ಮಾನಸಿಕ ಒತ್ತಡವನ್ನು ನಿಭಾಯಿಸುವಲ್ಲಿ ಅನುಸರಿಸಬೇಕಾದ ಕ್ರಮಗಳು

ಮಾನಸಿಕ ಒತ್ತಡವನ್ನು ನಿಭಾಯಿಸುವಲ್ಲಿ ಅನುಸರಿಸಬೇಕಾದ ಕ್ರಮಗಳು

YK   ¦    Apr 04, 2020 03:15:58 PM (IST)
ಮಾನಸಿಕ ಒತ್ತಡವನ್ನು ನಿಭಾಯಿಸುವಲ್ಲಿ ಅನುಸರಿಸಬೇಕಾದ ಕ್ರಮಗಳು

ಕೋಲಾರ: ಕೊರೋನಾ-೧೯ ಎಂಬ ಸಾಂಕ್ರಾಮಿಕ ರೋಗ ಎಲ್ಲೆಡೆ ಭಯ ಆತಂಕ ಹಾಗೂ ಪ್ರತಿ ಒಬ್ಬರಲ್ಲಿಯೂ ಮಾನಸಿಕ ಯಾತನೆ ಸೃಷ್ಟಿಸುತ್ತಿದೆ. ಮಕ್ಕಳು, ವಯಸ್ಕರು, ವೃದ್ದರು ಎಲ್ಲಾ ವಯೋಮಾನದವರಲ್ಲಿಯೂ ಇದು ಆವರಿಸಿದೆ.

ಈಗಾಗಲೇ 130 ಕೋಟಿ ಭಾರತಿಯರಲ್ಲಿ 7.5% ರಷ್ಟು ಜನರಿಗೆ ಮಾನಸಿಕ ತೊಂದರೆ ಇದ್ದು, ಅಂದಾಜಿನ ಪ್ರಾಕಾರ ಕೋವಿಡ್-19 ಪರಿಸ್ಥಿತಿಯಲ್ಲಿ ಈ ಪ್ರಮಾಣ 20% ಹೆಚ್ಚಾಗುವ ಸಾಧ್ಯತೆ ಇರುತ್ತದೆ.  ಅಂದರೆ 20 ಕೋಟಿ ಜನರು ಮಾನಸಿಕ ತೊಂದರೆಗೆ ಒಳಗಾಗುವ ಸಾಧ್ಯತೆ ಇರುತ್ತದೆ.

ಪ್ರತಿ ಒಬ್ಬ ವ್ಯಕ್ತಿಯು ಒತ್ತಡದ ಸನ್ನಿವೇಷಗಳಿಗೆ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಬಹುದು. ಅದು ಮಕ್ಕಳು ವಯಸ್ಕರು, ವೃದ್ದರು, ಕೋವಿಡ್-19 ಸೋಂಕಿತರಿಗಾಗಿ ಕೆಲಸ ಮಾಡುವ ವೈದ್ಯರು, ಆರೋಗ್ಯ ಸಹಾಯಕರಾಗಿರಬಹುದು ಅಥವಾ ಮೊದಲೇ ಮಾನಸಿಕ ತೊಂದರೆಯಿಂದ ಬಳಲುತ್ತಿರುವ ವ್ಯಕ್ತಿಗಳು ಹಾಗೂ ಮದ್ಯ, ಮಾದಕ ವ್ಯಸನ ರೋಗಿಗಳಾಗಿರಬಹುದು.

