ಉತ್ರಾಣಿ ಗಿಡಗಳಲ್ಲಿ ಇದೆ ಅನೇಕ ಔಷಧೀಯ ಅಂಶಗಳು

ಉತ್ರಾಣಿ ಗಿಡಗಳಲ್ಲಿ ಇದೆ ಅನೇಕ ಔಷಧೀಯ ಅಂಶಗಳು

Megha R Sanadi   ¦    Sep 29, 2020 01:26:04 PM (IST)
ಉತ್ರಾಣಿ ಗಿಡಗಳಲ್ಲಿ ಇದೆ ಅನೇಕ ಔಷಧೀಯ ಅಂಶಗಳು

ಸಾಮಾನ್ಯವಾಗಿ ಗದ್ದೆಯಲ್ಲಿ ಕಳೆ ಗಿಡದಂತೆ ಕಾಣುವ ಕುರುಚಲು ಗಿಡ ಅದೆಷ್ಟೋ ರೀತಿಯ ಔಷಧಿ ಗುಣಗಳನ್ನು ಹೊಂದಿರುತ್ತದೆ. ಆದರೆ ಅದರ ಬಳಕೆ ಹಾಗೂ ಸರಿಯಾದ ಪ್ರಮಾಣದಲ್ಲಿ ಉಪಯೋಗಿಸುವ ಪ್ರೀತಿಯನ್ನು ಅರಿಯುವುದು ಅತಿ ಅಗತ್ಯ. ಇಂತಹದೇ ಒಂದು ಕುರುಚಲು ಗಿಡಗಳ ಸಾಲಿಗೆ ಸೇರುವ ಅಕಿರಾಂತಿಸ್ ಆಸ್ಪೆರ್ ಅಥವಾ ಉತ್ತರಾಣಿ ಗಿಡವು ಒಂದು.

ಹೌದು, ಇದು ನೋಡಲು ಕಳೆ ಗಿಡದಂತೆ ಕಂಡರು ಇದರಲ್ಲಿರುವ ಔಷಧೀಯ ಅಂಶಗಳು ಹಲವಾರು ಕಾಯಿಲೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಉತ್ತರಾಣಿ ಅಥವಾ ಉತ್ರಾಣಿ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಈ ಗಿಡ ನಿದ್ರಾಹೀನತೆ, ಮೂತ್ರ ವಿಸರ್ಜನೆಗೆ ಸಂಬಂಧಪಟ್ಟ ಸಮಸ್ಯೆಗಳು, ರಕ್ತಹೀನತೆಯ ಸಮಸ್ಯೆ ಹಾಗೂ ಗಾಯ ವಾಸಿಯಾಗಲು ಇದು ಅತಿ ಸಹಾಯಕಾರಿಯಾಗಿದೆ.

ಉತ್ತರಾಣಿ ಗಿಡದ ಸದುಪಯೋಗವನ್ನು ಬಲ್ಲವರು ಮಾತ್ರ ಈ ಗಿಡವನ್ನು ಉಪಯೋಗಿಸಬಲ್ಲ. ಹಳ್ಳಿ ಮದ್ದಿನಂತೆ ಉಪಯೋಗಿಸಲ್ಪಡುವ ಈ ಗಿಡ ಹಳ್ಳಿಗರ ಮನೆಯಲ್ಲಿ ದಿನನಿತ್ಯದ ಅಡುಗೆಗೆ, ಕಷಾಯಕ್ಕೆ ಉಪಯೋಗಿಸಲ್ಪಡುತ್ತದೆ. ಈ ಗಿಡದ ಎಲೆಗಳಿಂದ ತಂಬುಳಿ, ಚಟ್ನಿ ಹಾಗೂ ಅನೇಕ ಪದಾರ್ಥಗಳನ್ನು ಮಾಡಲಾಗುತ್ತದೆ.

ಉತ್ತರಾಣಿಯನ್ನು ಯಾವುದೇ ಕಾರಣಕ್ಕೂ ಗರ್ಭಿಣಿ ಸ್ತ್ರೀಯರಿಗೆ ಕೊಡಲಾಗುವುದಿಲ್ಲ. ಒಂದು ಪಕ್ಷ ಇದನ್ನು ನೀಡಿದ್ದಾರೆ ಗರ್ಭಪಾತ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿಯೇ ಮನೆಯ ಹಿರಿಯರು ಇಂತಹ ವಿಷಯಗಳಲ್ಲಿ ಅತೀ ಜಾಗರೂಕತೆ ವಹಿಸುತ್ತಾರೆ.

ಹೀಗೆ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ನೀಡುವ ನಮ್ಮ ಮನೆ ಅಥವಾ ಗದ್ದೆಯಲ್ಲಿ ಬೆಳೆಯುವ ಕಳೆಗಿಡ ಪೂಜನೀಯ ಹೌದು. ಅದನ್ನು ಹೋಮ- ಹವನ ಹಾಗೂ ದೀಪಾವಳಿ ಹಬ್ಬಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಆದರೆ ಈ ಗಿಡಗಳಲ್ಲಿ ಎರಡು ರೀತಿಯ ವಿಧಗಳಿವೆ. ಒಂದು ಬಳ್ಳಿಯ ರೀತಿಯಲ್ಲಿ ಬೆಳೆದರೆ ಇನ್ನೊಂದು ಕುರುಚುಲು ಗಿಡವಾಗಿ ಎಲ್ಲೆಡೆ ಹಬ್ಬುತ್ತಿದೆ. ಬೆಳ್ಳಿ ಉತ್ರಾಣಿ ಅತಿ ಹೆಚ್ಚು ಔಷಧೀಯ ಅಂಶಗಳನ್ನು ಹೊಂದಿದೆ