ನಿಮಗಿಷ್ಟವಾದ ಬಿಸ್ಕಿಟ್ ಆರೋಗ್ಯಕ್ಕೆ ಎಷ್ಟು ಒಳ್ಳೆಯದು?

ನಿಮಗಿಷ್ಟವಾದ ಬಿಸ್ಕಿಟ್ ಆರೋಗ್ಯಕ್ಕೆ ಎಷ್ಟು ಒಳ್ಳೆಯದು?

HSA   ¦    May 14, 2020 02:03:41 PM (IST)
ನಿಮಗಿಷ್ಟವಾದ ಬಿಸ್ಕಿಟ್ ಆರೋಗ್ಯಕ್ಕೆ ಎಷ್ಟು ಒಳ್ಳೆಯದು?

ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಪ್ರತಿಯೊಬ್ಬರು ಬಿಸ್ಕಿಟ್ ಪ್ರಿಯರು. ಆದರೆ ಈ ಬಿಸ್ಕಿಟ್ ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಕೆಟ್ಟದು ಎನ್ನುವ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ.

ಗೋಧಿ ಹಿಟ್ಟಿನಿಂದ ತಯಾರಿಸುವ ಬಿಸ್ಕಿಟ್ ಗಳಲ್ಲಿ ಸೋಡಿಯಂ ಬೈಕಾರ್ಬೊನೇಟ್, ಅಮೋನಿಯಂ ಬೈಕಾರ್ಬೊನೇಟ್, ಮಾಲಿಕ್ ಆಮ್ಲ ಮತ್ತು ಟಾರ್ಟಾರಿಕ್ ಆಮ್ಲ, ತರಕಾರಿ ತೈಲ, ಹಾಲಿನ ಹುಡಿ, ಸಕ್ಕರೆ ಮತ್ತು ಅಡುಗೆ ಸೋಡಾವಿದೆ. ಇಲ್ಲಿ ಅಡುಗೆ ಸೋಡಾವು ನಮ್ಮ ಜೀರ್ಣಕ್ರಿಯೆಗೆ ನೆರವಾಗದಿರಲು ಪ್ರಮುಖ ಕಾರಣವೆಂದರೆ ಇಲ್ಲಿ ಬಿಸ್ಕಿಟ್ ತಯಾರಿಸುವ ವೇಳೆ ಬಿಸಿಯಿಂದಾಗಿ ಅಡುಗೆ ಸೋಡಾದ ಅಂಶಗಳು ನಾಶವಾಗುವುದು.

 

ಬಿಸ್ಕಿಟ್ ನಲ್ಲಿ ಏನಿದೆ? ಏನಿಲ್ಲ?

ನೀವು ದೊಡ್ಡ ಪ್ರಮಾಣದಲ್ಲಿ ಡೈಜೆಸ್ಟಿವ್ ಬಿಸ್ಕಿಟ್ ತಿನ್ನುತ್ತಲಿದ್ದರೆ ಅದು ಅಪಾಯಕಾರಿ. ಯಾಕೆಂದರೆ ಎರಡು ಡೈಜೆಸ್ಟಿವ್ ಬಿಸ್ಕಿಟ್ ನಲ್ಲಿ 150 ಕ್ಯಾಲರಿ, 20 ಕಾರ್ಬೋಹೈಡ್ರೇಟ್ಸ್, 6 ಗ್ರಾಂ ಕೊಬ್ಬು, 5 ಗ್ರಾಂ ಸಕ್ಕರೆ, 2 ಗ್ರಾಂ ಪ್ರೋಟೀನ್, 1 ಗ್ರಾಂ ನಾರಿನಾಂಶ ಮತ್ತು 0.1 ಗ್ರಾಂ ಸೋಡಿಯಂ ಇದೆ. ಒಂದು ಬಿಸ್ಕಿಟ್ ನಲ್ಲಿ 70 ಕ್ಯಾಲರಿ ಇದ್ದು, ಇದು ಕಡಿಮೆ ಪೋಷಕಾಂಶದೊಂಧಿಗೆ ಹೆಚ್ಚಿನ ಶಕ್ತಿ ನೀಡುವುದು.

 

ಬಿಸ್ಕಿಟ್ ನಿಂದ ಆರೋಗ್ಯಕ್ಕೆ ಲಾಭವಿದೆಯಾ?

ಇದರಲ್ಲಿ ಸಕ್ಕರೆ ಮಟ್ಟವು ಅತ್ಯಧಿಕವಾಗಿದೆ. ಬಿಸ್ಕಿಟ್ ನಲ್ಲಿ ಅನಾರೋಗ್ಯಕಾರಿ ಕೊಬ್ಬು, ಕ್ಯಾಲರಿ ಇದೆ. ಬಿಸ್ಕಿಟ್ ನಲ್ಲಿ ಸಣ್ಣ ಪ್ರಮಾಣದ ಪ್ರೋಟೀನ್ ಮತ್ತು ನಾರಿನಾಂಶವಿದೆ ಮತ್ತು ಇದು ದೈನಂದಿನ ಬಳಕೆಗೆ ಬೇಕಾಗುವಷ್ಟಿಲ್ಲ ಮತ್ತು ಇದು ಆರೋಗ್ಯಕಾರಿ ಸಮತೋಲಿತ ಆಹಾರ ಕ್ರಮಕ್ಕೆ ಸಾಕಾಗಲ್ಲ.

ಇದರಲ್ಲಿ ಅತ್ಯಧಿಕ ಮಟ್ಟದ ಸೋಡಿಯಂ ಇದೆ. ನಾಲ್ಕು ಡೈಜೆಸ್ಟಿವ್ ಬಿಸ್ಕಿಟ್ ತಿಂದರೆ ಅದು ಒಂದು ಪ್ಯಾಕೆಟ್ ಬಟಾಟೆ ಚಿಪ್ಸ್ ತಿಂದಂತೆ.

ಅಧಿಕ ರಕ್ತದೊತ್ತಡದ ಸಮಸ್ಯೆ ಇರುವ ಜನರು ಇಂತಹ ಆಹಾರ ಸೇವನೆ ಮಾಡಬಾರದು ಎಂದು ಸಲಹೆ ನೀಡಲಾಗುತ್ತದೆ.

ಬಿಸ್ಕಿಟ್ ನಲ್ಲಿ ಖನಿಜಾಂಶ ಮತ್ತು ವಿಟಮಿನ್ ಗಳು ನಗಣ್ಯವಾಗಿದೆ. ಹಾಲನ್ನು ಇದನ್ನು ಸೇರಿಸಿದರೂ ಅದರಿಂದ ಯಾವುದೇ ರೂಪದಲ್ಲೂ ಕ್ಯಾಲ್ಸಿಯಂ ಲಭ್ಯವಾಗದು.