ಬೇಸಿಗೆಯಲ್ಲಿ ಮಾಲಿನ್ಯ ಹೆಚ್ಚಳ : ಮಕ್ಕಳು, ಮಹಿಳೆಯರು, ವೃದ್ಧರಿಗೆ ಅಪಾಯ ಹೆಚ್ಚು

ಬೇಸಿಗೆಯಲ್ಲಿ ಮಾಲಿನ್ಯ ಹೆಚ್ಚಳ : ಮಕ್ಕಳು, ಮಹಿಳೆಯರು, ವೃದ್ಧರಿಗೆ ಅಪಾಯ ಹೆಚ್ಚು

Kapil Kajal   ¦    May 04, 2020 03:50:58 PM (IST)
ಬೇಸಿಗೆಯಲ್ಲಿ ಮಾಲಿನ್ಯ ಹೆಚ್ಚಳ : ಮಕ್ಕಳು, ಮಹಿಳೆಯರು, ವೃದ್ಧರಿಗೆ ಅಪಾಯ ಹೆಚ್ಚು

ಬೆಂಗಳೂರು : ತಜ್ಞರ ಅಭಿಪ್ರಾಯದಂತೆ ಬೇಸಿಗೆಯ ಆರಂಭದಲ್ಲಿ ಮಾಲಿನ್ಯ ಹೆಚ್ಚಿರುತ್ತದೆ. ಸಂಶೋಧನಾ ಅಧ್ಯಯನಗಳ ಪ್ರಕಾರ ವಾಯುಮಾಲಿನ್ಯವು ಬೇಸಿಗೆಯಲ್ಲಿ ಅಧಿಕವಾಗಿದ್ದು, ಒಣ ಹವಾಮಾನವು ಮಾಲಿನ್ಯ ಮಟ್ಟವನ್ನು ಹೆಚ್ಚಿಸುತ್ತದೆ. ಐದು ಪ್ರಮುಖ ಮಾಲಿನ್ಯಕಾರಕಗಳಾದ ಪಿಎಂ ಕಣಗಳು, ನೆಲಮಟ್ಟದ ಓಝೋನ್, ಇಂಗಾಲದ ಆಕ್ಸೈಡ್, ಸಲ್ಫರ್ ಡೈಆಕ್ಸೈಡ್, ನೈಟ್ರೋಜನ್ ಆಕ್ಸೈಡ್ ಗಗಳು ಬೇಸಿಗೆಯಲ್ಲಿ ಹೆಚ್ಚಿವೆ.

ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೆಷನ್‍ನ ಅಧ್ಯಯನ ಪ್ರಕಾರ ಬೇಸಿಗೆಯ ಮಾಲಿನ್ಯ ಹಾಗೂ ಉಸಿರಾಟ ಸಂಬಂಧಿ ಕಾಯಿಲೆಗಳಿಗೆ ಸಂಬಂಧವಿದೆ ಹಾಗೂ ಕೆಮ್ಮು ಮತ್ತು ಇತರ ಉಸಿರಾಟದ ತೊಂದರೆಗಳು ಬೇಸಿಗೆಯಲ್ಲಿ ಅಧಿಕ ಎಂದು ತಿಳಿಸಿದೆ. 

ಪರಿಸರ ಸಂಬಂಧಿತ ಎನ್‍ಜಿಒ ಇಕೋ-ವಾಚ್‍ನ ನಿರ್ದೇಶಕ ಅಕ್ಷಯ್ ಹೆಬ್ಲೀಕರ್ ಅವರು ಹೇಳುವಂತೆ ‘ಬೇಸಿಗೆಯಲ್ಲಿ ಓಝೋನ್ ಹಾಗೂ ಅತಿ ಸಣ್ಣ ಧೂಳಿನ ಕಣಗಳು (ಪಿಎಂ) ಎರಡು ಪ್ರಮುಖ ಮಾಲಿನ್ಯಕಾರಕಗಳಾಗಿವೆ. ಇದನ್ನರಿತು ಪರಿಹಾರ ಕಂಡುಕೊಳ್ಳಬೇಕು’.

