ಮಹಿಳೆಯರಿಗೆ ಯೋಗ ಹೇಗೆ, ಯಾಕೆ

ಮಹಿಳೆಯರಿಗೆ ಯೋಗ ಹೇಗೆ, ಯಾಕೆ

Kushalappa Gowda N   ¦    Mar 08, 2021 04:47:33 PM (IST)
ಮಹಿಳೆಯರಿಗೆ ಯೋಗ ಹೇಗೆ, ಯಾಕೆ

ಮಾರ್ಚ್ ೮ ವಿಶ್ವ ಮಹಿಳಾ ದಿನ, ಮಹಿಳೆಯರ ಸಾಧನೆ, ಯಶೋಗಾಥೆ ಇತರರಿಗೆ ಪ್ರೇರಣಾದಾಯಕವಾದ ಮಹಿಳೆಯರನ್ನು ಗುರುತಿಸುವ ದಿನ. ಪ್ರತಿ ಮನೆಯಲ್ಲಿಯೂ ಪ್ರತೀ ಮಹಿಳೆಯೂ ಇತರರಿಗೆ ಪ್ರೇರಣೆ, ಮನೆಯ ಮಹಿಳೆಯೊಬ್ಬರು ಕಲಿತರೆೆ ಶಾಲೆ ಒಂದು ತೆರೆದಂತೆ ಎಂದು ಹಿರಿಯರ ಮಾತು. ಮನೆಯ ಮಹಿಳೆ ಆರೋಗ್ಯವಾಗಿದ್ದರೆ, ಇಡೀ ಕುಟುಂಬಕ್ಕೆ ನೆಮ್ಮದಿ. ಮಹಿಳೆಯರ ಆರೋಗ್ಯವೆಂದರೆ ಕೇವಲ ದೈಹಿಕ ಕ್ಷಮತೆ ಮಾತ್ರವಲ್ಲದೆ, ಮಾನಸಿಕ ಸ್ಥಿತಿ, ತಾಳ್ಮೆ, ಸಹನೆ, ಸ್ಥಿತಪ್ರಜ್ಞೆ, ಎಲ್ಲವನ್ನು ಸಮಭಾವದಿಂದ ಸರಿದೂಗಿಸುವ ಬುದ್ಧಿವಂತಿಗೆ, ಭವಿಷ್ಯತಿನ ಚಿಂತನೆ ಸ್ಪಷ್ಟ ನಿರ್ಧಾರಗಳು ಇದು ಆರೋಗ್ಯದ ಭಾಗವೇ ಆಗುತ್ತದೆ. ಪ್ರತಿಯೊಂದು ಯಶಸ್ಸಿನ ಪುರುಷನ ಹಿಂದೆ ಮಹಿಳೆಯ ಪ್ರಾತವಿರುತ್ತದೆ ಎಂದು ಪ್ರತೀತಿ. ಇನ್ನು ಮಹಿಳೆಯರನ್ನು ದೇವತೆಗೆ ಸಮಾನ ಎಂದು ಪೂಜಿಸುವ ಪರಂಪರೆ ಆಧ್ಯಾತ್ಮಿಕ ಚಿಂತನೆ ಮತ್ತು ಆಚರಣೆ. ಮನೆಯ ಸಮೃದ್ಧಿಗೆ ಪೂರಕವಾದಂತೆ ಮಹಿಳೆಯರನ್ನು ಲಕ್ಷ್ಮಿಗೆ ಹೋಲಿಸಲಾಗಿದೆ. ದೈಹಿಕ ಕ್ಷಮತೆ, ಮಾನಸಿಕ ಸ್ಥಿತ ಪ್ರಜ್ಞೆ, ಆಧ್ಯಾತ್ಮಿಕ ಅನುಭೂತಿ ಹೊಂದಿದ ಮಹಿಳೆಯರಿಂದ ಮನೆಯು ಸಂಪತ್ತಾಗಬಹುದು. ಇಂತಹ ಸಂಪತ್ತನ್ನು ಹೊಂದಲು ಇರುವ ಒಂದು ಸಾಧನೆಯೇ ಯೋಗ. ಯೋಗ ಪ್ರಪಂಚಕ್ಕೆ ಭಾರತ ಕೊಟ್ಟ ಅದ್ಭುತ ವಿದ್ಯೆ. ಜಾತಿ, ಧರ್ಮ, ಲಿಂಗ, ದೇಶ ಎಂಬ ಭೇದವಿಲ್ಲದೆ ಎಲ್ಲರೂ ಅಭ್ಯಾಸ ಮಾಡಬಹುದಾದ ಯೋಗವು ಇಂದು ವಿಶ್ವಮಾನ್ಯತೆ ಪಡೆದಿರುವುದು ಯೋಗದ ಆಳ ಮತ್ತು ಅರಿವಿನ ಮಹತ್ವವನ್ನು ಸಾರುತ್ತದೆ. ಭಾರತದ ಋಷಿ ಪರಂಪರೆಯಲ್ಲಿಯೂ ಹಲವಾರು ಮಹಿಳಾ ಸಾಧಕಿಯಲ್ಲಿದ್ದಾರೆ ಎಂಬುವುದು ಗಮನಾರ್ಹ. “ಯೋಗಿನಿ” ಸಾಧಕರೆಂದು ಯೋಗ ಗ್ರಂಥಗಳು ಉಲ್ಲೇಖಿಸುತ್ತವೆ. ಮಹಿಳೆಯರಿಗೆ ಯೋಗದ ಪ್ರಯೋಜನಗಳನ್ನು ಹಲವಾರು  ಶಾಸ್ತ್ರೀಯ ಗ್ರಂಥಗಳಲ್ಲಿ ವಿಮರ್ಶಿಸಲಾಗಿದೆ. ಗರ್ಭಾವಸ್ಥೆಯಿಂದ ಜೀವನದ ಕೊನೆಯ ದಿನದವರೆಗೆ ಯೋಗದ ಪ್ರಸ್ತುತತೆಯನ್ನು ಹಠಯೋಗ ಪ್ರದೀಪಿಕಾ ಯೋಗ ಗ್ರಂಥದಲ್ಲಿ ವಿವರಿಸಲಾಗಿದೆ. ಆಧುನಿಕ ವಿಜ್ಙಾನವು ಗರ್ಭಾವಸ್ಥೆಯಲ್ಲಿ ಯೋಗದ ಪ್ರಯೋಜನವೇನು, ಮರಣಶಯ್ಯೆಯಲ್ಲಿರುವಾಗ ಯೋಗದ ಅಗತ್ಯವೇನು ಎಂಬುವುದನ್ನು ವಿವರಿಸುತ್ತದೆ. ಉದಾಹರಣೆಗೆ ಯೋಗ ನಿದ್ರಾಸನ ಭಂಗಿಯೂ ತಾಯಿಯ ಗರ್ಭದಲ್ಲಿ ಮಗು ಇರುವ ಸ್ಥಿತಿಯನ್ನು ಹೋಲುವ ವಿನ್ಯಾಸವಾಗಿ ಮೂಡಿಬಂದರೆ, ಶವಾಸನವು ಮರಣ ಭಯವನ್ನು ಹೋಗಲಾಡಿಸುವ ವಿನ್ಯಾಸವಾಗಿದೆ.

