ಕೊರೋನಾ ತಡೆಗೆ ಯೋಗಭ್ಯಾಸ ಮಾಡಿ...

ಕೊರೋನಾ ತಡೆಗೆ ಯೋಗಭ್ಯಾಸ ಮಾಡಿ...

LK   ¦    Jun 14, 2020 11:36:34 AM (IST)
ಕೊರೋನಾ ತಡೆಗೆ ಯೋಗಭ್ಯಾಸ ಮಾಡಿ...

ಯೋಗದಿಂದ ಕೋವಿಡ್-19 ರೋಗವನ್ನು ತಡೆದು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ರಾಮಚಂದ್ರ ಹೇಳಿದ್ದಾರೆ.

ಇದರ ಜತೆಗೆ ಹಿತವಾದ ಆಹಾರವನ್ನು ಸುಲಭವಾಗಿ ಜೀರ್ಣವಾಗುವಂತೆ ಮಿತವಾಗಿ ಋತುವಿಗನುಸಾರ ಸಿಗುವ ಎಲ್ಲಾ ಹಣ್ಣುಗಳನ್ನು ಸೇವಿಸುತ್ತಾ, ಬಿಸಿಯಾದ ನೀರು ಹಾಗೂ ಆಹಾರವನ್ನು ಸೇವಿಸುವುದು ಮುಖ್ಯವಾಗಿದೆ. ಆಯುಷ್ ಇಲಾಖೆಯು ಹೇಳಿದಂತೆ ಯೋಗವು 45 ನಿಮಿಷಗಳ ಅಭ್ಯಾಸವಾಗಿದ್ದು, ಯೋಗದ ಪ್ರಾರಂಭದಲ್ಲಿ 02 ನಿಮಿಷ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಬೇಕಾಗುತ್ತದೆ. ಸಂಗಚದ್ವಂ, ಸಂವದದ್ವಂ, ಸಂವೋ ಮಾನಸಿ ಜನತಂ, ದೇವಭಾಗಂ ಯಥಾಪೂರ್ವೇ, ಸಂಜನಾನನ ಉಪಾಸತೆ ಎಂಬ ಪ್ರಾರ್ಥನೆಯೊಂದಿಗೆ ಆರಂಭಿಸಬೇಕು. ಯೋಗದ ವಿಧಾನ ಮತ್ತು ವಿವರಗಳು ಇಲ್ಲಿವೆ.

 

ಚಲನಾ ಕ್ರಿಯೆ: 04 ನಿಮಿಷ ಕುತ್ತಿಗೆ:- ಮುಂದೆ-ಹಿಂದೆ, ಕುತ್ತಿಗೆ:- ಬಲಕ್ಕೆ-ಎಡಕ್ಕೆ, ಕುತ್ತಿಗೆ ಪಕ್ಕಕ್ಕೆ ತಿರುಗಿಸುವುದು. ಕುತ್ತಿಗೆಯನ್ನು ವೃತ್ತಾಕಾರವಾಗಿ ತಿರುಗಿಸುವುದು.

 

ಭುಜದ ಅಭ್ಯಾಸ: ಕೈಯನ್ನು ನೇರವಾಗಿ ಮೇಲೆತ್ತುವುದು. ಕೈಯನ್ನು ಭುಜದ ಸಮನಾಂತರವಾಗಿ ನೀಡುವುದು. ಎರಡು ಕೈಗಳನ್ನು ಸಮನಾಂತರದಿಂದ ಕುತ್ತಿಗೆಯ ಹತ್ತಿರ ತರುವುದು. ಅಲ್ಲಿಂದ ಕೈಯನ್ನು ಮುಂದಕ್ಕೆ ತರವುದು. ಅದೇ ರೀತಿ ಕೈಯನ್ನು ಕುತ್ತಿಗೆಯ ಹಿಂದಕ್ಕೆ ತರುವುದು.

