ಬದುಕನ್ನು ಕಸಿಯುವ ಫ್ಲೋರೋಸಿಸ್ ಕಾಯಿಲೆ

ಬದುಕನ್ನು ಕಸಿಯುವ ಫ್ಲೋರೋಸಿಸ್ ಕಾಯಿಲೆ

LK   ¦    Oct 18, 2020 06:19:20 PM (IST)
ಬದುಕನ್ನು ಕಸಿಯುವ ಫ್ಲೋರೋಸಿಸ್ ಕಾಯಿಲೆ

ನಾವು ಕೊರೊನಾ ಮಹಾಮಾರಿಯ ಭಯದಲ್ಲಿದ್ದೇವೆ. ಈ ಕಾಯಿಲೆಯಿಂದ ಜೀವವನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದೇವೆ. ಇದರ ನಡುವೆ ಇತರೆ ಕಾಯಿಲೆಗಳು ಕೂಡ ನಮ್ಮ ಬಾಧಿಸುತ್ತಿವೆ. ನಾವು ಎಚ್ಚರ ತಪ್ಪಿದರೂ ಇನ್ಯಾವುದೋ ಕಾಯಿಲೆ ಅಟಕಾಯಿಸಿಕೊಳ್ಳುವುದರಲ್ಲಿ ಎರಡು ಮಾತಿಲ್ಲ.

ನಾವು ಕುಡಿಯುವ ನೀರಾಗಲೀ ಸೇವಿಸುವ ಆಹಾರವಾಗಲೀ ಇದರಲ್ಲಿ ಶುದ್ಧತೆ ಇಲ್ಲದೆ ಹೋದರೆ ಕಾಯಿಲೆಗಳು ನಮ್ಮನ್ನು ಕಾಡುವುದಂತು ಸತ್ಯ. ಹೀಗಿರುವಾಗ ಕೆಲವೊಮ್ಮ ನಾವು ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶÀ ಜಾಸ್ತಿಯಾದರೂ ಒಂದು ಕಾಯಿಲೆ ಬರುತ್ತದೆ ಅದುವೇ ಫ್ಲೋರೊಸಿಸ್. ಇದು ಬಂದರೆ ವಾಸಿ ಮಾಡಲು ಕಷ್ಟ ಆದರೆ ನಿಯಂತ್ರಣ ಮಾಡಬಹುದಷ್ಟೆ. ಆದ್ದರಿಂದ ಈ ಕಾಯಿಲೆಯತ್ತ ಎಚ್ಚರವಾಗಿರುವುದು ಒಳ್ಳೆಯದು.

ಇದೊಂದು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದ್ದು ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶÀ ಜಾಸ್ತಿ ಇರುವ ಕಡೆ ಹೆಚ್ಚಾಗಿ ಕಂಡು ಬರುತ್ತದೆ. ಇದರಿಂದ ಮೂರು ಬಗೆಯ ಕಾಯಿಲೆ ಹರಡುವ ಲಕ್ಷಣ ಗೋಚರವಾಗುತ್ತದೆ. ಹಲ್ಲುಗಳು ಕಂದು ಬಣ್ಣಕ್ಕೆ ತಿರುಗಿ ಸಣ್ಣಸಣ್ಣರಂಧ್ರಗಳು ನಿರ್ಮಾಣವÁಗಬಹುದು. ಮೂಳೆ, ಕೀಲು ನೋವು ಹಾಗೂ ಜಡತ್ವ ಹೆಚ್ಚುವುದು. ಕೈಕಾಲುಗಳ ಊನತೆ ಕಾಣುತ್ತದೆ. ಕೆಲವೊಮ್ಮೆ ಈ ರೋಗದ ಬಗ್ಗೆ ಗೊತ್ತಾಗದೇ ಯಾವುದೋ ನೋವು ನಿವಾರಕ ಇನ್ನಿತರ ಮಾತ್ರೆಗಳನ್ನು ಸೇವಿಸಿಕೊಂಡು ದಿನಗಳನ್ನು ಮುಂದೂಡುವುದರಿಂದ ಕಾಯಿಲೆ ಉಲ್ಭಣವಾಗಿ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಈ ಕಾಯಿಲೆ ವಾಸಿಮಾಡಲು ಸಾಧ್ಯವಾಗದ ಶಾಶ್ವತ ಕಾಯಿಲೆಯಾಗಿರುವುದರಿಂದ ಪ್ರತಿಯೊಬ್ಬರೂ ಇದರತ್ತ ಎಚ್ಚರ ವಹಿಸುವುದು ಅಗತ್ಯ. ಕೆಲವರಿಗೆ ಕೆಟ್ಟ ಅಭ್ಯಾಸವಿರುತ್ತದೆ. ಎಲ್ಲೆಂದರಲ್ಲಿ ತಿನ್ನುವುದು, ಇವರಿಗೆ ತಾವು ತಿನ್ನುವ ಆಹಾರ, ಕುಡಿಯುವ ನೀರು ಶುದ್ಧವೋ ಎಂದು ಪರಿಶೀಲಿಸಿ ನೋಡುವ ತಾಳ್ಮೆಯೂ ಇರುವುದಿಲ್ಲ. ಇಂತಹವರು ಖಂಡಿತಾ ಈ ಕಾಯಿಲೆಯ ಬಗ್ಗೆ ಎಚ್ಚರ ವಹಿಸಬೇಕಲ್ಲದೆ, ಆಹಾರ ಮತ್ತು ನೀರನ್ನು ಸೇವಿಸುವಾಗ ಜಾಗ್ರತೆ ವಹಿಸುವುದು ಅತಿ ಮುಖ್ಯ.