ಸಾಧನಾ ಮಹಿಳೆಯರಿಗೆ ಯೋಗ:

ಯಾರು ಸಮಾಜದಲ್ಲಿ ಸಾಧಕರಾಗಿ ಗುರುತಿಸಲ್ಪಡುವರೋ ಅವರ ಹಿಂದೆ ಇರುತ್ತೆ ಜೀವನ ಶೈಲಿ. ಯೋಗವೆಂದರೆ ಜೀವನ ಶೈಲಿ. “ತಪಸ್ಸಿನ” ರೀತಿಯಲ್ಲಿ ತಮ್ಮ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಮಾತ್ರ ಅವರ ಕಾರ್ಯ ಸಾಧನೆಯಾಗುತ್ತದೆ. ದೈಹಿಕ ಕ್ಷಮತೆ, ಮಾನಸಿಕ ಸ್ಥಿರತೆ, ಆಧ್ಯಾತ್ಮಿಕ ಅನುಗ್ರಹದಿಂದ ಸಾಧನೆ ಸಾಧ್ಯವಾಗುವುದು. ಎಲ್ಲಾ ಸಾಧನೆಗೂ ದೇಹ ಒಂದು ಸಾಧನವಾಗುತ್ತದೆ. ದೈಹಿಕ ಆರೋಗ್ಯ ಕಾಪಾಡಲು ಯೋಗಾಭ್ಯಾಸದ ಶುದ್ಧೀಕರಣ ಕ್ರಿಯೆ, ಯೋಗಾಸನಗಳು, ಬಂಧ, ಮುದ್ರಾಗಳು ಸಹಕಾರಿ. ಮಾನಸಿಕ ಸ್ಥಿರತೆಯನ್ನು ಹೊಂದಲು ಪ್ರಾಣಾಯಾಮ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಧ್ಯಾನದ ಸಾಧನೆ ಆಧ್ಯಾತ್ಮಿಕ ಅನುಭವವಾಗಿ, ಸರ್ವರನ್ನು ಸಮಾನರನ್ನಾಗಿ ಸ್ವೀಕರಿಸುವ ಮಾನವ ಪ್ರಜ್ಞೆಯನ್ನು ನೀಡುತ್ತದೆ. ಒಟ್ಟಿನಲ್ಲಿ ದೈಹಿಕ ಕ್ಷಮನೆ, ಮಾನಸಿಕ ಆರೋಗ್ಯ, ಭಾವನಾತ್ಮಕ ಸ್ವಸ್ಥತೆ ಹಾಗೂ ಅಧ್ಯಾತ್ಮಿಕ ಪ್ರೇರಣಿ ಸಾಧನೆಗೆ ಪೂರಕವಾಗಬಲ್ಲದು.

ಸೌಂದರ್ಯ ಪ್ರಜ್ಞೆಗೆ ಯೋಗ:

ಮಹಿಳೆಯರು ಸೌಂದರ್ಯ ಪ್ರಿಯರು, ದಿನದ ಒಂದಷ್ಟು ಸಮಯ ತಮ್ಮ ಸೌಂದರ್ಯವನ್ನು ನಿರ್ವಹಿಸಲು ಮೀಸಲಿಡುವುದು ದಿನದ ದಿನಚರಿ, ಹಿರಿವಯಸ್ಸಿನಲ್ಲಿಯೂ ನವ ಯುವತಿಯರಂತೆ ಕಾಣಬೇಕು ಎಂಬ ಬಯಕೆ ಸಹಜವಾದ್ದುದೆ. ಪ್ರಪಂಚದ ಒಂದು ದೊಡ್ಡ ಉದ್ಯಮದಲ್ಲಿ “ಬ್ಯುಟಿಷನ್” ಹಾಗೂ “ಸೌಂದರ್ಯ ವರ್ಧಕ ಉತ್ಪನ್ನಗಳು” ಎಂಬುವುದು ಗಮನಾರ್ಹ. ಇಂತಹ ಸೌಂದರ್ಯ ಪ್ರಜ್ಞೆಗೆ ಯೋಗವು ಒಂದು ಸಾಧನವಾಗಬಲ್ಲದು. ಎರಡು ರೀತಿಯ ಸೌಂದರ್ಯ ಕಾಣಬಹುದು. ಒಂದು ಆಂತರಿಕ ಸೌಂದರ್ಯ ತಾಳ್ಮೆ, ಸಹನೆ, ಸಹಾನುಭೂತಿ, ಮಮಕಾರ, ಪ್ರೀತಿ, ವಾತ್ಸಲ್ಯ ಇತ್ಯಾದಿ ಗುಣಗಳು ಒಂದು ಸೌಂದರ್ಯವಾದರೆ, ಬಾಹ್ಯ ಸೌಂದರ್ಯವೆಂದರೆ, ದೇಹದ ಮೈಕಟ್ಟು, ಮುಖದ ಹೊಳಪು, ತಲೆಯ ಕೂದಲು ಕಪ್ಪಾಗಿರುವುದು, ದೇಹದ ಅಂಗಾಂಗಗಳು, ಮಾಂಸಖಂಡಗಳು ಇತ್ಯಾದಿಗಳ ಕ್ಷಮತೆಯೂ ಸೌಂದರ್ಯದ ಭಾಗವಾಗುತ್ತದೆ. ನಿತ್ಯ ಸೂರ್ಯ ನಮಸ್ಕಾರ ಮಾಡುವುದು, ಹಲವಾರು ಯೋಗಾಸನಗಳನ್ನು ನಿತ್ಯ ಅಭ್ಯಾಸ ಮಾಡಿದರೆ, ದೇಹದ ಮಾಂಸಖAಡಗಳು ಸದೃಢವಾಗಿದ್ದು, ಮುಖಚರ್ಯೆ ಹೊಳಪಿನಿಂದ ಕೂಡಿದ್ದು, ಅಂಗಾAಗಗಳ ಸುಸ್ಥಿತಿಯಲ್ಲಿರುವ ಮೂಲಕ ಸೌಂದರ್ಯಪ್ರಜ್ಞೆ ಯನ್ನು ಜೀವನದ ಕೊನೆಯ ದಿನದವರೆಗೂ ಖರ್ಚಿಲ್ಲದೆ ಕಾಪಾಡಿಕೊಳ್ಳಬಹುದು.

