ತಂಪು ಪಾನೀಯ ಕುಡಿಯುವಿರಾದರೆ ಎಚ್ಚರ!

ತಂಪು ಪಾನೀಯ ಕುಡಿಯುವಿರಾದರೆ ಎಚ್ಚರ!

HSA   ¦    Jun 10, 2020 02:02:48 PM (IST)
ತಂಪು ಪಾನೀಯ ಕುಡಿಯುವಿರಾದರೆ ಎಚ್ಚರ!

ಸೋಡಾ ಸಹಿತ ಕೆಲವು ತಂಪು ಪಾನೀಯಗಳು ಇಂದಿನ ದಿನಗಳಲ್ಲಿ ದೈನಂದಿನ ಜೀವನದ ಒಂದು ಪಾನೀಯವಾಗಿ ಹೋಗಿದೆ. ಸೋಡಾದಿಂದ ಆರೋಗ್ಯದ ಮೇಲೆ ಆಗುವಂತಹ ಕೆಲವು ದುಷ್ಪರಿಣಾಮಗಳ ಬಗ್ಗೆ ತಿಳಿಯಿರಿ.

 

ಫಾಸ್ಪರಸ್ ಆಮ್ಲ

ತಂಪು ಪಾನೀಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫಾಸ್ಪರಸ್ ಅಂಶವಿದೆ, ಕ್ಯಾಲ್ಸಿಯಂ ಹೀರಿಕೊಳ್ಳಲು ಇದು ತಡೆಯಾಗುವುದು. ಅಸ್ಥಿರಂಧ್ರತೆ, ದಂತಕುಳಿ ಮತ್ತು ಮೂಳೆಗಳು ಮೆತ್ತಗಾಗಲು ಸಮಸ್ಯೆಗಳು ಇದರಿಂದ ಬರಬಹುದು.

 

ಕೆಫಿನ್

ತಂಪು ಪಾನೀಯಗಳಲ್ಲಿ ಕೆಫಿನ್ ಅಂಶವಿದ್ದು, ಇದು ಕ್ಯಾನ್ಸರ್, ಸ್ತನದಲ್ಲಿನ ಗಡ್ಡೆ, ಅನಿಯಮಿತ ಹೃದಯ ಬಡಿತ, ಅಧಿಕ ರಕ್ತದೊತ್ತಡ ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗುವುದು.

 

ನೀರು

ಸೋಡಾದಲ್ಲಿ ಬಳಸುವಂತಹ ನೀರು ನಳ್ಳಿ ನೀರು ಆಗಿದೆ ಮತ್ತು ಇದರಲ್ಲಿ ಕ್ಲೋರಿನ್, ಫ್ಲೋರೈಡ್ ಮತ್ತು ಇತರ ಕೆಲವು ಲೋಹಗಳು ಸೇರಿಕೊಂಡಿರುವುದು.