ಕೂದಲಿಗೆ ಡೈ ಹಚ್ಚಿದರೆ ಸ್ತನದ ಕ್ಯಾನ್ಸರ್ ಅಪಾಯ ಹೆಚ್ಚು!

ಕೂದಲಿಗೆ ಡೈ ಹಚ್ಚಿದರೆ ಸ್ತನದ ಕ್ಯಾನ್ಸರ್ ಅಪಾಯ ಹೆಚ್ಚು!

Dec 05, 2019 03:35:50 PM (IST)
ಕೂದಲಿಗೆ ಡೈ ಹಚ್ಚಿದರೆ ಸ್ತನದ ಕ್ಯಾನ್ಸರ್ ಅಪಾಯ ಹೆಚ್ಚು!

ಕೂದಲಿಗೆ ಡೈ ಹಚ್ಚುವ ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್ ಬರುವ ಅಪಾಯವು ಹೆಚ್ಚಾಗಿರುವುದು ಎಂದು ಸಂಶೋಧನೆಗಳು ಹೇಳಿವೆ.

ರಾಷ್ಟ್ರೀಯ ಆರೋಗ್ಯ ಸಂಸ್ಥೆಯು ಮಾಡಿರುವಂತಹ ಅಧ್ಯಯನದ ಪ್ರಕಾರ ಕೂದಲಿಗೆ ಡೈ ಮಾಡುವ ಮತ್ತು ರಾಸಾಯನಿಕವಾಗಿ ಕೂದಲನ್ನು ಸ್ಟ್ರೈಟನಿಂಗ್ ಮಾಡುವುದು ತುಂಬಾ ಅಪಾಯಕಾರಿ ಎಂದು ಅಧ್ಯಯನಗಳು ತಿಳಿಸಿವೆ.

ಅಧ್ಯಯನ ವರದಿಗೆ ಒಳಪಟ್ಟಂತಹ ಸುಮಾರು 46,709 ಮಂದಿ ಮಹಿಳೆಯರಲ್ಲಿ ಶೇ.9ರಷ್ಟು ಮಹಿಳೆಯರು ವರ್ಷಕ್ಕೆ ಮೊದಲು ಕೂದಲಿಗೆ ಡೈ ಬಳಸಿಕೊಳ್ಳುತ್ತಿದ್ದರು. ಇಂತಹ ಮಹಿಳೆಯರು ಸ್ತನದ ಕ್ಯಾನ್ಸರ್ ಗೆ ಒಳಗಾಗುವ ಸಾಧ್ಯತೆಯು ಹೆಚ್ಚಾಗಿತ್ತು.

ಕೂದಲನ್ನು ಸ್ಟ್ರೇಟನಿಂಗ್ ಮಾಡುವಂತಹ ಜನರಲ್ಲಿ ಶೇ.30ರಷ್ಟು ಮಂದಿಯಲ್ಲಿ ಸ್ತನದ ಕ್ಯಾನ್ಸರ್ ಅಪಾಯವು ಕಾಣಿಸಿಕೊಂಡಿದೆ. ಪ್ರತೀ 5ರಿಂದ 8 ವಾರಕ್ಕೊಮ್ಮೆ ಡೈ ಬಳಸುವಂತಹ ಆಫ್ರಿಕನ್ ಅಮೆರಿಕನ್ ಮಹಿಳೆಯರಲ್ಲಿ ಈ ಅಪಾಯವು ಶೇ.60ರಷ್ಟಿದೆ ಎಂದು ಅಧ್ಯಯನಗಳು ತಿಳಿಸಿವೆ.