ಉದ್ಯೋಗಸ್ಥ ಮಹಿಳೆಯರಿಗೆ ಯೋಗ:

ಗೃಹಿಣಿಯರಿಂದ ಪ್ರಾರಂಭವಾಗಿ ಉನ್ನತ ಅಧಿಕಾರಿಣಿಯರಾಗಿ ಮಹಿಳೆಯರನ್ನು ಉದ್ಯೋಗಸ್ಥರೇ. ಇಂತಹ ಮಹಿಳೆಯರು ಮೂರು ರೀತಿಯ ಒತ್ತಡದಲ್ಲಿರುತ್ತಾರೆ. ಒಂದನೇ ಕುಟುಂಬದ ಜವಾಬ್ದಾರಿ, ಎರಡನೇ ಕೆಲಸದ ನಿರ್ವಹಣೆ, ಮೂರನೆಯದ್ದು ಆರೋಗ್ಯ ನಿರ್ವಹಣೆ ಈ ಮೂರು ವಿಷಯವನ್ನು ಕೌಶಲ್ಯಯುಕ್ತವಾಗಿ ನಿರ್ವಹಿಸಿದಾಗ ಮಹಿಳೆಯರು ಸಾರ್ಥಕವಾಗಿ ಬದುಕಬಲ್ಲರು. ಇದನ್ನೇ ಯೋಗ ಕರ್ಮಸು ಕೌಶಲಂ ಎಂದು ಹೇಳಿರುವುದು. ನಿತ್ಯ ಯೋಗಾಭ್ಯಾಸದ ಅನುಷ್ಠಾನ ಮಾಡಿದಾಗ ಮಹಿಳೆಯರು ಉದ್ಯೋಗದೊಂದಿಗೆ ತಮ್ಮ ಆರೋಗ್ಯ ಕಾಪಾಡುವುದರೊಟ್ಟಿಗೆ, ಸಾಂಸಾರಿಕ ಜವಾಬ್ದಾರಿಯನ್ನು ನಿರ್ವಹಿಸಬಲ್ಲರು. ದಿನದ ೨೪ ಗಂಟೆಯಲ್ಲಿ ಒಂದು ಗಂಟೆ ತಮಗೋಸ್ಕರ ಮೀಸಲಿಟ್ಟು, ಯೋಗಾಭ್ಯಾಸ ಮಾಡಿದರೆ ಮಹಿಳೆಯರು, ಆರೋಗ್ಯಕರವಾದ, ನೆಮ್ಮದಿಯ, ಆತ್ಮಸಂತೃಪ್ತಿಯ ಜೀವನವನ್ನು ಸಾಗಿಸಬಹುದು ಎಂಬುದು ವಾಸ್ತವ ಸತ್ಯವಾಗಿದೆ.

