ಕೊರೋನಾ ನಡುವೆ ಇನ್‍ಫ್ಲ್ಯೂಯೆಂಜ್ಹಾ ಭಯ...

ಕೊರೋನಾ ನಡುವೆ ಇನ್‍ಫ್ಲ್ಯೂಯೆಂಜ್ಹಾ ಭಯ...

LK   ¦    Jul 03, 2020 04:30:41 PM (IST)
ಕೊರೋನಾ ನಡುವೆ ಇನ್‍ಫ್ಲ್ಯೂಯೆಂಜ್ಹಾ ಭಯ...

ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಅದರ ಜೊತೆಯಲ್ಲಿ ವಾತಾವರಣಕ್ಕೆ ತಕ್ಕಂತೆ ಇತರೆ ರೋಗಗಳು ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯವಾಗಿ ಮಳೆಗಾಲದ ಸಮಯದಲ್ಲಿ ಪ್ರತಿವರ್ಷವೂ ಉಸಿರಾಟದ ಸೋಂಕು ಇನ್‍ಫ್ಲ್ಯೂಯೆಂಜ್ಹಾ (Seasonal  Influenza)  ಕಾಡುತ್ತದೆ. ಈ ಬಾರಿ ಕೊರೋನಾ ಸೇರಿಕೊಂಡಿರುವುದು ಜನ ಭಯದಲ್ಲಿ ಬದುಕುವಂತೆ ಮಾಡಿದೆ.

ಇಷ್ಟಕ್ಕೂ ಇನ್‍ಫ್ಲ್ಯೂಯೆಂಜ್ಹಾ ಅಂದರೇನು? ಅದು ಹೇಗೆ ಕಾಡುತ್ತದೆ ಎಂಬುದನ್ನು ನೋಡುವುದಾದರೆ ಇದು ಸಣ್ಣ ಮಕ್ಕಳಲ್ಲಿ ಮತ್ತು  ಅರವತ್ತೈದು ವರ್ಷ ಮೀರಿದ ವಯಸ್ಕರನ್ನು ಹೆಚ್ಚಾಗಿ ಬಾಧಿಸುತ್ತದೆ. ರೋಗ ನಿರೋಧಕ ಶಕ್ತಿ  ಕುಗ್ಗಿರುವ ಕ್ಯಾನ್ಸರ್, ಶ್ವಾಸಕೋಶದ ಸೋಂಕು,  ಹೃದಯ, ಯಕೃತ್, ಮೂತ್ರಪಿಂಡದ ತೊಂದರೆ ಅನುಭವಿಸುತ್ತಿರುವ,  ಮಧುಮೇಹದ ರೋಗಿಗಳಲ್ಲಿ ಸೋಂಕಿನ ಸಂಭಾವ್ಯತೆ  ಹೆಚ್ಚಾಗಿರುತ್ತದೆ. ಆದರೆ ಒಂದು ನೆಮ್ಮದಿ ಏನೆಂದರೆ ಇದಕ್ಕೆ ಲಸಿಕೆಯನ್ನು ಪಡೆಯಬಹುದಾಗಿದೆ.

ಇದೇ ಗುಣಲಕ್ಷಣಗಳು ಕೊರೋನಾದಲ್ಲಿ ಇರುವುದರಿಂದಾಗಿ ಎರಡಕ್ಕೆ ಸಾಮ್ಯತೆ ಇರುವುದು ಮತ್ತಷ್ಟು ಜನರನ್ನು ಸಂಕಷ್ಟಕ್ಕೆ ದೂಡಿದೆ. ಕಡಿಮೆ ಜ್ವರ, ಕೆಮ್ಮು, ಗಂಟಲು ನೋವು ಕಡಿಮೆ ರಕ್ತದ ಒತ್ತಡ, ಎದೆ ನೋವು, ಕಫದಲ್ಲಿ ರಕ್ತ ಮೊದಲಾದ ಲಕ್ಷಣಗಳು ಕಂಡು ಬರುತ್ತದೆ ಸೋಂಕಿತ ವ್ಯಕ್ತಿಯು ಕೆಮ್ಮುವುದರಿಂದ ಮತ್ತು ಸೀನುವುದರಿಂದ ವಾತಾವರಣದಲ್ಲಿ ವೈರಾಣುವಿನ ಕಣಗಳು ಹರಡಿ ದಿನನಿತ್ಯದ ಬಳಕೆಯ ವಸ್ತುವಿನ ಮೇಲೆ ಕೂರುತ್ತವೆ.

ಆರೋಗ್ಯವಂತ ವ್ಯಕ್ತಿ  ಈ ವಸ್ತುಗಳನ್ನು ಮುಟ್ಟಿದ ಅಥವಾ ಉಪಯೋಗಿಸಿದ ನಂತರ  ಕೈಗಳಿಂದ ಬಾಯಿ, ಮೂಗು ಮತ್ತು ಕಣ್ಣುಗಳನ್ನು ಮುಟ್ಟಿಕೊಳ್ಳುವುದರಿಂದ ಸೋಂಕು ಹರಡುತ್ತದೆ. ಇದರ ನಿಯಂತ್ರಣಕ್ಕಾಗಿ ಸಾರ್ವಜನಿಕ ಪ್ರದೇಶದಲ್ಲಿ ಇದ್ದು ಬಂದ ನಂತರ ಸ್ವಚ್ಛವಾಗಿ ಸೋಪಿನಿಂದ ಕೈಗಳನ್ನು ತಿಕ್ಕಿ ತೊಳೆಯುವುದು ಅಥವಾ ಆಲ್ಕೋಹಾಲ್ ಯುಕ್ತ ಸ್ವಚ್ಛಕಾರಕಗಳನ್ನು ಬಳಸಿ ಕೈಗಳನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು.

ರೋಗಲಕ್ಷಣವುಳ್ಳ ವ್ಯಕ್ತಿಗಳಿಂದ ಮಾರುದ್ದದ್ದಷ್ಟು ದೂರವಿರಬೇಕು ರೋಗಲಕ್ಷಣಗಳು ಕಂಡುಬಂದಲ್ಲಿ ಉದಾಸೀನ ಮಾಡದೆ ಕೂಡಲೇ ವೈದ್ಯರ ಸಲಹೆ ಪಡೆಯಬೇಕು ವಾತಾವರಣ ಬದಲಾದಾಗಲೆಲ್ಲ ನಮ್ಮ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. ಹಾಗೆಂದು ಇವತ್ತಿನ ಪರಿಸ್ಥಿತಿಯಲ್ಲಿ  ನಿರ್ಲಕ್ಷ್ಯ ವಹಿಸುವಂತೆಯೂ ಇಲ್ಲ. ಎಚ್ಚರವಾಗಿರುವುದಷ್ಟೆ ಮುಖ್ಯ.