ಸೂರ್ಯನ ಬೆಳಕು ಹಾಗೂ ಓಝೋನ್ ನಿಂದಾಗಿ ಹೈಡ್ರೋಕಾರ್ಬನ್ ಮತ್ತು ಇತರ ರಾಸಾಯನಿಕಗಳೊಂದಿಗೆ ಪ್ರತಿಕ್ರಿಯಿಸುವ ಮುನ್ನವೇ ನೈಟ್ರೋಜನ್ ಆಕ್ಸೈಡ್ ಮಟ್ಟವನ್ನು ನಿಯಂತ್ರಿಸುವುದು ಅಗತ್ಯ. ಇದೊಂದು ವೇಳೆ ಪಿಎಂ ಕಣಗಳೊಂದಿಗೆ (ಅತಿಸಣ್ಣ ಕಣ) ಬೆರೆತರೆ ಬೇಸಿಗೆಯ ಮಬ್ಬಿಗೆ ಕಾರಣವಾಗಿ, ಉಸಿರಾಟದ ತೊಂದರೆಯನ್ನುಂಟು ಮಾಡುತ್ತದೆ.
ರಾಸಾಯನಿಕ ಪ್ರಕ್ರಿಯೆಯಲ್ಲಿ ಒಳಗೊಳ್ಳುವ ನೈಟ್ರೋಜನ್ ಆಕ್ಸೈಡ್, ಸಾರಜನಕ ಸಂಯುಕ್ತಗಳು ಹಾಗೂ ಸೂರ್ಯನ ಬೆಳಕನ್ನು ಒಳಗೊಂಡು ನೆಲಮಟ್ಟದ ಓಝೋನ್ ರಚನೆಗೆ ಸಹಾಯ ಮಾಡುತ್ತದೆಯಲ್ಲದೆ, ಬೇಸಿಗೆಯ ಮಧ್ಯಾಹ್ನಗಳಲ್ಲಿ ಸೂರ್ಯನ ಬೆಳಕಿನ ಕಿರಣಗಳು ಪ್ರಖರವಾಗಿರುವುದರಿಂದ ಅತ್ಯಧಿಕ ತಾಪಮಾನವು ವೇಗವಾಗಿ ಓಝೋನ್ ರೂಪುಗೊಳ್ಳಲು ಕಾರಣವಾಗುತ್ತದೆ.

ವಾತಾವರಣದಲ್ಲಿನ ಅಧಿಕ ಒತ್ತಡದಿಂದಾಗಿ ಮಾಲಿನ್ಯಕಾರಕಗಳು ಕರಗುವುದು ಕಷ್ಟಕರ. ಈ ಸಂದರ್ಭದಲ್ಲಿ ಮಕ್ಕಳು, ಮಹಿಳೆಯರು (ಹೆಚ್ಚಾಗಿ ಗರ್ಭಿಣಿ ಸ್ತ್ರೀಯರಲ್ಲಿ) ಮತ್ತು ವೃದ್ಧರು ಗರಿಷ್ಠ ಅಪಾಯದಲ್ಲಿರುತ್ತಾರೆ ಎಂದು ಅವರು ಉಲ್ಲೇಖಿಸುತ್ತಾರೆ.

ಹೆಚ್ಚಿದ ಬಳಕೆಯ ಪ್ರಮಾಣ, ಹೆಚ್ಚುತ್ತಿರುವ ಮಾಲಿನ್ಯ : ಅಮೇರಿಕಾ ಮೂಲದ ಅಧ್ಯಯನವೊಂದರ ಪ್ರಕಾರ, ವಿದ್ಯುತ್ ಚಾಲಿತ ಸಂಪೂರ್ಣ ವ್ಯವಸ್ಥಿತ ಜೀವನ ಶೈಲಿಯು ರೂಢಿಯಾಗಿರುವ ಸಂದರ್ಭದಲ್ಲಿ ವಿದ್ಯುತ್ ಬಳಕೆಯ ಹೊರಸೂಸುವಿಕೆಯಿಂದಾಗಿ ಉಂಟಾಗುತ್ತಿರುವ ಮಾಲಿನ್ಯದ ಕಾರಣಕ್ಕೆ ಸಂಭವಿಸುತ್ತಿರುವ ಸಾವುಗಳ ಪ್ರಮಾಣವು 5 ರಿಂದ 9% ಕ್ಕೆ ಹೆಚ್ಚಳವಾಗಿದೆ.

ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸಯನ್ಸ್ ನ (ಐಐಎಸ್‍ಸಿ) ಸೆಂಟರ್ ಫಾರ್ ಇಕೋಲಾಜಿಕಲ್ ಸಯನ್ಸ್ ನ ಪ್ರಾಧ್ಯಾಪಕರಾಗಿರುವ ಡಾ. ಟಿ.ವಿ. ರಾಮಚಂದ್ರ `ಹವಾನಿಯಂತ್ರಣಗಳ (ಎಸಿ) ಬಳಕೆಯು ಬೇಸಿಗೆಯಲ್ಲಿ ಅಧಿಕವಾಗಿರುತ್ತವೆ ಮತ್ತು ಇದರಿಂದಾಗಿ ವಿದ್ಯುತ್‍ನ ಬಳಕೆಯೂ ಹೆಚ್ಚಿದಂತೆ. ಇದರ ಹಿನ್ನಲೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳು ಹೆಚ್ಚು ಮಾಲಿನ್ಯಕಾರಕಗಳನ್ನು ಬಿಡುಗಡೆ ಮಾಡುತ್ತವೆ.

ಕಲ್ಲಿದ್ದಲನ್ನು ಸುಡುವುದರಿಂದ ಅಸ್ತಮಾ, ಶ್ವಾಸಕೋಶದ ತೊಂದರೆಗಳು, ಹೃದ್ರೋಗಗಳು ಮತ್ತು ಕ್ಯಾನ್ಸರ್ ಮುಂತಾದ ಹಲವಾರು ಆನಾರೋಗ್ಯಕ್ಕೆ ಕಾರಣವಾಗುತ್ತವೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್ ಒ) ಪ್ರಕಾರ, ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಜನ್ಮತ ಕಾಯಿಲೆಗಳಿಂದ ಆರಂಭವಾಗಿ ಮಕ್ಕಳಲ್ಲಿ ಮಧುಮೇಹದವರೆಗಿನ ಅನೇಕ ಗಂಭೀರ ಆರೋಗ್ಯ ವಿಪತ್ತುಗಳಿಗೆ ಕಾರಣವಾಗುತ್ತದೆ.

ದಕ್ಷಿಣ ಬೆಂಗಳೂರಿನ ಹೆಮ್ಮಿಗೆಪುರ ವಾರ್ಡ್ ನ ತುರಹಳ್ಳಿ ಮೀಸಲು ಅರಣ್ಯದಲ್ಲಿ ಪ್ರತಿವರ್ಷವೂ ಬೆಂಕಿ ಬೀಳುತ್ತದೆ. ಆರೋಗ್ಯಕ್ಕೆ ಹಾನಿಕಾರಕವಾಗಿರುವ ಹೊಗೆ, ಪಿಎಂ (ಅತಿ ಸಣ್ಣ ಕಣಗಳು), ಓಝೋನ್, ಇಂಗಾಲದ ಆಕ್ಸೈಡ್‍ಗಳು, ಸಲ್ಫರ್ ಡೈಆಕ್ಸೈಡ್ ಮತ್ತು ನೈಟ್ರೋಜನ್ ಆಕ್ಸೈಡ್‍ಗಳು ಅರಣ್ಯಕ್ಕೆ ಬೆಂಕಿ ಬಿದ್ದ ಸಂದರ್ಭದಲ್ಲಿ ಬಿಡುಗಡೆಯಾಗುತ್ತವೆ ಎನ್ನುತ್ತಾರೆ ಇಕಾಲಜಿಕಲ್ ಸೆಕ್ಯುರಿಟಿ ಆಫ್ ಇಂಡಿಯಾ ಪ್ರತಿಷ್ಠಾನದ ಆಡಳಿತ ಮಂಡಳಿ ಸದಸ್ಯರಾದ ಡಾ. ಎಲ್ಲಪ್ಪ ರೆಡ್ಡಿ.