ಮಾನಸಿಕ ಆರೋಗ್ಯ, ಆತಂಕ, ಖನ್ನತೆಗೆ ಯೋಗ ಪರಿಹಾರ:
ಮಾನಸಿಕ ಆರೋಗ್ಯ ಪ್ರತಿಯೊಬ್ಬರ ಬಯಕೆ, ಒತ್ತಡ, ಆತಂಕ, ಖನ್ನತೆಗಳು ಆಸಕ್ತಿ ಕಡಿಮೆಯಾಗುವುದು. ಸಾಮಾನ್ಯವಾಗಿ ಮಹಿಳೆಯನ್ನು ಕಾಡುವ ಮಾನಸಿಕ ಸಮಸ್ಯೆಗಳಾಗಿವೆ. ಪ್ರಾರಂಭದ ಹಂತದಲ್ಲಿಯೇ ಈ ಸಮಸ್ಯೆಗಳಿಗೆ ಪರಿಹಾರತ್ಮಕವಾಗಿ ಯೋಗಾಭ್ಯಾಸ ಮಾಡಿದರೆ ಮಾನಸಿಕ ಆರೋಗ್ಯವನ್ನು ಸರಿಪಡಿಸಿಕೊಳ್ಳಬಹುದು. ಮುಟ್ಟಿನ ಸಮಯದಲ್ಲಿ, ಗರ್ಭಿಣಿಯಾಗಿರುವಾಗ, ಋತುಚಕ್ರ ನಿಲ್ಲುವ ಸಮಯದಲ್ಲಿ ಕೌಟುಂಬಿಕ ಕಲಹದ ಸಂದರ್ಭದಲ್ಲಿ, ಮಾನಸಿಕ ಆರೋಗ್ಯ ಸಮಸ್ಯೆ ಬರಬಹುದು.

ಗರ್ಭಿಣಿಯರಿಗೆ ಯೋಗ ಹೇಗೆ ಪ್ರಯೋಜನ:

ಗರ್ಭಿಣಿಯರಿಗೆ ಯೋಗಾಭ್ಯಾಸ ಅನುಷ್ಠಾನ ಮಾಡಿದರೆ ತಾಯಿ ಮತ್ತು ಮಗುವಿನ ಆರೋಗ್ಯ ಸಹಕಾರಿಯಗುವುದು. ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆ ಎಂದರೆ ವಾಂತಿ, ಜೀರ್ಣಾಂಗ ಸಂಬAಧಿ ಸಮಸ್ಯೆ, ಬೆನ್ನುನೋವು, ಡಯಾಬಿಟೀಸ್, ರಕ್ತದೊತ್ತಡ, ಖಿನ್ನತೆ ಇತ್ಯಾದಿ. ಇಂತಹ ಸಮಸ್ಯೆಗಳಿಗೆ ಹೆಚ್ಚು ಔಷಧಿ ಸೇವಿಸದೆಯೇ ಪ್ರಕೃತಿದತ್ತ ಪರಿಹಾರ ಕಂಡುಕೊAಡರೆ ಮಗುವಿನ ಆರೋಗ್ಯಕ್ಕೆ ತುಂಬಾ ಉಪಯುಕ್ತ. ಸರಳವಾದ ಆಯ್ದ ಯೋಗಾಸನಗಳು, ಪ್ರಾಣಾಯಾಮ, ಧ್ಯಾನದ ಅಭ್ಯಾಸ ಗರ್ಭಿಣಿಯರಿಗೆ ತುಂಬಾ ಪ್ರಯೋಜನ ನೀಡುವುದರೊಂದಿಗೆ ಮಗುವಿನ ಬೆಳವಣಿಗೆಗೂ ಸಹಕಾರಿಯಾಗುತ್ತದೆ. ಸೌಂದರ್ಯ ಪ್ರಜ್ಞೆ ಬೆಳೆಸಿಕೊಳ್ಳುವ ಮಹಿಳೆ ನಿತ್ಯ ಯೋಗಾಸನ ಅಭ್ಯಾಸ ಮಾಡಿದರೆ ದೇಹ ತೂಕ ನಿರ್ವಹಿಸುವುದರೊಂದಿಗೆ ಸಾಮಾನ್ಯ ಹೆರಿಗೆಯನ್ನು ಹೊಂದಬಹುದು. ಪ್ರಸವ ನಂತರ ಮಹಿಳೆಯರಿಗೆ ಕಾಡುವ ಬಹು ದೊಡ್ಡ ಸಮಸ್ಯೆ ಎಂದರೆ ದೇಹತೂಕ ಹೆಚ್ಚಾಗುವುದು ಮತ್ತು ಹೊಟ್ಟೆಯ ಸುತ್ತ ಗೆರೆಗಳು ಮೂಡುವುದು. ಈ ಎರಡು ಸಮಸ್ಯೆಗಳಿಗೂ ಯೋಗ ಪರಿಹಾರ ನೀಡಬಲ್ಲದು. ಅಷ್ಠಾಂಗ ಯೋಗದ ಯಮ, ನಿಯಮದ ಅನುಷ್ಠಾನ ಮಗುವಿನಲ್ಲಿ ಧನಾತ್ಮಕ ಗುಣಗಳನ್ನು ಮೂಡಿಸಬಲ್ಲದು.