 

ಸೊಂಟದ ಅಭ್ಯಾಸ: ಭುಜದ ಸಮನಾಂತರ ಕೈಗಳನ್ನು ಎತ್ತಿ ಕಾಲುಗಳನ್ನು ಒಂದು ಹೆಜ್ಚೆ ಅಗಲಿಸಿ ಎಡಕ್ಕೆ ಬಲಕ್ಕೆ ತಿರುಗುವುದು.

 

ಮಂಡಿಗಳಿಗೆ: ಹಸ್ತಗಳನ್ನು ಮುಂದೆ ಚಾಚಿ-ಕಲ್ಪನೆಯ ಕುರ್ಚಿಯಲ್ಲಿ ಕುಳಿತುಕೊಳ್ಳುವುದು. ಆಸನಗಳು: 23 ನಿಮಿಷ: ತಾಡಾಸನ, ವೃಕ್ಷಾಸನ, ಪಾದಹಸ್ತಾಸನ, ತ್ರಿಕೋನಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಉಷ್ಟ್ರಾಸನ, ಶಶಾಂಕಾಸನ, ಉತ್ತಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಭುಜಂಗಾಸನ-1, ಭುಜಂಗಾಸನ-2, ಶಲಭಾಸನ, ಸೇತುಬಂಧಾಸನ, ಉತ್ತಾನ ಪಾದಾಸನ, ಅರ್ಧ ಹಲಾಸನ, ಪವನಮುಕ್ತಾಸನ, ಶವಾಸನ, ಪ್ರಾಣಾಯಾಮ: 06 ನಿಮಿಷ, ಕಪಾಲ ಭಾತಿ, ನಾಡಿಶೋಧನ ಪ್ರಾಣಾಯಾಮ, ಶೀಥಲ ಪ್ರಾಣಾಯಾಮ (ನಾಲಿಗೆಯನ್ನು ಸುರುಳಿ ಸುತ್ತುವುದು), ಭ್ರಾಮರಿ ಪ್ರಾಣಾಯಾಮ (ಹಸ್ತದ ಬೆರಳುಗಳು ಮುಖದ ಮೇಲೆ), ಧ್ಯಾನ- ಪದ್ಮಾಸನದಲ್ಲಿ ಕುಳಿತು 05 ನಿಮಿಷ.

 

ಯೋಗದಿಂದ ಶಾರೀರದ ಅಂಗಾಂಗಗಳು ದೃಢತೆಯನ್ನು ಹೊಂದುವುದಲ್ಲದೇ, ಪರಿಪೂರ್ಣ ರಕ್ತ ಸಂಚಲನವು ಎಲ್ಲಾ ಅಂಗಾಂಗಳಿಗೆ ಉಂಟಾಗಿ ತನ್ನ ಕರ್ತವ್ಯವನ್ನು ಸ್ವಾಸ್ಥ್ಯಗೊಳಿಸುತ್ತದೆ. ಮಾನಸಿಕ ಏಕಾಗ್ರತೆ ಉಂಟಾಗಿ ಚಂಚಲತೆಯು ದೂರವಾಗುತ್ತದೆ. ರೋಗ ಬಾರದಂತೆ ತಡೆಯುವ ಶಕ್ತಿಯು ಶರೀರಕ್ಕೆ ಬರುತ್ತದೆ. ಇದರಿಂದ ಶ್ವಾಸಕೋಶದ ತೊಂದರೆಗಳು, ನರ ದೌರ್ಬಲ್ಯದಂತಹ ಅನೇಕ ರೋಗಗಳು ದೂರವಾಗುತ್ತವೆ. ಸಾರ್ವಜನಿಕರು ದೈನಂದಿನ ಚಟುವಟಿಕೆಗಳಲ್ಲಿ ಬೆಳಿಗ್ಗೆ ಸೂರ್ಯೋದಯಕ್ಕೆ ಮುಂಚೆ ಯೋಗವನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ.