ಉತ್ತಮ ಆರೋಗ್ಯಕ್ಕೆ ಪೌಷ್ಠಿಕ ಆಹಾರ ಸೇವಿಸಿ

ಉತ್ತಮ ಆರೋಗ್ಯಕ್ಕೆ ಪೌಷ್ಠಿಕ ಆಹಾರ ಸೇವಿಸಿ

YK   ¦    Jul 12, 2019 10:47:52 AM (IST)
ಉತ್ತಮ ಆರೋಗ್ಯಕ್ಕೆ ಪೌಷ್ಠಿಕ ಆಹಾರ ಸೇವಿಸಿ

ಉತ್ತಮ ಆರೋಗ್ಯಕ್ಕಾಗಿ ನಾವು ಸೇವಿಸುವ ಆಹಾರವೇ ಪ್ರಾಮುಖ್ಯವಾದದ್ದು, ಆದ್ದರಿಂದ ಯಾವಾಗಲೂ ನಮ್ಮದು ಪೌಷ್ಠಿಕ ಆಹಾರವಾಗಿರಬೇಕು.

ಯಾವುದೇ ಆಹಾರವನ್ನಾದರೂ ಮಿತವಾಗಿ ತಿನ್ನುವುದು ಒಳಿತು. ತಿನ್ನುವ ಆಹಾರದಲ್ಲಿ ಉಪ್ಪು, ಸಕ್ಕರೆ ಹಾಗೂ ಕೊಬ್ಬಿನ ಅಂಶ ಎಷ್ಟಿದೆ ಎಂಬುದನ್ನು ನಾವು ಅರಿತಿರಬೇಕು.

ಮಾಂಸಹಾರವನ್ನು ತಿನ್ನುವಾಗ ಕೊಬ್ಬಿನಾಂಶವಿರುವ ಮಾಂಸವನ್ನೇ ತಿನ್ನಬೇಕು. ಒಳ್ಳೆಯ ಆರೋಗ್ಯಕ್ಕಾಗಿ ವಾರದಲ್ಲಿ ಮೂರು ಬಾರಿ ಮೀನಿದ ಆಹಾರ ತಿನ್ನಿ.

ಸಕ್ಕರೆ ಹಾಗೂ ಕೊಬ್ಬಿನ ಅಂಶವಿರುವ ಹೆಚ್ಚಿನ ಆಹಾರವನ್ನು ಸೇವಿಸುವುದರಿಂದ ತೂಕದಲ್ಲಿ ಭಾರೀ ಬದಲಾವಣೆ ಕಂಡು ಅನಾರೋಗ್ಯಕ್ಕೂ ತುತ್ತಾಗಬಹುದು. ಅದಕ್ಕೇ ಎಲ್ಲ ಆಹಾರವನ್ನು ಮಿತವನ್ನು ಸೇವಿಸುವುದು ತುಂಬಾ ಒಳಿತು.

ಬೆಣ್ಣೆ, ಮಾಂಸ, ಕೇಕ್ ಮತ್ತು ಬಿಸ್ಕತ್ ಗಳಲ್ಲಿ ಹೆಚ್ಚಿನ ಕೊಬ್ಬಿನ ಅಂಶವಿರುತ್ತದೆ. ಅಡುಗೆ ಮಾಡುವ ಡಾಲ್ಡಾ, ತುಪ್ಪಾ ಮುಂತಾದ ಕೊಬ್ಬಿನಾಂಶ ಕಡಿಮೆಯಿರುವ ಎಣ್ಣೆಯನ್ನು ಉಪಯೋಗಿಸಿ.

ಈ ನಿಟ್ಟಿನಲ್ಲಿ ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಆಹಾರ ಪದಾರ್ಥಗಳನ್ನು ಖರೀದಿಸುವಾಗ ಸ್ವಲ್ಪ ಜಾಗ್ರತೆಯಿಂದ ಆಯ್ದುಕೊಳ್ಳಿ. ಇಲ್ಲದಿದ್ದರೆ ಇದು ನಿಮ್ಮ ಭವಿಷ್ಯದ ಮೇಲೆ ನೇರ ಪರಿಣಾಮ ಬೀಳುತ್ತದೆ.