ಅಲೋವೆರಾ ಬಳಸಿ ತ್ವಚೆ ಕಾಂತಿ ಹೆಚ್ಚಿಸಿ

ಅಲೋವೆರಾ ಬಳಸಿ ತ್ವಚೆ ಕಾಂತಿ ಹೆಚ್ಚಿಸಿ

HSA   ¦    May 19, 2020 02:07:10 PM (IST)
ಅಲೋವೆರಾ ಬಳಸಿ ತ್ವಚೆ ಕಾಂತಿ ಹೆಚ್ಚಿಸಿ

ಅಲೋವೆರಾ ಹಲವಾರು ಆರೋಗ್ಯ ಗುಣಗಳನ್ನು ಹೊಂದಿರುವಂತಹ ಗಿಡ. ಹೆಚ್ಚಾಗಿ ಇದರ ಲೋಳೆಯನ್ನು ಸೌಂದರ್ಯವರ್ಧಕವಾಗಿ ಬಳಕೆ ಮಾಡುವರು. ಇದರ ಲೋಳೆ ಮೈಗೆ ಹಚ್ಚಿಕೊಂಡರೂ ಅದರ ಲಾಭಗಳು ಸಿಗುವುದು. ಇದು ಕೆಲವೊಂದು ಚರ್ಮದ ಸಮಸ್ಯೆಗಳನ್ನು ನಿವಾರಿಸುವ ಜತೆಗೆ ಚರ್ಮಕ್ಕೆ ಮೊಶ್ಚಿರೈಸ್ ನೀಡುವುದು. ತಾಜಾ ಅಲೋವೆರಾ ಲೋಳೆಯನ್ನು ಕುಡಿದರೆ ಅದರಿಂದ ಜೀರ್ಣಕ್ರಿಯೆ ಸುಧಾರಣೆ ಆಗುವುದು ಮತ್ತು ಅಸಿಡಿಟಿಯಿಂದ ಬಳಲುವ ಸಮಸ್ಯೆಗೆ ಇದು ಪರಿಹಾರ ನೀಡುವುದು.

ಅಲೋವೆರಾ ಹಚ್ಚಿ ಮಲಗಿ

ರಾತ್ರಿ ಮಲಗಲು ಹೋಗುವ ಮೊದಲು ನೀವು ಅಲೋವೆರಾ ಲೋಳೆ ಹಚ್ಚಿಕೊಳ್ಳಿ. ಚರ್ಮಕ್ಕೆ ಬೇಕಾಗುವಂತಹ ಮೊಶ್ಚಿರೈಸ್ ನ್ನು ಇದು ಒದಗಿಸುವುದು. ಈ ಲೋಳೆಯು ಚರ್ಮವನ್ನು ತುಂಬಾ ತಂಪಾಗಿಡಲು ನೆರವಾಗುವುದು.

ಬಿಸಿಲಿಗೆ ಹೊರಗಡೆ ಹೋಗುವುದಿದ್ದರೆ…

ಬಿಸಿಲಿಗೆ ಚರ್ಮವು ಕೆಂಪಾಗುವುದು, ಸುಟ್ಟು ಹೋಗುವುದು. ಇದನ್ನು ತಡೆಯಲು ಅಲೋವೆರಾ ಹಚ್ಚಿಕೊಳ್ಳಬೇಕು. ಬಿಸಿಲಿನಿಂದ ಮನೆಗೆ ಬಂದ ಬಳಿಕ ನೀವು ಸಂಪೂರ್ಣ ಮೈಗೆ ಅಲೋವೆರಾ ಲೋಳೆ ಹಚ್ಚಿಕೊಳ್ಳಿ. ಅಲೋವೆರಾ ಚರ್ಮದಲ್ಲಿನ ತಾಪಮಾನ ಕಡಿಮೆ ಮಾಡಿ ತಂಪು ಉಂಟು ಮಾಡುವುದು.

ಮೊಡವೆಗೆ

ಮೊಡವೆಗಳು ತುಂಬಾ ನೋವುಂಟು ಮಾಡುವುದು. ಅಲೋವೆರಾವನ್ನು ಹಚ್ಚಿಕೊಂಡರೆ ಆಗ ಮೊಡವೆಗಳಿಂದ ಆಗುವಂತಹ ನೋವು ಹಾಗೂ ಕಿರಿಕಿರಿಗೆ ಪರಿಹಾರ ಒದಗಿಸುವುದು.

ಚರ್ಮದ ತುರಿಕೆಗೆ

ಬೇಸಗೆಯಲ್ಲಿ ತುರಿಕೆ ಕಾಣಿಸುವುದು ಮತ್ತು ಇಡೀ ದಿನ ಬಿಗಿಯಾದ ಬಟ್ಟೆ ಧರಿಸಿಕೊಂಡರೆ ಆಗ ಖಂಡಿತವಾಗಿಯೂ ಈ ಸಮಸ್ಯೆಯು ಬರುವುದು. ಚರ್ಮಕ್ಕೆ ಹೆಚ್ಚಿನ ಗಾಳಿಯು ಸಿಗದೆ ಇರುವ ಪರಿಣಾಮವಾಗಿ ತುರಿಕೆ ಕಂಡುಬರುವುದು. ಇದಕ್ಕೆ ಅಲೋವೆರಾ ಹಚ್ಚಿಕೊಂಡರೆ ಒಳ್ಳೆಯದು.

ಕಲೆ ತೆಗೆಯಲು

ಗಾಯದಿಂದಾಗಿ ಉಂಟಾಗಿರುವ ಕಲೆ ನಿವಾರಣೆ ಮಾಡಲು ಅಲೋವೆರಾ ಲೋಳೆಯು ಒಳ್ಳೆಯದು. ಮೊಡವೆ ಹಾಗೂ ಬೊಕ್ಕೆಗಳಿಂದ ಆದ ಕಲೆಗಳು ಕೂಡ ಅಲೋವೆರಾ ಹಚ್ಚಿ ನಿವಾರಿಸಬಹುದು.