ಮಾನಸಿಕ ಯಾತನೆ ಅಥವಾ ಒತ್ತಡದ ಲಕ್ಷಣಗಳು :- ನಿದ್ರೆಯಲ್ಲಿ ಏರುಪೇರು, ಹಸಿವಿಲ್ಲದಿರುವುದು, ತನಗೆ ಹಾಗೂ ತನ್ನ ಪ್ರೀತಿ ಪಾತ್ರರಿಗೆ ಕೊರೋನಾ ಸೊಂಕು ಬರಬಹುದೆಂಬ ಆತಂಕ, ಅನಿರೀಕ್ಷಿತ ಸ್ಥಿತಿಗಳ ಬಗ್ಗೆ ಚಿಂತನೆ, ಒಂಟಿತನ, ಬೇಜಾರು, ತನ್ನ ಆರ್ಥಿಕ ಪರಿಸ್ಥಿತಿ ಹಾಗೂ ಉದ್ಯೋಗ ಭದ್ರತೆಯ ಬಗ್ಗೆ ಯೋಚನೆ ಆತ್ಮಹತ್ಯೆ ಯೋಚನೆ.

ಮದ್ಯ ಮತ್ತು ಮಾದಕ ವ್ಯಸನಗಳಲ್ಲಿ ಕಂಡುಬರುವ ಲಕ್ಷಣಗಳು :- ಕೈಕಾಲು ನಡುಕ, ನಿದ್ರಾ ಹೀನತೆ, ವಿಚಿತ್ರ ವರ್ತನೆ, ಅನುಮಾನ ಪಡುವುದು. ಹೀಗೆ ಕೋವಿಡ್-19 ಬರೀ ಒಂದು ಈಟu ಜ್ವರ ಅಷ್ಟೆಯಲ್ಲಾ, ಮಾನಸಿಕವಾಗಿ ಒಬ್ಬ ವ್ಯಕ್ತಿಯನ್ನು ಸಂಪೂರ್ಣವಾಗಿ ಕುಗ್ಗಿಸಬಹುದು. ನಮ್ಮ ದೈಹಿಕ ಆರೋಗ್ಯ ಎಷ್ಟು ಮುಖ್ಯವೊ ಮಾನಸಿಕ ಆರೋಗ್ಯಕ್ಕೂ ನಾವು ಈ ಸಂದರ್ಭದಲ್ಲಿ ಅಷ್ಟೇ ಪ್ರಾಮುಖ್ಯತೆ ನೀಡಬೇಕಾಗಿದೆ. 

ಒತ್ತಡ ನಿವಾರಣೆಗೆ ಅನುಸರಿಸಬೇಕಾದ ಕ್ರಮಗಳು : ಇಡೀ ದಿನ ನಕಾರಾತ್ಮಕ ಸುದ್ದಿಗಳು ಹಾಗೂ ವದಂತಿಗಳಿಗೆ ಕಿವಿಗೊಡದಿರುವುದು, ಪ್ರತಿ ದಿನ ವ್ಯಾಯಾಮ, ಐದು ನಿಮಿಷ ಧ್ಯಾನ, ಸಮತೋಲನ ಆಹಾರ ತಿನ್ನುವುದು, ಈ ಪರಿಸ್ಥಿತಿ ತಾತ್ಕಾಲಿಕವೆಂಬ ತರ್ಕ ಬದ್ದ ಯೋಚನೆ.

   ಈ ರೀತಿ ಮಾನಸಿಕ ಒತ್ತಡವನ್ನು ತಡೆಯುವುದರಲ್ಲಿ ಯಾವುದೇ ಸಂದೇಹವಿರುವುದಿಲ್ಲ.“ಕೋವಿಡ್-19” ಸಾರ್ವಜನಿಕ ಆರೋಗ್ಯ ಸಮಸ್ಯೆ ಪ್ರತೀ ಒಬ್ಬ ವ್ಯಕ್ತಿಯು ಜವಾಬ್ದಾರಿಯುತವಾಗಿ ವರ್ತಿಸಬೇಕಾಗಿರುತ್ತದೆ. ಇದಕ್ಕೆ ನಿರ್ಧಿಷ್ಠ ಔಷಧಿ ಇರುವುದಿಲ್ಲ ಆದರೆ ಹರಡುವಿಕೆಯನ್ನು ತಡೆಗಟ್ಟಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ವಿಜಯ್ ಕುಮಾರ್ ಅವರು ತಿಳಿಸಿದ್ದಾರೆ.