ಚರ್ಮದ ಕಾಂತಿಗೆ ಮನೆ ಮದ್ದು

ಚರ್ಮದ ಕಾಂತಿಗೆ ಮನೆ ಮದ್ದು

YK   ¦    Sep 20, 2019 04:30:37 PM (IST)
ಚರ್ಮದ ಕಾಂತಿಗೆ ಮನೆ ಮದ್ದು

ಇಂದಿನ ಯುವಕ ಯುವತಿಯರು ಹೆಚ್ಚಾಗಿ ತಮ್ಮ ಚರ್ಮದ ಕಾಂತಿಯ ಬಗ್ಗೆ ಕಾಳಹಿ ವಹಿಸಿ ಸೌಂದರ್ಯ ವರ್ಧಕ ಕ್ರೀಮ್ ಗಳನ್ನು ಬಳಸುತ್ತಾರೆ. ಆದರೆ ಇದು ಕೆಲವರಿಗೆ ಸರಿಹೋಗುವುದಿಲ್ಲ. ದುಪ್ಪಟ್ಟು ಹಣ ಕೊಟ್ಟು ಕ್ರೀಮ್ ಗಳನ್ನು ಬಳಸುವುದಕ್ಕಿಂತ ಮನೆಯಲ್ಲಿಯೇ ನಮಗೆ ಬೇಕಾದ ರೀತಿಯಲ್ಲಿ, ಚರ್ಮಗೂ ಆರೋಗ್ಯಕರಾವದ ಲೇಪನಗಳನ್ನು ತಯಾರಿಸಬಹುದು. 

 ಕೆಳಗಿನವುಗಳಿಂದ ಚರ್ಮದ ಕಾಂತಿಗೆ ಉತ್ತಮ ಫಲತಾಂಶವನ್ನು ಪಡೆಯಬಹುದು. 

ಅರಿಶಿನ

ಕಡಲೆಹಿಟ್ಟು

ಶುದ್ಧ ತೆಂಗಿನ ಎಣ್ಣೆ

ಹಾಲು

ಲೋಳೆರಸ

ಬೇಕಿಂಗ್ ಸೋಡಾ

ಲೆಂಬೆರಸ

ಪಪ್ಪಾಯ

ಮುಳ್ಳುಸೌತೆ

ಜೇನುತುಪ್ಪ

ರೋಸ್ ವಾಟರ್ ಕ್ಯಾರೆಟ್ ಜ್ಯೂಸ್

ಅರಿಶಿನದಿಂದಾಗುವ ಪ್ರಯೋಜನಗಳು:

ಅರಿಶಿನ ½ ಚಮಚ

4ಚಮಚ ಕಡಲೆ ಹಿಟ್ಟು

ಹಾಲು ಅಥವಾ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ, 15ರಿಂದ 20ನಿಮಿಷ ಬಿಟ್ಟು ಶುದ್ಧ ನೀರಿನಲ್ಲಿ ತೊಳೆಯಿರಿ. ಪ್ರತಿನಿತ್ಯ ಹೀಗೆ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ. 

ಶುದ್ಧ ತೆಂಗಿನ ಎಣ್ಣೆ

ಮಲಗುವ ಮುನ್ನಾ ಪ್ರತಿ ನಿತ್ಯ ಶುದ್ಧ ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ಮುಖಕ್ಕೆ ಕಾಂತಿಯನ್ನು ನೀಡುತ್ತದೆ.