ಕಾರ್ಖಾನೆಗಳಿಂದ ಹೊರಬರುವ ತ್ಯಾಜ್ಯಗಳು, ಮಲ ಮೂತ್ರಗಳು ಕೆಲವೊಮ್ಮೆ ನೀರಿನಲ್ಲಿ ಮಿಶ್ರವಾಗಿ ಸಾಂಕ್ರಾಮಿಕ ರೋಗದ ಕೀಟಾಣುಗಳು ನಮ್ಮ ದೇಹವನ್ನು ಸೇರಬಹುದು. ಅಥವಾ ಮೇಲ್ನೋಟಕ್ಕೆ ನೀರು ತಿಳಿಯಾಗಿರುವಂತೆ ಕಂಡುಬಂದರೂ ಅದರಲ್ಲಿರುವ ವೈರಸ್‍ಗಳು ನಮ್ಮ ದೇಹ ಸೇರಿ ಬಾಧಿಸಬಹುದು. ಇಲ್ಲಿ ಕಾಯಿಲೆ ಬಂದ ಬಳಿಕ ಅದು ನಮಗೆ ಫ್ಲೋರೋಸಿಸ್ ಎಂಬುದು ಗೊತ್ತಾಗುವ ಹೊತ್ತಿಗೆ ಕೆಲವು ಸಮಯ ಹಿಡಿಯಬಹುದು. ಏಕೆಂದರೆ ನಮ್ಮಲ್ಲಿ ಹೆಚ್ಚಿನವರು ಕಾಯಿಲೆ ಕಾಣಿಸಿಕೊಂಡ ತಕ್ಷಣ ವೈದ್ಯರ ಬಳಿಗೆ ಹೋಗದೆ ತಾವೇ ಸ್ವಯಂ ವೈದ್ಯೋಪಚಾರ ಮಾಡುತ್ತಾರೆ. ಇನ್ನೇನು ಕಾಯಿಲೆ ಉಲ್ಭಣಗೊಂಡು ಸಾಧ್ಯವಾಗಲ್ಲ ಎಂಬುದು ಗೊತ್ತಾದ ಬಳಿಕ ವೈದ್ಯರ ಬಳಿ ತೆರಳುತ್ತಾರೆ. ಈ ವೇಳೆಗೆ ಪರಿಸ್ಥಿತಿ ಹದಗೆಟ್ಟಿರುತ್ತದೆ.

ಫ್ಲೋರೋಸಿಸ್ ಕಾಯಿಲೆ ವಾಸಿಯಾಗದ ಕಾಯಿಲೆಯಾಗಿದ್ದು ನಿಯಂತ್ರಣ ಮಾಡಲಷ್ಟೆ ಸಾಧ್ಯವಿರುವುದರಿಂದ ಪ್ರತಿಯೊಬ್ಬರೂ ಇದರತ್ತ ಎಚ್ಚರ ವಹಿಸುವುದು ಅಗತ್ಯ. ಸಾರ್ವಜನಿಕರು ತಾವೇ ಸ್ವತಃ ತಮ್ಮ ಆರೋಗ್ಯ, ಆಹಾರ ಸೇವೆನೆ ವಿಧ, ಪರಿಸರ ರಕ್ಷಣೆ ಮಾಡಿಕೊಳ್ಳಬೇಕಾಗುತ್ತದೆ.

ಕುಡಿಯುವ ನೀರು ಶುದ್ಧವಾಗಿದೆಯೋ? ಆಹಾರವೂ ಶುಚಿಯಾಗಿದೆಯೋ ಎಂಬುದನ್ನು ಮನದಟ್ಟು ಮಾಡಿಕೊಂಡು ಸೇವಿಸಬೇಕು. ರಸ್ತೆಬದಿಯ ಆಹಾರ ಸೇವನೆಯನ್ನು ನಿಲ್ಲಿಸಬೇಕು. ಶುದ್ಧೀಕರಿಸಿದ ನೀರನ್ನು ಕುಡಿಯಬೇಕು. ಮನೆಯಲ್ಲಿ ನೀರನ್ನು ಕುದಿಸಿ ಆರಿಸಿ ಸೇವಿಸುವುದು ಒಳ್ಳೆಯದು.