ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ

ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ

LK   ¦    Nov 21, 2020 09:39:51 AM (IST)
ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ

ಇತರರಂತೆ ಹಸನ್ಮುಖಿಗಳಾಗಿರದೆ ಸದಾ ಯೋಚನೆ ಮಾಡುವುದು, ಏಕಾಂಗಿಯಾಗಿ, ಚಿಂತಾಕ್ರಾಂತರಾಗಿ ಇರುವುದು ಮಾನಸಿಕ ಕಾಯಿಲೆಗೆ ಒಳಗಾದವರ ಲಕ್ಷಣಗಳಾಗಿದೆ. ಹೀಗಾಗಿ ಇಂತಹವರ ಬಗ್ಗೆ ನಿಗಾ ವಹಿಸುವುದು ಅಗತ್ಯವಾಗಿದೆ.

ಇತ್ತೀಚೆಗಿನ ಬೆಳವಣಿಗೆಯಲ್ಲಿ ಮನುಷ್ಯ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದೆ. ಏಕೆಂದರೆ ಮಾನವನ ಆರೋಗ್ಯದ ಸ್ಥಿತಿ ಯಾವಾಗಲೂ ಒಂದೇ ರೀತಿ ಇರದೆ ಉದ್ವೇಗಕ್ಕೆ ಒಳಗಾದಾಗ ಅವನ ವರ್ತನೆ ಬೇರೆ ರೀತಿ ಯಾಗಿರುತ್ತದೆ, ಸಂತೋಷದ ಸಮಯದಲ್ಲಿ ಅವನ ನಡವಳಿಕೆಗಳು ತೀರಾ ಭಿನ್ನ ರೀತಿಯಲ್ಲಿ ಇರುತ್ತವೆ. ಹೀಗೆ ಚಿತ್ತ ಚಂಚಲತೆ, ಚಿತ್ತ ವಿಕಲತೆ, ಮದ್ಯವ್ಯಸನ, ಬುದ್ದಿಮಾಂದ್ಯತೆ ಮಂಕುತನ, ವಿಪರೀತ ಭಯಬೀಳುವುದು, ಕಳ್ಳತನ, ನಡುವಳಿಕೆ ದೋಷಗಳು, ಅಪರಾಧ, ಮನೋದೈಹಿಕ ಬೇನೆಗಳು, ವ್ಯಕ್ತಿದೋಷಗಳು, ಮಿದುಳಿನ ಅಂಗದೋಷದ ಕಾಯಿಲೆಗಳು ಮುಂತಾದ ಕಾರಣಗಳಿಂದಾಗಿ ಸಾಮಾನ್ಯವಾಗಿ ಮಾನವನಿಗೆ ಮಾನಸಿಕ ಕಾಯಿಲೆಗಳು ಬರುತ್ತವೆ. ಅಂತÀಹ ಸಂದರ್ಭದಲ್ಲಿ ಧÀೃತಿಗೆಡದೇ ಹತ್ತಿರದ ಆಸ್ಪತ್ರೆಗೆ ತೆರಳಿ ಸೂಕ್ತ ಕೌನ್ಸಿಲಿಂಗ್ ಅಥವಾ ಚಿಕಿತ್ಸೆ ಪಡೆಯುವುದು ಅಗತ್ಯವಾಗಿದೆ.

ಹಾಗಾದರೆ ಮಾನಸಿಕ ಕಾಯಿಲೆಗಳನ್ನು ತಡೆಗಟ್ಟುವ ವಿಧಾನಗಳು ಯಾವುದು ಎಂಬ ಪ್ರಶ್ನೆಯೂ ಕಾಡದಿರದು.

ಗರ್ಭಿಣಿ ಸ್ತ್ರೀಯರು ಆರೋಗ್ಯವಂತ ಮಗುವಿಗೆ ಜನ್ಮ ನೀಡುವುದರ ಮೂಲಕ ಮಗುವಿನ ಮನಸ್ಸು ಆರೋಗ್ಯಕರವಾಗಿರುತ್ತದೆ. ತಲೆಗೆ ಪೆಟ್ಟುಬಿದ್ದು ಮೆದುಳಿಗೆ ಆಗಬಹುದಾದ ಅನಾಹುತವನ್ನು ತಪ್ಪಿಸುವುದು, ದೈಹಿಕ ಆರೋಗ್ಯ ಕಾಣಿಸಿಕೊಂಡಾಗ ಕೂಡಲೇ ವೈದ್ಯರನ್ನು ಭೇಟಿಮಾಡಿ ಸೂಕ್ತ ಚಿಕಿತ್ಸೆ ಪಡೆಯುವುದು. ಎಲ್ಲರೊಂದಿಗೆ ಉತ್ತಮವಾದ ಸಂಬಂಧ ಹೊಂದಿದಾಗ ಆ ವ್ಯಕ್ತಿಗೆ ಸಮಾಜದ ಆಗುಹೋಗುಗಳ ಬಗ್ಗೆ ಅರಿವು ಮೂಡುತ್ತದೆ. ಆದರ್ಶ ಬದುಕು ಬದುಕುವ ಶೈಲಿ, ಜೀವನದ ಮೌಲ್ಯಗಳನ್ನು ಪಾಲಿಸಿ ಮಾನವೀಯತೆಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು, ಪ್ರತಿದಿನ ನಮ್ಮ ದಿನಚರಿಯ ನಡುವೆ ವಿಶ್ರಾಂತಿ ನೀಡಬೇಕು. ಮಾನಸಿಕ ಒತ್ತಡಕ್ಕೆ ಒಳಗಾಗದೇ ಎಂತÀಹ ಪರಿಸ್ಥಿತಿ ಎದುರಾದರೂ ನಿಭಾಯಿಸುವ ಧೆÉೈರ್ಯ ಅವರಲ್ಲಿ ಬರಬೇಕು ಮೂಢನಂಬಿಕೆಗಳಿಗೆ ಹೆದರದೇ ಆಧುನಿಕ ಚಿಂತನೆಗಳ ಮೂಲಕ ಜೀವನ ಸಾಗಿಸುವುದು ಅಗತ್ಯವಾಗಿದೆ.