ಮಹಿಳೆಯರಲ್ಲಿ ಕಂಡುಬರುವ ಮತ್ತೊಂದು ಸಮಸ್ಯೆಯೇ ಮೆನೋಫಾಸ್. ಇದು ೫೦ ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಕಂಡುಬರುವ ಸಮಸ್ಯೆಯಾಗಿದ್ದು ದೇಹದ ತಾಪಮಾನ ವ್ಯತ್ಯಾಸವಾಗುವುದು, ಶೀತ, ತಲೆನೋವು ಕಾಣಿಸುವುದು, ರಾತ್ರಿ ಬೆವರುವುದು, ದೇಹ ತೂಕ ಹೆಚ್ಚಾಗುವುದು, ಜೀರ್ಣಾಂಗ ಕ್ರಿಯೆ ನಿಧಾನವಾಗುವುದು, ಮಾನಸಿಕ ವೇದನೆಗಳು ಉಂಟಾಗುವುದು. ಈ ಲಕ್ಷಣಗಳಿಗೆ ಕ್ರಮಬದ್ಧವಾದ ಆಹಾರ ಮತ್ತು ಯೋಗಾಭ್ಯಾಸ ಒಂದು ಪರಿಣಾಮಕಾರಿ ಚಿಕಿತ್ಸಾ ಕ್ರಮವಾಗಿದೆ. ಒಟ್ಟಿನಲ್ಲಿ ಮಹಿಳೆಯರ ಆರೋಗ್ಯವು ಕುಟುಂಬದ ಆರೋಗ್ಯಕ್ಕೆ ಮಾದರಿ.

ಮಹಿಳೆಯರಿಗೆ ಯೋಗದ ಉದ್ಯೋಗ ಅವಕಾಶ:
ಯೋಗ ವೃತ್ತಿ ಇಂದಿನ ಬಹುಬೇಡಿಕೆಯ ಒಂದು ಉದ್ಯೋಗವಾಗಿದೆ. ಇಂದು ಯೋಗ ವಿಜ್ಞಾನದ ಅಧ್ಯಯನ ಪೂರೈಸಿಕೊಂಡು ಯೋಗ ಶಿಕ್ಷಕಿ, ಯೋಗ ತರಬೇತುದಾರರು, ಯೋಗ ಚಿಕಿತ್ಸಕಿಯರು, ಯೋಗ ಉಪನ್ಯಾಸಕಿಯರು, ಯೋಗ ಸಂಶೋಧಕರಾಗಿ ಮಹಿಳೆಯರು ತೊಡಗಿಸಿಕೊಂಡಿರುವುದು ಗಮನಾರ್ಹ ಸಂಗತಿ. ಅತೀ ಕಡಿಮೆ ಬಂಡವಾಳದಲ್ಲಿ ತಮ್ಮದೇ ಸ್ವಂತ ಯೋಗ ತರಬೇತಿ ಯಾ ಚಿಕಿತ್ಸಾ ಕೇಂದ್ರ ಪ್ರಾರಂಭಿಸಿ ಉತ್ತಮ ಸಂಪಾದನೆ ಮಾಡಬಹುದಾದ ಒಂದು ವೃತ್ತಿ ಯೋಗವಾಗಿದೆ. ಒಂದು ನಿಗದಿತ ಸಮಯವನ್ನು ಯೋಗ ವೃತ್ತಿಗೆ ಮೀಸಲು ಇಟ್ಟು ಉಳಿದ ಸಮಯದಲ್ಲಿ ತಮ್ಮ ಇತರ ಜವಾಬ್ದಾರಿಯನ್ನು ಪೂರೈಸಿಕೊಳ್ಳಬಹುದು. ಒಟ್ಟಿನಲ್ಲಿ ಯೋಗ ವೃತ್ತಿಯೂ ಮಹಿಳೆಯರಿಗೆ ವೈಯಕ್ತಿಕ ಮತ್ತು ಸಂಪಾದನೆಗೆ ಒಂದು ಉಪಯುಕ್ತ ಕ್ಷೇತ್ರವಾಗಿದೆ.

