ಅಧಿಕ ರಕ್ತದೊತ್ತಡ ನಿವಾರಿಸಲು ಕೆಲವು ವಿಧಾನಗಳು

ಅಧಿಕ ರಕ್ತದೊತ್ತಡ ನಿವಾರಿಸಲು ಕೆಲವು ವಿಧಾನಗಳು

HSA   ¦    Dec 23, 2019 03:01:59 PM (IST)
ಅಧಿಕ ರಕ್ತದೊತ್ತಡ ನಿವಾರಿಸಲು ಕೆಲವು ವಿಧಾನಗಳು

ಒತ್ತಡದ ಜೀವನದಿಂದಾಗಿ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ದೇಹದ ಆರೋಗ್ಯದ ಮೇಲೆ ಪರಿಣಾಮ ಉಂಟಾಗಿದೆ. ಅದರಲ್ಲೂ ಒತ್ತಡದಿಂದಾಗಿ ಬರುವಂತಹ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ನಿವಾರಿಸಲು ಕೆಲವೊಂದು ವಿಧಾನಗಳನ್ನು ಇಲ್ಲಿ ತಿಳಿಸಿಕೊಡಲಿದ್ದೇವೆ.

ನಿಯಮಿತ ವ್ಯಾಯಾಮ

ವ್ಯಾಯಾಮವು ನಮ್ಮ ದೇಹದ ಆರೋಗ್ಯ ಕಾಪಾಡುವುದು ಎಂದು ಪ್ರತಿಯೊಬ್ಬರಿಗೂ ತಿಳಿದಿರುವಂತಹ ವಿಚಾರ. ಹೀಗಾಗಿ ಅಧಿಕ ರಕ್ತದೊತ್ತಡ ಸಮಸ್ಯೆ ಕಡಿಮೆ ಮಾಡಲು ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಇದರಿಂದ ಅಧಿಕ ರಕ್ತದೊತ್ತಡ ಕಡಿಮೆ ಆಗುವುದು ಮತ್ತು ಹೃದಯವು ಆರೋಗ್ಯವಾಗಿರುವುದು.

ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿ

ನಾವು ತಿನ್ನುವಂತಹ ಆಹಾರವು ದೇಹದ ಮೇಲೆ ಪರಿಣಾಮ ಬೀರುವುದು. ಹೀಗಾಗಿ ತಿನ್ನುವ ಆಹಾರವು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಲ್ಲದು. ಕೆಲವೊಂದು ಆಹಾರಗಳನ್ನು ನಿಮ್ಮ ಆಹಾರ ಕ್ರಮಕ್ಕೆ ಸೇರಿಸಿಕೊಂಡರೆ ಆಗ ರಕ್ತದೊತ್ತಡವನ್ನು ನೈಸರ್ಗಿಕವಾಗಿ ನಿಯಂತ್ರಿಸಬಹುದು. ಮೊಸರು, ಹಸಿರೆಲೆ ತರಕಾರಿಗಳು, ಬಾಳೆಹಣ್ಣು, ಓಟ್ಸ್, ಬೆರ್ರಿಗಳು, ಬೀಜಗಳು, ಆಲಿವ್ ತೈಲ ಮತ್ತು ನಾರಿನಾಂಶ ಅಧಿಕವಾಗಿರುವ ಆಹಾರಗಳು.

ಒತ್ತಡ ನಿಭಾಯಿಸಿ

ಒತ್ತಡವು ಹಲವಾರು ವಿಧದಿಂದ ನಮ್ಮ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ದೈನಂದಿನ ಕೆಲವೊಂದು ಚಟುವಟಿಕೆಗಳಿಂದಲೂ ಒತ್ತಡವು ಹೆಚ್ಚಾಗುವುದು. ದಿನವಿಡಿ ಒತ್ತಡ ಹೆಚ್ಚಾಗುತ್ತಲಿದ್ದರೆ ನೀವು ರಕ್ತದೊತ್ತಡ ಕಡಿಮೆ ಮಾಡಲು ಕೆಲವು ಬದಲಾವಣೆ ಮಾಡಿಕೊಳ್ಳಿ. ವ್ಯಾಯಾಮ, ಯೋಗ ಮತ್ತು ಧ್ಯಾನದಿಂದ ಒತ್ತಡ ನಿವಾರಣೆ ಮಾಡಬಹುದು.

 ಧೂಮಪಾನ ತ್ಯಜಿಸಿ

ನಿಯಮಿತವಾಗಿ ಧೂಮಪಾನ ಮಾಡಿದರೆ ಅದರಿಂದ ರಕ್ತದೊತ್ತಡವು ಹೆಚ್ಚಾಗುವುದು. ನಿಯಮಿತವಾಗಿ ಧೂಮಪಾನ ಮಾಡುತ್ತಲಿದ್ದರೆ ಆಗ ನೀವು ಖಂಡಿತವಾಗಿಯೂ ಧೂಮಪಾನ ತ್ಯಜಿಸಬೇಕು. ನಿಮಗೆ ಸಾಧ್ಯವಾಗದೆ ಇದ್ದರೆ ಧೂಮಪಾನ ತ್ಯಜಿಸಲು ವೈದ್ಯರ ಸಲಹೆ ಪಡೆಯಿರಿ.