ಮಣ್ಣಿನ ಮಡಿಕೆಯ ನೀರು ಆರೋಗ್ಯಕ್ಕೆ ಉತ್ತಮ

ಮಣ್ಣಿನ ಮಡಿಕೆಯ ನೀರು ಆರೋಗ್ಯಕ್ಕೆ ಉತ್ತಮ

LK   ¦    Mar 05, 2019 01:00:13 PM (IST)
ಮಣ್ಣಿನ ಮಡಿಕೆಯ ನೀರು ಆರೋಗ್ಯಕ್ಕೆ ಉತ್ತಮ

ಹಿಂದಿನ ಕಾಲದಲ್ಲಿ ಹೆಚ್ಚಿನವರು ಮಣ್ಣಿನ ಪಾತ್ರೆ, ಪಗಡೆಗಳನ್ನು ತಮ್ಮ ನಿತ್ಯದ ಅಡುಗೆ ಸೇರಿದಂತೆ ಇನ್ನಿತರ ಕಾರ್ಯಕ್ಕೆ ಉಪಯೋಗಿಸುತ್ತಿದ್ದರು. ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡಿ ಸೇವಿಸುವುದು ಆರೋಗ್ಯಕ್ಕೂ ಉತ್ತಮವಾಗಿತ್ತು. ಆದರೆ ಬದಲಾದ ಕಾಲದಲ್ಲಿ ಮಣ್ಣಿನ ಪಾತ್ರೆಯ ಬಳಕೆ ಕಡಿಮೆಯಾಗಿ ಸ್ಟೀಲ್, ಅಲ್ಯೂಮಿನಿಯಂ, ಗಾಜು ಬಳಕೆಗೆ ಬಂದಿವೆ.

ಜತೆಗೆ ಮಣ್ಣಿನ ಪಾತ್ರೆಯನ್ನು ಕಾಪಾಡಿಕೊಳ್ಳುವುದು ಕೂಡ ಜನರಿಗೆ ಕಷ್ಟವಾಗಿ ಪರಿಣಮಿಸಿದೆ. ಆದರೂ ಇಂದಿಗೂ ಆಹಾರ ಪದಾರ್ಥಗಳನ್ನು, ನೀರನ್ನು ಕೆಲವರು ಇಂದಿಗೂ ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳುವುದನ್ನು ಕಾಣಬಹುದಾಗಿದೆ.

ಇದೀಗ ಬೇಸಿಗೆಯ ದಿನಗಳು ಆರಂಭವಾಗಿರುವುದರಿಂದ ಮಣ್ಣಿನ ಮಡಿಕೆಗಳಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಂಡು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಕಾರಣಕ್ಕಾಗಿ ಮಡಕೆಗಳಿಗೆ ಬೇಡಿಕೆ ಹೆಚ್ಚಿದ್ದು ಹೀಗಾಗಿ ಮಣ್ಣಿನ ಫಿಲ್ಟರ್ಗ ಳತ್ತ ಜನ ಮುಖ ಮಾಡಿರುವುದು ಕಂಡು ಬರುತ್ತದೆ.

ಇತ್ತೀಚೆಗಿನ ವರ್ಷಗಳಲ್ಲಿ ಆಧುನಿಕ ತಂತ್ರಜ್ಞಾನಗಳನ್ನೊಳಗೊಂಡ ಹಲವು ಬಗೆಯ ಫಿಲ್ಟರ್ ಗಳು ಬಂದಿರುವುದರಿಂದ ಮಣ್ಣಿನ ಫಿಲ್ಟರ್ ಸೇರಿದಂತೆ ಪಾತ್ರೆಗಳನ್ನು ಬಳಸುವವರ ಸಂಖ್ಯೆ ಕಡಿಮೆಯಾಗಿದ್ದರೂ ನೋಡಲು ಆಕರ್ಷಕವಾಗಿದ್ದರೆ ಅಂಥ ವಸ್ತುಗಳನ್ನು ಖರೀದಿಸುವ ಫ್ಯಾಷನ್ಪ್ರಿ ಯರಿದ್ದಾರೆ.

ಇಂತಹವರಿಗಾಗಿಯೇ ಬಿಹಾರದ ವ್ಯಾಪಾರಿಗಳು ಆಕರ್ಷಕ, ಕಲಾತ್ಮಕ ಮಣ್ಣಿನ ಫಿಲ್ಟರ್ಗಳಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ನೋಡಲು ವಿಭಿನ್ನವಾಗಿರುವುದರಿಂದ ಜತೆಗೆ ಮನೆಯಲ್ಲಿ ಅಲಂಕಾರಿಕ ವಸ್ತುಗಳ ಸ್ಥಾನವನ್ನು ತುಂಬುವುದರಿಂದ ಒಂದಷ್ಟು ಜನ ಈ ಫಿಲ್ಟರ್ಗವಳನ್ನು ಖರೀದಿಸಿ ಮನೆಗೆ ಕೊಂಡೊಯ್ಯುತ್ತಿದ್ದಾರೆ.

ಇಲ್ಲಿರುವ ಫಿಲ್ಟರ್ಗ್ಳು ಬಣ್ಣ, ವಿನ್ಯಾಸ ಮತ್ತು ಕಲಾತ್ಮಕ ಚಿತ್ರಗಳಿಂದ ಕೂಡಿ ವಿಭಿನ್ನವಾಗಿವೆ. ಸುರಕ್ಷತೆಗಾಗಿ ಸ್ಟಾಂಡ್ನ್ನು ಕೂಡ ಅಳವಡಿಸಲಾಗಿದೆ. 10ಲೀ, 20ಲೀಟರ್ ನೀರು ತುಂಬುವ ಸಾಮಥ್ರ್ಯ ಹೊಂದಿರುವ ಇವುಗಳ ಬೆಲೆ 300ರೂ.ನಿಂದ ಆರಂಭವಾಗುತ್ತದೆ.

ಬೇಸಿಗೆಯಲ್ಲಿ ದಾಹ ತೀರಿಸುವ ಸಲುವಾಗಿ ಸದಾ ಫ್ರಿಡ್ಜ್ ನೀರನ್ನೇ ಬಯಸುವ ಬದಲು ಶುದ್ಧ ನೀರನ್ನು ಮಣ್ಣಿನ ಪಾತ್ರೆ ಅಥವಾ ಫಿಲ್ಟರ್ನರಲ್ಲಿ ಶೇಖರಿಸಿಟ್ಟುಕೊಂಡು ಅದಕ್ಕೆ ಸ್ವಲ್ಪ ಜೀರಿಗೆ ಅಥವಾ ಅಥವಾ ಕೊತ್ತಂಬರಿ ಹಾಕಿ ಅದರ ನೀರನ್ನು ಸೇವಿಸಿದರೆ ಬೇಸಿಗೆಯಲ್ಲಿ ದೇಹ ತಂಪಾಗಿರಲು ಸಾಧ್ಯವಾಗುತ್ತದೆ.