ಮಹಿಳೆಯರಿಗೆ ಚಿಕಿತ್ಸಾತ್ಮಕ ರೂಪದಲ್ಲಿ ಯೋಗ :
ರಕ್ತಹೀನತೆ, ಅಧಿಕ ತೂಕ, ಅಧಿಕ ರಕ್ತದೊತ್ತಡ, ಮುಟ್ಟಿನ ಸಮಸ್ಯೆ, ಗರ್ಭಾಶಯದ ಫೈಬ್ರಾಯ್ದಳು “ಪಿಸಿಓಎಸ್” ಹಲವಾರು ಬಗೆಯ ಕ್ಯಾನ್ಸರ್‌ಗಳು, ಪಾಲಿಸಿಸ್ಟಕ್ ಅಂಡಾಶಯ ಕಾಯಿಲೆ (Pಅಔಆ)ಮಹಿಳೆಯನ್ನು ಕಾಡುವ ಸಾಮಾನ್ಯ ಖಾಯಿಲೆಗಳು, ಇಂತಹ ಹಲವಾರು ಖಾಯಿಲೆಗಳಿಗೆ ಜೀವನ ಪೂರ್ತಿ ಔಷಧಿ ಸೇವಿಸುವ ಅನಿವಾರ್ಯತೆಗೂ ಒಳಗಾಗಬೇಕಾಗುತ್ತದೆ. ಅಂತಹ ಆರೋಗ್ಯ ಸಮಸ್ಯೆಗೆ ಪ್ರಕೃತ್ತಿದತ್ತ ಪರಿಹಾರವಾಗಿ ಆಯ್ದ ಯೋಗಾಭ್ಯಾಸವು ಪರಿಣಾಯಕಾರಿಯಾದ ಪ್ರಯೋಜನ ಪಡೆಯಬಹುದಾಗಿದೆ.

ಮಹಿಳೆಯರಿಗೆ ಸೂಕ್ತವಾದ ಯೋಗಾಭ್ಯಾಸಗಳು:
ಕಪಾಲಬಾತಿ, ಸ್ವಸ್ತಿಕಾಸನ, ವಜ್ರ‍್ರಾಸನ ಪಶ್ವಿಮೊತ್ತಾನಸನ, ವೃಕ್ಷಾಸನ, ತ್ರಿಕೋನಾಸನ, ಪಾರ್ಶ್ವಕೋನಾಸನ, ವೀರಭದ್ರಾಸನ ೨, ಪವನಮುಕ್ತಾಸನ, ಧನುರಾಸನ, ಜಾನುಶಿರ್ಷಾಸನ, ಭದ್ರಾಸನ, ಬದ್ಧಕೋನಾಸನ, ಉಪವಿಷ್ಠಕೋನಾಸನ, ಕುರ್ಮಾಸನ ಉಷ್ಠಾಸನ, ಉಪನಪದಕೋನಾಸನ, ಸರ್ವಾಂಗಾಸನ, ಮತ್ಸ್ಯಾಸನ , ಹಲಾಸನ, ಕರ್ಣಪಿಡಾಸನ, ಉತ್ತಾನಾ ವೇದಾಸನ, ಶವಾಸನ, ಉಜ್ಜಾಯಿ ಪ್ರಾಣಾಯಾಮ, ಅನುಲೋಮ-ವಿಲೋಮ ಪ್ರಣಾಯಾಮ, ಭ್ರಮಾರಿ ಪ್ರಣಾಯಾಮ, ಯೋಗ ನಿದ್ರಾ ಧ್ಯಾನ.