕ್ಸಿ ಮಾಡಿ ಸುರಿಯಬೇಕು, ನಂತರ ಕಿತ್ತಳೆಯನ್ನು ಮಿಕ್ಸಿ ಮಾಡಿ ಸಪೋಟದ ಮೇಲೆ ಸುರಿಯಬೇಕು, ಇದಾದ ನಂತರ ಕಲ್ಲಂಗಡಿಯನ್ನು ಮಿಕ್ಸಿಗೆ ಹಾಕಿ ಅದರೊಂದಿಗೆ ಉಪ್ಪು, ಕಲ್ಲುಸಕ್ಕರೆ, ಏಲಕ್ಕಿಯನ್ನು ಹಾಕಿ ಚೆನ್ನಾಗಿ ಮಿಕ್ಸಿ ಮಾಡಿ ನಂತರ ಅದೇ ಲೋಟಕ್ಕೆ ಸುರಿಯಬೇಕು. ನಂತರ ಸೇವಿಸಿ ನೋಡಿ ಮಾಮೂಲಿ ಜ್ಯೂಸ್‍ಗಿಂತ ವಿಭಿನ್ನವಾಗಿರುತ್ತದೆ.