ಉಷ್ಣ ರಹಿತ ನೆಸರಿ ಜೇನು: ಆರೋಗ್ಯ ಲಾಭಗಳು ಹಲವಾರು…

ಉಷ್ಣ ರಹಿತ ನೆಸರಿ ಜೇನು: ಆರೋಗ್ಯ ಲಾಭಗಳು ಹಲವಾರು…

Megha R Sanadi   ¦    Oct 09, 2020 05:43:33 PM (IST)
ಉಷ್ಣ ರಹಿತ ನೆಸರಿ ಜೇನು: ಆರೋಗ್ಯ ಲಾಭಗಳು ಹಲವಾರು…

ಜೇನುತುಪ್ಪ ಅಂದಾಕ್ಷಣ ಎಲ್ಲರ ಬಾಯಲ್ಲೂ ನೀರೂರುವುದು ಸಹಜ. ಆದರೆ ಅದರಲ್ಲಿ ಅನೇಕ ರೀತಿಯ ತುಪ್ಪಗಳು ಇವೆ ಎಂಬುದು ಹಲವರಿಗೆ ತಿಳಿಯದ ವಿಷಯ. ನೆಸರಿ, ಹೆಜ್ಜೇನು, ತುಡುವ, ಕೋಲು ಜೇನು, ತತ್ತಿ ಜೇನು ಹೀಗೆ ಅನೇಕ ಜಾತಿಯ ಜೇನುಗಳಿವೆ. ಜೇನಿನ ಜಾತಿ ಬದಲಾಗುತ್ತಾ ಹೋದಂತೆ ಅದರಲ್ಲಿರುವ ರುಚಿ, ಔಷಧೀಯ ಗುಣ, ಉಪಯೋಗ ಬದಲಾಗುತ್ತಾ ಹೋಗುತ್ತದೆ.

ಸಾಮಾನ್ಯವಾಗಿ ಅಂಗಡಿಗಳಲ್ಲಿ ಸಿಗುವ ಜೇನುತುಪ್ಪದಲ್ಲಿ ಬದಲಾವಣೆಗಳನ್ನು ಹುಡುಕುವುದು ಕಷ್ಟ. ಆದರೆ ಹಳ್ಳಿಗಳಲ್ಲಿ ಹಳ್ಳಿಗರೆ ತೆಗೆಯುವ ತುಪ್ಪಗಳಲ್ಲಿನ ವ್ಯತ್ಯಾಸ ಅತಿ ಸುಲಭವಾಗಿ ತಿಳಿಯುತ್ತದೆ. ಪ್ರತಿ ಜೇನಿನ ತುಪ್ಪದ ಬಣ್ಣ, ಮೃದುತ್ವದಲ್ಲಿ ಅವುಗಳ ವ್ಯತ್ಯಾಸವನ್ನು ಹಾಗೂ ಅದು ಯಾವ ತುಪ್ಪವೆಂದು ಸುಲಭವಾಗಿ ಗುರುತಿಸಬಹುದು. ರುಚಿಯೊಂದಿಗೆ ಅವುಗಳ ಪರಿಮಳವು ವಿಭಿನ್ನವಾಗಿರುತ್ತದೆ.

ಇನ್ನು ಉಪಯೋಗದ ವಿಚಾರವಾಗಿ ಯೋಚಿಸಿದಾಗ ರುಚಿ ಬಣ್ಣ ಬದಲಾದಂತೆ ಬಳಕೆಯು ಬದಲಾಗುತ್ತಾ ಹೋಗುತ್ತದೆ. ಹೆಜ್ಜೇನು ಸವಿಯಲು ತುಂಬಾ ರುಚಿಕರವಾಗಿದ್ದರೂ, ಅದು ದೇಹಕ್ಕೆ ಅಷ್ಟೇ ಉಷ್ಣದಾಯಕವಾಗಿರುವುದು ಕೂಡ. ಅದನ್ನು ಕಾಡಿನಿಂದ ಬರುವ ಸಮಯದಲ್ಲಿ ಅತಿ ಜಾಗರೂಕತೆ ಬೇಕು. ಕಾರಣ ಅವುಗಳು ಕಚ್ಚುವ ಸಾಧ್ಯತೆ ಹೆಚ್ಚು. ಇನ್ನು ತುಳುವ ಕೋಲು ಜೇನು ಇವುಗಳನ್ನು ಸುಲಭವಾಗಿ ಹಿಡಿಯಬಹುದು ಅಥವಾ ಸಂಗ್ರಹಿಸಬಹುದು. ಆದರೆ ಅವು ಹೆಜ್ಜೆನಿನ್ನಷ್ಟು ರುಚಿಕರವೆನಿಸುವುದಿಲ್ಲ.

ಜೇನಿನ ಜಾತಿಯಂತೆ ಕಾಣುವ ಆದರೆ ಜೇನಿನ ಜಾತಿಗಿಂತ ವಿಭಿನ್ನವಾಗಿರುವ ಹುಳದ ಗುಂಪೆಂದರೆ ಅದು ನರ್ಸರಿ. ಇವು ಹೆಚ್ಚಾಗಿ ಯಾವುದಾದರೂ ಮರದ ಪುಟ್ಟರೆ ಒಳಗೆ ಅಥವಾ ಮಣ್ಣಿನ ಮನೆಗಳ ಗೋಡೆಯೊಳಗೂ ಕಟ್ಟುವ ಸಾಧ್ಯತೆಗಳು ಹೆಚ್ಚು. ನೋಡಲು ನೊಣಗಳಂತೆ ಕಂಡರು ಅವುಗಳ ರೂಪ ಜೇನಿಗೆ ಹೋಲುತ್ತದೆ. ಈ ನರ್ಸರಿ ಜೇನಿಗಳ ತುಪ್ಪ ತಿನ್ನಲು ಮತ್ತಿತರ ಜೇನಿನಂತೆ ಇರುವುದಿಲ್ಲ. ಅದರ ರುಚಿ ಜೇನುತುಪ್ಪಕಿಂತ ಭಿನ್ನವಾಗಿರುತ್ತದೆ. ಆದರೆ ಅದರ ಉಪಯೋಗ ಸಾಧಾರಣ ಜೇನಿಗಿಂತ ಹೆಚ್ಚು. ಏಕೆಂದರೆ ಈ ನಸರಿ ತುಪ್ಪ ಮತ್ತಿತರ ಜೇನಿನಂತೆ ಉಷ್ಣವಲ್ಲ. ಬದಲಾಗಿ ಇದು ನಮ್ಮ ದೇಹವನ್ನು ತಂಪಾಗಿರುತ್ತದೆ. ಆದ್ದರಿಂದ ಇದನ್ನು ಅನೇಕ ರೀತಿಯ ಔಷಧೀಯ ವಸ್ತುಗಳಿಗೆ ಬಳಸುತ್ತಾರೆ.