ಬೇಸಿಗೆಯಲ್ಲಿ ಮಾಲಿನ್ಯದ ಜೊತೆಗೆ ಬ್ಯಾಕ್ಟೀರಿಯಾ, ಶಿಲೀಂದ್ರ (ಫಂಗಸ್)ಗಳು ಗಾಳಿಯಲ್ಲಿ ಸೇರಿಕೊಂಡು ಗಾಳಿಯನ್ನು ಇನ್ನಷ್ಟು ಕಲುಷಿತಗೊಳಿಸುತ್ತವೆ. ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಯನವೊಂದರ ಪ್ರಕಾರ, ಮಾರ್ಚ್‍ನಿಂದ ಮೇವರೆಗಿನ ಮಾನ್ಸೂನ್ ಪೂರ್ವ ತಿಂಗಳುಗಳಲ್ಲಿ ಗಾಳಿಯಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಬ್ಯಾಕ್ಟೀರಿಯಾ ಹಾಗೂ ಶಿಲೀಂದ್ರ (ಫಂಗಸ್) ಕಾಣಿಸಿಕೊಳ್ಳುತ್ತದೆ.

ಗಾಳಿಯಲ್ಲಿರುವ ಬ್ಯಾಕ್ಟೀರಿಯಾದ ವಾಯುಕಣಗಳನ್ನು ಅಥವಾ ಜೈವಿಕ ವಾಯುಕಣಗಳನ್ನು ಸೇವಿಸುವುದರಿಂದ ವಾಯುಗಾಮಿ ಸೋಂಕುಗಳು, ಶ್ವಾಸಕೋಶದ ಸೋಂಕು, ಮೂತ್ರದ ಸೋಂಕು, ಬ್ಯಾಕ್ಟೆರ್ಮಿಯಾ, ಬಾಕ್ಟೀರಿಯಲ್ ಎಂಡೋಕಾರ್ಡಿಟಿಕ್, ಡೈವರ್ಟಿಕ್ಯುಲಿಟಿಸ್, ಮೆನಿಂಜೈಟಿಸ್ ಸೋಂಕುಗಳುಂಟಾಗುವ ಸಾಧ್ಯತೆಗಳಿವೆ ಎಂದು ಅಧ್ಯಯನ ತಿಳಿಸುತ್ತದೆ.
ಬೆಂಗಳೂರಿನ ಸೆಂಟರ್ ಫಾರ್ ಸಯನ್ಸ್ ಸ್ಪಿರಿಚ್ವಾಲಿಟಿಯ ಮಕ್ಕಳ ವೈದ್ಯರಾದ ಡಾ. ಶಶಿಧರ ಗಂಗಯ್ಯ ಅವರ ಪ್ರಕಾರ `ಬೇಸಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಲರ್ಜಿ, ಉಸಿರಾಟದ ಕಾಯಿಲೆಗಳು, ವಾಯುಮಾಲಿನ್ಯದಿಂದ ಉಂಟಾಗುವ ಸೋಂಕುಗಳಿಂದ ರೋಗಿಗಳು ಬರುತ್ತಾರೆ’.

ಅವರ ಪ್ರಕಾರ ಈ ವಾತಾವರಣದಿಂದ ಮಕ್ಕಳು ಮತ್ತು ಮಹಿಳೆಯರು ಅತ್ಯಂತ ಹೆಚ್ಚು ಬಾಧಿತರಾಗುವವರು.