ಬೆಳಗ್ಗೆ ಬೇಗನೆ ಎದ್ದೇಳಲು ಹೀಗೆ ಮಾಡಿ…

ಬೆಳಗ್ಗೆ ಬೇಗನೆ ಎದ್ದೇಳಲು ಹೀಗೆ ಮಾಡಿ…

HSA   ¦    May 12, 2020 01:37:20 PM (IST)
ಬೆಳಗ್ಗೆ ಬೇಗನೆ ಎದ್ದೇಳಲು ಹೀಗೆ ಮಾಡಿ…

ರಾತ್ರಿ ಬೇಗ ಮಲಗಿ ಮುಂಜಾವಿನಲ್ಲಿ ಎದ್ದರೆ ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಆದರೆ ಒತ್ತಡ ಜೀವನದಲ್ಲಿ ಬೇಗೆ ಮಲಗಲು ಸಾಧ್ಯವಾಗುತ್ತಿಲ್ಲ. ಇಂತಹ ಸಮಯದಲ್ಲಿ ಈ ಕ್ರಮಗಳನ್ನು ಪಾಲಿಸಿ.

  1. ಎಲ್ಲಾ ಗಜೆಟ್ಸ್ ಗಳನ್ನು ಸ್ವಿಚ್ ಆಫ್ ಮಾಡಿ

ನೀವು ರಾತ್ರಿ ಮಲಗುವ ಒಂದು ಗಂಟೆ ಮೊದಲು ಮೊಬೈಲ್ ಫೋನ್ ಗಳು, ಟ್ಯಾಬ್ಸ್ ಅಥವಾ ಲ್ಯಾಪ್ ಟಾಪ್, ಟಿವಿ ಇತ್ಯಾದಿಗಳು ನಿಮಗೆ ಬೆಳಗ್ಗೆ ಬೇಗನೆ ಎದ್ದೇಳಲು ತೊಂದರೆ ನೀಡುವುದು. ಮಲಗುವ ಮೊದಲು ಇವುಗಳನ್ನು ಸ್ವಿಚ್ ಆಫ್ ಮಾಡಿ. 

  1. ಊಟ ಲಘುವಾಗಿರಲಿ

ರಾತ್ರಿ ಬಿಕ್ಷುಕನಂತೆ ಊಟ ಮಾಡಬೇಕೆಂಬ ನೀತಿಯಿದೆ. ಅದೇ ರಾತ್ರಿ ವೇಳೆ ಲಘುವಾಗಿ ಏನಾದರೂ ತಿಂದರೆ ಒಳ್ಳೆಯ ನಿದ್ರೆ ಬರುವುದು. ಹೊಟ್ಟೆಯು ಹಗುರವಾಗಿದ್ದರೆ ಅದರಿಂದ ಬೆಳಗ್ಗೆ ಬೇಗನೆ ಏಳಬಹುದು ಮತ್ತು ದೇಹವು ಹಗುರವಾಗಿರುವುದು.

  1. ಒಂದು ಲೋಟ ನೀರು ಕುಡಿಯಿರಿ

ಮಲಗುವ ಮೊದಲು ಒಂದು ಲೋಟ ನೀರು ಕುಡಿದರೆ ಮೂತ್ರಕೋಶವು ಸರಿಯಾಗಿ ಕೆಲಸ ಮಾಡುವುದು ಮತ್ತು ಬೆಳಗ್ಗೆ ಬೇಗನೆ ಏಳುವಂತೆ ಮೂತ್ರದ ಮೂಲದ ಎಚ್ಚರ ಮಾಡುವುದು.

  1. ಅಲರಾಂನ್ನು ಹಾಸಿಗೆಯಿಂದ ದೂರವಿಡಿ.

ಬೆಳಗ್ಗೆ ಬೇಗನೆ ಎದ್ದೇಳಲು ಅಲರಾಂನ್ನು ಹಾಸಿಗೆಯಿಂದ ದೂರವಿಡಿ. ಅಲರಾಂ ದೂರವಿದ್ದರೆ ಹಾಸಿಗೆಯಿಂದ ಎದ್ದೇಳಬಹುದು.

  1. ಹಾಸಿಗೆ ಮೇಲೆ ಕೂರಬೇಡಿ

ನಿದ್ರೆಯಿಂದ ಎದ್ದ ಹಾಸಿಗೆಯಿಂದ ಆದಷ್ಟು ಬೇಗ ಎದ್ದುಬಿಡಿ. ಹಾಗೆ ಕುಳಿತುಕೊಳ್ಳಬೇಡಿ. ಇದರಿಂದ ನೀವು ಅಲ್ಲೇ ಮತ್ತೆ ನಿದ್ರೆಗೆ ಜಾರಬಹುದು.